ಶ್ರೀ ಗೋಮಟೇಶ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ
ಮಾಂಜರಿ 5: ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಶ್ರೀ ಗೋಮಟೇಶ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಡಾಽಽ ಎನ್ ಎ ಮಗದುಮ್ ಸೆಂಟ್ರಲ್ ಪಬ್ಲಿಕ್ ಸ್ಕೂಲ ಅಂಕಲಿ, ಇದರ ಸಂಯುಕ್ತ ಆಶ್ರಯದಲ್ಲಿ ಇಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾಕ್ಟರ್ ಏನ್ ಎ ಮಗದುಮ್ ಅವರು ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಪ್ರಾರಂಭಿಸಿದರು. ನಂತರ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರುವಿನ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂಬುದರ ಕುರಿತು ಮಾತನಾಡಿದರು. ಕೆಲ ಮಕ್ಕಳು ಶಿಕ್ಷಕರ ಕುರಿತು ಸ್ವರಚಿತ ಕವನಗಳನ್ನು ಹಾಡಿ ಎಲ್ಲರನ್ನೂ ಮನೋರಂಜಿಸಿದರು. ಸಂಸ್ಥೆಯ ಅಧ್ಯಕ್ಷರಾದ ಎನ್.ಎ. ಮಗದುಮ್ ಅವರು ಮನದ ಗುಡಿಯೊಳಗೆ ಗುರುವೆಂಬ ದೈವವು ಅಕ್ಷರಗಳ ದೀಪ ಹಚ್ಚಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕು ನೀಡಿ, ಶಿಸ್ತು ಸಹನೆ ನಂಬಿಕೆ, ಪ್ರಾಮಾಣಿಕತೆ ಎಂಬ ಜೀವನದ ಮೌಲ್ಯಗಳನ್ನು ಕಲಿಸಿ, ನಡೆ ನುಡಿಗಳ ಬಗ್ಗೆ ತಿಳಿಸಿ ಗುರಿ ಸಾಧನೆಯ ಬಗ್ಗೆ ಉತ್ತಮ ಮಾರ್ಗದರ್ಶನ ನೀಡುತ್ತಾ, ಬದುಕಿಗೆ ಶಕ್ತಿಯಾಗಿ, ಜೀವಕ್ಕೆ ಉಸಿರಾಗಿ ಒಬ್ಬ ವಿದ್ಯಾರ್ಥಿಗೆ ತಂದೆಯಾಗಿ, ತಾಯಿಯಾಗಿ ಗುರುವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಯಾರಿಗಾದರೂ ಇದ್ದರೆ ಅದು ಗುರುವಿಗೆ ಮಾತ್ರ ಅದಕ್ಕಾಗಿ ವರ್ಣ ಮಾತ್ರಂ ಕಲಿಸಿದಾತಂ ಗುರು, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ, ಗುರುವಿಗಿಂತ ಶ್ರೇಷ್ಠ ವಸ್ತು ಇನ್ನೊಂದಿಲ್ಲ, ವಿದ್ಯಾರ್ಥಿಗಳು ಗುರುವಿನ ಮಹತ್ವವನ್ನು ತಮ್ಮ ಜೀವನದಲ್ಲಿ ಅರಿತು ನಡೆದರೆ ಅವರ ಜೀವನ ಸಾರ್ಥಕವಾಗುವುದು ಇದರೊಳಗೆ ಸಂದೇಹವಿಲ್ಲ ಎಂದು ಮಾತನಾಡಿದರು.
ತದನಂತರ ಸಂಸ್ಥೆಯ ಕಾರ್ಯದರ್ಶಿಗಳಾದ ಸುರೇಶ್ ಚೌಗುಲೆ ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ಸಲ್ಲಿಸುವುದಾದರೆ ಒಂದಿಲ್ಲ ಒಂದು ಸಾಧನೆಯನ್ನು ಮಾಡಿದಾಗ ಆ ಸಾಧನೆಯ ಶ್ರೇಷ್ಠ ಅವರಿಗೆ ಪಾಠ ನೀಡಿದ ಶಿಕ್ಷಕರಿಗೆ ಸಲ್ಲುತ್ತದೆ ಎಂದು ಮಾತನಾಡಿದರು. ಜಿ.ಎನ್.ಎಮ್ ಹಾಗೂ ಬಿ. ಎಸ್.ಸಿ ನಸಿಂರ್ಗ್ ವಿಭಾಗದ ಪ್ರಾಂಶುಪಾಲರಾದ ಬಿ.ಎಸ್ ಸಂಗಾಪಗಳು ಅವರು ಸಮಸ್ತ ಶಿಕ್ಷಕ ರಾಷ್ಟ್ರ ರಕ್ಷಕ ಎಂದು ನಡೆಯುವ ಮುಖಾಂತರ ಶಿಕ್ಷಕರ ಮಹತ್ವ ಹಾಗೂ ಶಿಷ್ಯರ ಜವಾಬ್ದಾರಿಯನ್ನು ಮಕ್ಕಳಿಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀಯುತ ಸುರೇಶ್ ಚೌಗುಲ ಖಜಾಂಚಿಗಳಾದ ಶ್ರೀಮತಿ ಲಲಿತಾ ಮಗದುಮ್ ಸಿ.ಬಿ.ಎಸ್.ಇ ವಿಭಾಗದ ಪ್ರಾಂಶುಪಾಲರಾದ ಎನ್ ಎಸ್ ನಿಡುಗುಂದ, ಸೂರ್ಯಕಾಂತ್ ಮೋನೆ ಉಪ ಪ್ರಾಚಾರ್ಯರಾದ ಶ್ರೀಮತಿ ವೈಶಾಲಿ ಇಂಗಳೇ ಶ್ರೀ ಗೋಮಟೇಶ ಶಿಕ್ಷಣ ಸಂಸ್ಥೆಯ ಸಮಸ್ತ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು. ಸದರಿ ಕಾರ್ಯಕ್ರಮವನ್ನು ಸಿ.ಬಿ.ಎಸ್.ಇ ವಿಭಾಗದ 9ನೆಯ ತರಗತಿಯ ವಿದ್ಯಾರ್ಥಿನಿಯಾದ ಉಲ್ಮಾ ಘೋರೆ್ಡ ಮತ್ತು ದಿವ್ಯಾ ಪತ್ತಾರ್ ನಿರೂಪಿಸಿದರು. ಸಂಚಿತಾ ಕೋರ ಸ್ವಾಗತಿಸಿದಳು .