ಅಥಣಿ

ಕಬ್ಬು ಕಡಿಯುವ ಕೂಲಿಕಾರರ ಮಕ್ಕಳಿಗೆ ಟೆಂಟ ಶಾಲೆ ಪ್ರಾರಂಭ

ಕಬ್ಬು ಕಡಿಯುವ ಕೂಲಿಕಾರರ ಮಕ್ಕಳಿಗೆ ಟೆಂಟ ಶಾಲೆ ಪ್ರಾರಂಭ

ಲೋಕದರ್ಶನ ವರದಿ

ಸಂಬರಗಿ 25: ಅಥಣಿ ಕ್ಷೇತ್ರ ಶಿಕ್ಷಣ ಅಧಿಕಾರಿ ಬಸವರಾಜ ತಳವಾರ ಇವರ ನೇತೃತ್ವದಲ್ಲಿ ಗ್ರಾಮೀಣ ಭಾಗದಲ್ಲಿ ಕಬ್ಬು ಕಡಿಯಲು ಬಂದ ಕೂಲಿಕಾರರ ಮಕ್ಕಳಿಗೆ ಶಿಕ್ಷಣ ಪಡೆಯಲು ಅನುಕೂಲ ಮಾಡಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರ ವಹಿಸಿದ್ದಾರೆ.

ಸಂಬರಗಿ, ಅನಂತಪೂರ, ಜಂಬಗಿ ಸೇರಿದಂತೆ ಹಲವಾರು

ಗ್ರಾಮಕ್ಕೆ ಭೇಟ್ಟಿ ನೀಡಿ ಕಬ್ಬು ಕಡಿಯಲು ಬಂದ ಕೂಲಿಕಾರರ ಮಕ್ಕಳಿಗೆ ಟೆಂಟ ಶಾಲೆ

ಪ್ರಾರಂಭಿಸಿ ಅನಂತಪೂರ ಬಾರಿ ಗಡ್ಡಿ ಹಾಗೂ ಅಜುರ ಗ್ರಾಮದ ತೋಟದ ವಸ್ತಿಯಲ್ಲಿ ಶಾಲೆ ಪ್ರಾರಂಭ ಮಾಡಿ ಅನುಕೂಲವಾಗಿದೆ. ಗಡಿ ಭಾಗದ ಪ್ರತಿ ಗ್ರಾಮದಲ್ಲಿ ಸರ್ವೇ  ಮಾಡಿ ಅಗತ್ಯವಿದ್ದ ಶಾಲೆಯನ್ನು ಆರಂಭಿಸಲಾಗುತ್ತಿದೆ.  ಶಿಕ್ಷಕ ಸಂಯೋಜಕ ಎಸ್ ಪಿ ಸನದಿ, ಸಿಆರ್ಸಿ ಗಂಗಾಧರ ಕೋಷ್ಟಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

        ಈ ಕುರಿತು ಕ್ಷೇತ್ರ ಶಿಕ್ಷಣ ಅಧಿಕಾರಿ ಬಸವರಾಜ ತಳವಾರ ಇವರನ್ನು ಸಂರ್ಪಕಿಸಿದಾಗ  ಕಬ್ಬು ಕಟಾವ ಮಾಡುವ ಕೂಲಿಕಾರ ಮಕ್ಕಳ ಸರ್ವೇಮಾಡಿ ಅವಶ್ಯ ಇದ್ದಲ್ಲಿ 4 ಟೆಂಟ ಶಾಲೆ ಪ್ರಾರಂಭ ಮಾಡಿವೆ ಎಂದು ಹೇಳಿದರು 

ಸುದ್ದಿ ಓದಿ