ಕಾರೊಂದು ಪೊಲೀಸ್ರ ಹೆದ್ದಾರಿ ಗಸ್ತು ವಾಹನಕ್ಕೆ ಡಿಕ್ಕಿಹೊಡೆದ ಬೀಕರ ಘಟನೆ
ಶಿಗ್ಗಾವಿ,14 :ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಶಾಲಿಮಾರ ಹೋಟೆಲ್ ಬಳಿ ಕಾರೊಂದು ಚಾಲಕನ ನಿಯಂತ್ರಣತಪ್ಪಿ ಪಲ್ಟಿ ಹೊಡೆಯುತ್ತಾ ಬಂದು ಪೊಲೀಸ್ರ ಹೆದ್ದಾರಿ ಗಸ್ತು ವಾಹನಕ್ಕೆ ಡಿಕ್ಕಿಹೊಡೆದ ಬೀಕರ ಘಟನೆ ಜರುಗಿದ್ದು ಅದೃಷ್ಟವಶಾತ ಯಾವುದೇ ಪ್ರಾಣಹಾನಿಯಾಗಿಲ್ಲಾ.
ಶಿಗ್ಗಾವಿ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಬ್ಬಳ್ಳಿ ಕಡೆಯಿಂದ ಬಂದ ಬಂಕಾಪುರದ ನರೇಗಲ್ ಕುಟುಂಬಕ್ಕೆ ಸೇರಿದ ಕೆಏ27ಎನ್7537 ಎಂಬ ಕಾರು ಚಾಲಕ ಡಾಽ ಅರೂಣ ನರೇಗಲ ನಿಯಂತ್ರಣತಪ್ಪಿ ಶಿಗ್ಗಾವಿ ಕಡೆಯ ಸರ್ವಿಸ್ರಸ್ತೆಗೆ ಉರಳುತ್ತಾ ಬಂದು, ಸರ್ವಿಸ್ರಸ್ತೆಯಲ್ಲಿ ನಿಂತಿದ್ದ ಕೆಏ27ಜಿ573 ನಂಬರಿನ ಪೊಲೀಸ್ರ ಹೆದ್ದಾರಿ ಗಸ್ತು ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು ನರೇಗಲ ಕುಟುಂಬಕ್ಕೆ ಸೇರಿದ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟಗಾಯಗಳಾಗಿವೆ, ಸ್ಥಳದಲ್ಲಿ ನಿಂತಿದ್ದ ಸಾರ್ವಜನಿಕರು ಸವಾರರನ್ನು ಕಾರಿಂದ ಹೊರಗೆಳೆದು ರಕ್ಷಿಸಿದ್ದು, ಗಾಯಾಳು ನೀಲಕಂಟಪ್ಪಾ ನರೇಗಲ ಅವರಿಗೆ ಸೊಂಟಕ್ಕೆ ಪೆಟ್ಟಾಗಿರುವುದಾಗಿ ತಿಳಿದು ಬಂದಿದ್ದು, ಅವರನ್ನು ಸೇರಿದಂತೆ ಉಳಿದ ಮೂವರು ಶಿಗ್ಗಾವಿಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹುಬ್ಬಳ್ಳಿಕ ಡೆಯಿಂದ ಬಂದ ಕಾರಿನಲ್ಲಿ ಬಂಕಾಪುರದ ನರೇಗಲ ಕುಟುಂಬದ ಡಾಽ ಅರೂಣ ನರೇಗಲ, ಮಲ್ಲಿಕಾರ್ಜುನ ನರೇಗಲ, ಗುರುಶಾಂತಪ್ಪಾ ನರೇಗಲ, ಮತ್ತು ಡಾಽ ಅರೂಣ ಅವರ ತಂದೆ ನೀಲಕಂಟಪ್ಪಾ ನರೇಗಲ ಇದ್ದು ಬಂಕಾಪುರದಲ್ಲಿ ಉದ್ಘಾಟಿಸಬೇಕಿದ್ದ ಆಸ್ಪತ್ರೆಯ ಆಮಂತ್ರಣ ಪತ್ರಗಳನ್ನು ಹುಬ್ಬಳ್ಳಿಯ ಆಪ್ತರಿಗೆ ನೀಡಿ ಮರಳುತ್ತಿದ್ದರು ಎಂದು ತಿಳಿದು ಬಂದಿದೆ.
ಪೊಲೀಸ್ರ ಹೆದ್ದಾರಿ ಗಸ್ತು ವಾಹನ ಸಿಬ್ಬಂದಿ ಅಪಘಾತದ ಸ್ಥಳದಿಂದ ನೂರು ಮೀಟರ ಮುಂದಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಖುರ್ಸಾಪುರ ಅಂಡರ್ ಪಾಸ್ ಕಾಮಗಾರಿಯಿಂದ ರಸ್ತೆಯನ್ನು ಕಿರಿಗೊಳಿಸಿ ಒಂದೆರಸ್ತೆಯಲ್ಲಿ ಎರಡು ಬದಿಯ ವಾಹನಗಳನ್ನು ಬಿಡುತ್ತಿರುವುದರಿಂದ ವಾಹನದಿಂದ ಹೊರಗಿಳಿದು ಟ್ರಾಪಿಕ್ ನಿಯಂತ್ರಿಸುತ್ತಿದ್ದುದ್ದರಿಂದ ಪೊಲೀಸ್ ಸಿಬ್ಬಂದಿಗಳಿಗೆ ಯಾವುದೇಅಪಾಯ ಆಗಿಲ್ಲಾ.
ಸ್ಥಳಕ್ಕೆ ಆಗಮಿಸಿದ್ದ ಎಸ್ಪಿ ಅಂಶುಕುಮಾರ, ಡಿವಾಯ್ಎಸ್ಪಿ ಮಂಜುನಾಥ ಜಿ, ಪಿಎಸ್ಐಗಳಾದ ಉಮಾ ಪಾಟೀಲ, ಚಂದ್ರಶೇಖರಆರ್ವಿ, ಮತ್ತು ಶಿಗ್ಗಾವಿ ಪೊಲೀಸ್ಠಾಣಾ ಸಿಬ್ಬಂದಿಗಳು ಸ್ಥಳ ಪರೀಸೀಲಿಸಿ ತನಿಖೆ ಆರಂಭಿಸಿದ್ದಾರೆ.
ರಸ್ತೆ ಸಾರಿಗೆ ನಿಯಮಗಳನ್ನು ಪಾಲಿಸುವಂತೆ, ಮತ್ತು ನಿಯಂತ್ರಿತ ವೇಗದಲ್ಲಿ ವಾಹನಗಳನ್ನು ಚಲಾಯಿಸುವಂತೆ ಸಾರ್ವಜನಿಕರಲ್ಲಿ ಶಿಗ್ಗಾವಿ ಪೊಲೀಸ್ಠಾಣೆಯ ಸಿಬ್ಬಂಧಿಗಳು ಪ್ರತಿಕ್ಷಣಎಚ್ಚರಿಸುತ್ತಿದ್ದರೂಚಾಲಕರ ನಿರ್ಲಕ್ಷದಿಂದ ಅನೇಕ ಅಫಘಾತಗಳು ಶಿಗ್ಗಾವಿ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸುತ್ತಿವೆ. ಸಾರ್ವಜನಿಕರು ಜವಾದ್ಬಾರಿಯುತವಾಗಿ ತಮ್ಮ ವಾಹನಗಳನ್ನು ಚಲಾಯಿಸಬೇಕು.
ಉಮಾ ಪಾಟೀಲ
ಪಿಎಸ್ಐ ಶಿಗ್ಗಾವಿ ಠಾಣೆ.