ಮುಂದಗೋಡ

ಸಿಡಿ ಕಾಮಗಾರಿ ಸ್ಥಳಕ್ಕೆ ತಹಶೀಲ್ದಾರ ಶಂಕರ ಗೌಡಿ ಭೇಟಿ

ಸಿಡಿ ಕಾಮಗಾರಿ ಸ್ಥಳಕ್ಕೆ ತಹಶೀಲ್ದಾರ ಶಂಕರ ಗೌಡಿ ಭೇಟಿ

ಮುಂಡಗೋಡ 25:  ಪಟ್ಟಣದ ಬಂಕಾಪುರ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದ ಬಳಿ ನಿರ್ಮಾಣವಾಗುತ್ತಿರುವ ಸಿಡಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ತಹಶೀಲ್ದಾರ ಶಂಕರ ಗೌಡಿ ಮಂಗಳವಾರ ಭೇಟಿ ನೀಡಿ ಪರೀಶೀಲನೆ ನಡೆಸಿದರು. 

ಪ್ರತಿ ವರ್ಷ ಮಳೆಗಾಲದ ವೇಳೆ ಮಳೆ ನೀರು ಚರಂಡಿಗಳಲ್ಲಿ ಹರಿದು ಹೋಗದೇ ಬಂಕಾಪುರ ರಸ್ತೆಯ ರವಿ ಹೆಗಡೆ ಆಸ್ಪತ್ರೆಯಿಂದ ಕೆನರಾ(ಸಿಂಡಿಕೇಟ್) ಬ್ಯಾಂಕ್‌ವರೆಗೆ ರಸ್ತೆಯಲ್ಲಿಯೇ ನಿಂತು ಆ ಭಾಗದ ಜನರು ತುಂಬಾ ತೊಂದರೆ ಅನುಭವಿಸಬೇಕಾಗಿತ್ತು. ಪ.ಪಂ.ನಿಂದ ನಗರೋತ್ಥಾನ ಯೋಜನೆಯಡಿಯಲ್ಲಿ 50ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು ಕೆನರಾ(ಸಿಂಡಿಕೇಟ್) ಬ್ಯಾಂಕ್ ಎದುರು ಎರಡೂ ಬದಿಗಳಲ್ಲಿ ಡ್ರೇನ್ ನಿರ್ಮಾಣ, ಮುಚ್ಚಂಡಿ ಮನೆ ಬಳಿ ಒಂದು ಸಿಡಿ, ರೋಟರಿ ಶಾಲೆಯ ಕ್ರಾಸ್ ಬಳಿ ಒಂದು ಸಿಡಿ ಹಾಗೂ ಈಗ ನಿರ್ಮಾಣ ಮಾಡುತ್ತಿರುವ ಆಂಜನೇಯ ದೇವಸ್ಥಾನದ ಹತ್ತಿರ ಒಂದು ಸಿಡಿ ನಿರ್ಮಾಣ ಮಾಡಿ ಗಾಂಧಿ ನಗರದಿಂದ ಬಂಕಾಪುರ ರಸ್ತೆಯಲ್ಲಿ ಹರಿದು ಬರುವ ನೀರನ್ನು ಬಂಕಾಪುರ ರಸ್ತೆಯ ಕಡೆ ಹೋಗುವಂತೆ ಮಾಡುವುದು. ಹಂತ-ಹಂತವಾಗಿ ಇವೆಲ್ಲ ಸಿಡಿಗಳನ್ನು ಮಾಡಿ ಬಂಕಾಪುರ ರಸ್ತೆಯಲ್ಲಿ ನೀರು ನಿಲ್ಲದಂತೆ ಮಾಡಲು ಪ್ರಯತ್ನ ನಡೆಸಲಾಗುವುದು ಎಂದು ಪ.ಪಂ.ಕಿರಿಯ ಇಂಜಿನಿಯರ ಶಂಕರ ದಂಡಿನ ತಿಳಿಸಿದರು. ಈ ವೇಳೆ ಪ.ಪಂ.ಮುಖ್ಯಾಧಿಕಾರಿ ಚಂದ್ರಶೇಖರ ಬಿ. ಇದ್ದರು. 


ಸುದ್ದಿ ಓದಿ