ಶಿಕ್ಷಕಿ ಸವಿತಾ ಚವ್ಹಾನಗೆ ಅತ್ಯುತ್ತಮ ಸೇವಾರತ್ನ ಪುರಸ್ಕಾರ..!
ಲೋಕದರ್ಶನ ವರದಿ
ಕಾಗವಾಡ 29: ತಾಲೂಕಿನ ಲೋಕುರ ಗ್ರಾಮದ ಚವ್ಹಾನ ಮಾಳಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸವಿತಾ ಚವ್ಹಾನ ಇವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಸೇವಾ ರತ್ನ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಶನಿವಾರ ದಿ. 29 ರಂದು ಅಥಣಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಮತ್ತು ಚಿಕ್ಕೋಡಿ ಜಿಲ್ಲಾ ಘಟಕದ ವತಿಯಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಸಹ ಶಿಕ್ಷಕಿ ಸವಿತಾ ಚವ್ಹಾನ ಇವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ, ಗೌರವಿಸಲಾಗಿದ್ದು, ಅವರನ್ನು ಕಾಗವಾಡ ತಾಲೂಕಾ ಶಿಕ್ಷಕರ ಸಂಘ, ಶಾಲೆಯ ಶಿಕ್ಷಕರು, ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.