ಬಿಜೆಪಿ ಕಾರ್ಯಕರ್ತರಿಂದ ದೇವಸ್ಥಾನ ಸ್ವಚ್ಛತೆ
ರಾಮಮಂದಿರ ಪ್ರತಿಷ್ಠಾಪನೆಗೂ ಮುನ್ನ ದೇಶದ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನ
ಮಾಂಜರಿ ದಿ 19: ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ಪ್ರತಿಷ್ಠಾಪನೆಗೂ ಮುನ್ನ ದೇಶಾದ್ಯಂತ ಇರುವ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಚಿಕ್ಕೋಡಿಯ ಸಂಸದ ಅಣ್ಣ ಸಾಹೇಬ್ ಜೊಲ್ಲೆ ನೇತೃತ್ವದಲ್ಲಿ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ಸುಕ್ಷೇತ್ರ ವೀರಭದ್ರ ದೇವಸ್ಥಾನವನ್ನು ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಅಣ್ಣ ಸಾಹೇಬ್ ಜೊಲ್ಲೆ ಮಾತನಾಡಿ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ದೇವಸ್ಥಾನದಲ್ಲಿ ಜ. 22ರ ವರೆಗೆ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದರು. ಶ್ರೀರಾಮನ ಚಿತ್ರವಿರುವ ಭಗವಾ ಧ್ವಜಗಳನ್ನು ಪ್ರತಿಬೂತ್ ಗಳಲ್ಲಿರುವ ಮನೆಗಳಿಗೆ ವಿತರಿಸಲಾಗುತ್ತಿದ್ದು, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರತಿ ಮನೆಗಳ ಮೇಲೆ ಧ್ವಜ ಕಟ್ಟಲು ಕರೆ ನೀಡಿದ್ದು, ಅಂದು ಇಡೀ ಮತಕ್ಷೇತ್ರವು ಕೇಸರಿಮಯವಾಗಬೇಕು ಹಾಗೂ ಎಲ್ಲೆಡೆ ಶ್ರೀ ರಾಮನ ಜಪ ಆಗಬೇಕು ಎಂದು ಕಾರ್ಯಕರ್ತರಿಗೆ ಅವರು ಕರೆ ನೀಡಿದರು. ಸ
್ವಚ್ಛತಾ ಕಾರ್ಯದಲ್ಲಿ ಅಜಯ್ ಸೂರ್ಯವಂಶಿ ಅಮರ್ ಬೋರಗಾವೇ ರಾಹುಲ್ ದೇಸಾಯಿ ಮನೋಹರ್ ಮೋಹಿತೆ ಪ್ರಶಾಂತ್ ಉಮರಾನೆ ಸಂತೋಷ್ ಜೋಶಿ ದೀಲೀಪ್ ಪವಾರ್ ಮನೋಜ್ ಕಿಚಡಿ ಧೋಂಡಿರಾಮ ಬೆಡಗೇ ಮಹಾವೀರ ಮಂಗಸುಳೆ ಸಂಜಯ್ ಗಾಯಕವಾಡ ಮುಕುಂದ ಜಾದವ್ ಪ್ರಭಾಕರ್ ಪುಟಾಣಿ ರಮೇಶ್ ಮನೆ ರಾಜಾರಾಮ್ ಮನೆ ಪ್ರಕಾಶ್ ಮಿರ್ಜಿ ಸೇರಿದಂತೆ ಹಲವರಿದ್ದರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.