ಶಿಕ್ಷಕ ಎಸ್ ಸೂರಲಿಂಗಪ್ಪ ನಿವೃತ್ತಿ: ಬೀಳ್ಕೊಡುಗೆ
ಬಳ್ಳಾರಿ 09: ನಗರದ ಬಾಲಾಂಜನೇಯ ಸ್ವಾಮಿ ದೇವಸ್ಥಾನದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾದ ಎಸ್ ಸೂರಲಿಂಗಪ್ಪ ಇವರು ತಮ್ಮ ಸುದೀರ್ಘ ಸೇವೆಯನ್ನು ಮಾಡಿ ಇತ್ತಿಚೆಗೆ ನಿವೃತ್ತಿಯನ್ನು ಹೊಂದಿದರು.
ಬಾಲಾಂಜನೇಯ ಸ್ವಾಮಿ ಟ್ರಸ್ಟ್ ವತಿಯಿಂದ ಅವರ ಬೀಳ್ಕೋಡುಗೆ ಸಮಾರಂಭವನ್ನು ಏರಿ್ಡಸಿ ನಿವೃತ್ತ ಶಿಕ್ಷಕ ಎಸ್ ಸೋರಲಿಂಗಪ್ಪ ದಂಪತಿಗಳನ್ನು ಸನ್ಮಾನಿಸಲಾಯಿತು. ಬಾಲಾಂಜನೇಯ ಸ್ವಾಮಿ ದೇವಸ್ಥಾನದ ಪೀಠಾಧಿಪತಿ ಬಾಲಾನಂದ ಸ್ವಾಮೀಜಿಗಳು ಶಿಕ್ಷಕ ಎಸ್ ಸೂರಲಿಂಗಪ್ಪ ನವರ ಶಾಲೆಯಲ್ಲಿ ಸಲ್ಲಿಸಿದ ಸೇವೆಯನ್ನು ಕೊಂಡಾಡಿದರು. ಹಾಗೂ ಇರುವೆನೆಂಬುದು ಹಳತಿಹುದು ಬರುವನೆಂಬುದು ಹೊಸ ತಿಗದು ಇರುವೆನು ಮತ್ತು ಬರುವೆನು ಎಂಬುದ ಇವೆರಡರ ಜೀವನದಲ್ಲಿ ಪ್ರಮುಖ ಸ್ವಾರಸ್ಯವಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ ಎಂದು ಸೂರಲಿಂಗಪ್ಪ ಹೇಳಿದರು.
ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಕೆ.ಸಿ ಶ್ರೀರಾಮುಲು, ಖಜಾಂಚಿ ಕೆ ಮುರುಳಿಕೃಷ್ಣ, ಸದಸ್ಯರಾದ ಕೆ ಷಡಕ್ಷರಿಬಾಬು, ಡಯಟ್ ನ ಶಿಕ್ಷಣ ಸಂಯೋಜಕರು, ಸಂಪನ್ಮೂಲ ವ್ಯಕ್ತಿಗಳು, ಶಾಲೆಯ ಮುಖ್ಯಗುರುಗಳು, ಶಿಕ್ಷಕರು, ಮಲ್ಲಿಕಾರ್ಜುನ ವಣೆನೂರ್ ಹಾಗೂ ಸಿಬ್ಬಂದಿ ವರ್ಗದವರು, ಹಳೆ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.