ಕವಿ ವಿಭೂಷಣ ಪ್ರಶಸ್ತಿಗೆ ಶಿಕ್ಷಕ ಅರ್ಜುನ್ ಆಯ್ಯ್ಕೆ
ತಾಳಿಕೋಟೆ25: ತಾಲೂಕಿನ ಮೈಲೇಶ್ವರದ ಮಾರುತಿ ಶಿಕ್ಷಣ ಸಂಸ್ಥೆಯ ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅರ್ಜುನ ನಿಂಗಪ್ಪ ಹಡಗಲಿ (ಸಾ.ತಂಗಡಗಿ) ಅವರಿಗೆ ಕಸ್ತೂರಿ ಸಿರಿಗನ್ನಡ ವೇದಿಕೆ (ರಿ) ಬೆಳಗಾವಿ ಯವರ ವತಿಯಿಂದ ಕೊಡಮಾಡುವ ಕವಿ ವಿಭೂಷಣ' ಪ್ರಶಸ್ತಿಗೆ ಲಭಿಸಿದೆ.
ಕವಿ, ಶಿಕ್ಷಕ ಅರ್ಜುನ ಹಡಗಲಿ ಅವರು 85 ಕ್ಕೂ ಅಧಿಕ ಕವನಗಳನ್ನ ರಚಿಸಿದ್ದು ಸಾಹಿತಿ ದೇವನೂರು ಮಹದೇವ ನವರು 2015 ರಲ್ಲಿ ಬಿಡುಗಡೆಗೊಳಿಸಿದ ಸದ್ದು ಮೀರಿ ಹಾರಿದ ಹಕ್ಕಿ, ಎಂಬ ಬಹುಮಾನಿತ ಕವನ ಸಂಕಲನದಲ್ಲಿ ಇವರು ಬರೆದ ನೋವಿನಲೆಯ ನರ್ತಕ ಎಂಬ ಕವನವು ಪ್ರಕಟವಾಗಿದೆ. ಸಾಹಿತಿ ಅರ್ಜುನ ಅವರ ಸಾಹಿತ್ಯ ಸೇವೆಗೆ ಕವಿ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬೆಳಗಾವಿ ಕಸ್ತೂರಿ ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಪ್ರೊ. ಎಲ್ ಎಚ್ ಪೆಂಡಾರಿ ತಿಳಿಸಿದ್ದಾರೆ ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರುವರಿಯಲ್ಲಿ ಜರುಗಲಿದೆ.