ಶಿಕ್ಷಕರು ವಿದ್ಯಾರ್ಥಿಗಳಿಗೆ ಇಷ್ಟಪಟ್ಟು ವಿದ್ಯೆಯನ್ನು ಕಲಿಸಬೇಕು: ಅನುಸುಯಾ
ಲೋಕದರ್ಶನ ವರದಿ
ಶಿಗ್ಗಾವಿ 04: ಪಾಲಕರು ಕಷ್ಟ ಪಟ್ಟು ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆ, ಶಿಕ್ಷಕರು ವಿದ್ಯಾರ್ಥಿಗಳಿಗೆ ಇಷ್ಟಪಟ್ಟು ವಿದ್ಯೆಯನ್ನು ಕಲಿಸಬೇಕು, ಮಕ್ಕಳು ದೊಡ್ಡವರಾದ ಮೇಲೆ ಪಾಲಕರ ಕಷ್ಟ ಮತ್ತು ಶಿಕ್ಷರ ಮಾರ್ಗದರ್ಶನವನ್ನು ಸ್ಮರಿಸುತ್ತಾರೆಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿ.ಆರ್.ಪಿ ಅನುಸುಯಾ ಬಳ್ಳಾರಿ ಹೇಳಿದರು.
ಪಟ್ಟಣದ ಮಲ್ಲಪ್ಪಾ ಪುಟ್ಟಪ್ಪಾ ಮೊರಬದ ಶಿಕ್ಷಣ ಸಂಸ್ಥೆಯ ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿ ಗುರು ಪೂರ್ಣಿಮೆ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತಿದ್ದಾರೆ ಎಂದರೆ ಶಾಲೆಗಳಿಗೆ ಹೆಚ್ಚಿನ ಜವಾಬ್ದಾರಿನ್ನು ನೀಡುತ್ತಿದ್ದಾರೆ ಎಂಬುವುದನ್ನು ಶಿಕ್ಷರು ಅರಿತಿರಬೇಕು, ಪಾಲಕರ ಮತ್ತು ವಿದ್ಯಾರ್ಥಿಗಳು ಶಿಕ್ಷರನ್ನು ದೇವರಂತೆ ಕಾಣುತ್ತಿರುತ್ತಾರೆ. ಶಿಕ್ಷರ ದೃಷ್ಟಿಯಿಂದ ಯಾವ ಮಕ್ಕಳೂ ಹೆಚ್ಚಿಗೆ ಅಲ್ಲಾ ಯಾವ ಮಕ್ಕಳು ಕಡಿಮೆ ಅಲ್ಲಾ, ಸರಕಾರದ ಸುತ್ತೋಲೆಯ ಪ್ರಕಾರ ಎಲ್ಲ ವಿಷಯಗಳನ್ನು ಚೆನ್ನಾಗಿ ಹೇಳಿಕೊಡುವ ಮೂಲಕ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಉನ್ನತ ಮಟ್ಟಕ್ಕೆ ತರಬೇಕು.
ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ ಮಾತ್ರ ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ನೀಡಿ ಸಾಧನೆಯನ್ನು ತೋರಿಸಿಕೊಳ್ಳುವ ಶಿಕ್ಷಣ ಪದ್ದತಿಯನ್ನು ನಾವು ಕಾಣುತ್ತಿದ್ದೇವೆ, ಅದು ಸರಿಯಲ್ಲಾ. ಇಂದಿನ ವಿದ್ಯಾರ್ಥಿಗಳಿಗಳಲ್ಲಿ ಮಾನವೀಯ ಮೌಲ್ಯಗಳು ಕುಷಿಯುತ್ತಿವೆ, ಈ ಶಾಲೆಯ ಶಿಕ್ಷರಲ್ಲಿ ಅದ್ಬುತವಾದ ಶಕ್ತಿ ಇದೆ ಹಾಗಾಗಿ ಪ್ರತಿಯೊಬ್ಬ ಮಗುವನ್ನು ಮಾನವೀಯ ಮೌಲ್ಯಗಳ ಶಕ್ತಿಯಾಗಿ ಮಾಡಿ ದೇಶಕ್ಕೆ ಕೊಡಿಗೆಯನ್ನಾಗಿನ ನೀಡುವುದರ ಜೊತೆಗೆ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕುತ್ತೀರಿ ಎಂಬ ನಂಬಿಕೆ ಇದೆಎಂದುಅವರು ಹೇಳಿದರು.
ಕಾರ್ಯಕ್ರಮದಲ್ಲಿ ಎಂ.ಪಿ.ಎಂ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ದೇವರಾಜ ಸುಣಗಾರ, ಮುಖ್ಯೋಪಾಧ್ಯಾಯಿನಿ ಅನಿತಾ ಹಿರೇಮಠ ಸೇರಿದಂತೆ ಶಾಲೆಯ ಶಿಕ್ಷಕರು ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು