ಬಳ್ಳಾರಿ

ತೆಕ್ಕಲಕೋಟೆ:4.69 ಲಕ್ಷ ರೂಪಾಯಿಗಳ ಕುಡಿಯುವ ನೀರಿನ ಕ್ರಿಯಾ ಯೋಜನೆ ಶಾಸಕ ಬಿ ಎಂ ನಾಗರಾಜ್

ತೆಕ್ಕಲಕೋಟೆ:4.69 ಲಕ್ಷ ರೂಪಾಯಿಗಳ ಕುಡಿಯುವ ನೀರಿನ ಕ್ರಿಯಾ ಯೋಜನೆ ಶಾಸಕ ಬಿ ಎಂ ನಾಗರಾಜ್

ಸಿರುಗುಪ್ಪ-ತಾಲೂಕು ತೆಕ್ಕಲಕೋಟೆ ಪಟ್ಟಣದಲ್ಲಿ ಕುಡಿಯುವ ನೀರಿನ ತೊಂದರೆ ಹೆಚ್ಚಾಗಿದೆ ಪ್ರತಿ 10 ದಿನಗಳಿಗೆ ಒಮ್ಮೆ ನೀರು ಸರಬರಾಜು ಆಗುತ್ತಿರುವ ಹಿನ್ನೆಲೆಯಲ್ಲಿ  ಕ್ಷೇತ್ರದ ಶಾಸಕ ಬಿ ಎಂ ನಾಗರಾಜ್ ತೆಕ್ಕಲಕೋಟೆ ಪಟ್ಟಣ ಪಂಚಾಯತ್ ಕಾರ್ಯಾಲಯಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಬಗ್ಗೆ ಸದಸ್ಯರು ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದು   ತೆಕ್ಕಲಕೋಟೆ ಪಟ್ಟಣ ಪಂಚಾಯತ್ 2019-20 ನೇ ಸಾಲಿನ ಎಸ್ ಎಫ್ ಸಿ ಯೋಜನೆ ಅಡಿ ಕುಡಿಯುವ ನೀರಿಗೆ ಉಳಿತಾಯವಾದ ಅನುದಾನದ ಮೊತ್ತ 4.69 ಲಕ್ಷ ರೂಪಾಯಿಗಳಿಗೆ ಟಾಸ್ಕ್ ಫೋರ್ಸ್ ಕ್ರಿಯಾಯೋಜನೆ ತಯಾರಿಸಲಾಯಿತು ಪಟ್ಟಣ ಪಂಚಾಯತ್ ವ್ಯಾಪ್ತಿಯ 17, 18, 12  ಮತ್ತು 3ನೇ ವಾರ್ಡ್ ಗಳಲ್ಲಿನ ಕೊಳವೆ ಬಾವಿಗಳಿಗೆ  ರೀ ಬೋರ್ ಮಾಡಿಸುವರು ಮತ್ತು ಅವುಗಳಿಗೆ ಮೋಟಾರ್ ಸ್ಟಾರ್ಟರ್ ಹಾಗೂ ಬಿಡಿ ಭಾಗಗಳನ್ನು ಖರೀದಿಸುವಂತೆ ಕ್ರಿಯಾ ಯೋಜನೆಯಲ್ಲಿ ರೂಪಿಸಲಾಯಿತು ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ತಹಸಿಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ, ಪಟ್ಟಣ ಪಂಚಾಯತ್ ಕಿರಿಯ ಅಭಿಯಂತರರು ಸೇರಿದಂತೆ ಅನೇಕರು ಭಾಗವಹಿಸಿದ್ದರು .

ಸುದ್ದಿ ಓದಿ