ತಾಳಿಕೋಟಿ

ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ಕಲಿಸಿ: ನಾವದಗಿ ಶ್ರೀ

ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ಕಲಿಸಿ: ನಾವದಗಿ ಶ್ರೀ

ತಾಳಿಕೋಟಿ: ಗ್ರಾಮೀಣ ಭಾಗದ ಮಕ್ಕಳ ಭವಿಷ್ಯದ ಆಶಾಕಿರಣವಾಗಿರುವ ಈ ಸಂಸ್ಥೆಯು ಅವರಿಗೆ ಉತ್ತಮ ಶಿಕ್ಷಣವನ್ನು ಕೊಡುತ್ತಿದೆ. ಇದರ ಜೊತೆಗೆ ಅವರಿಗೆ ಉತ್ತಮ ಸಂಸ್ಕಾರಗಳನ್ನೂ ಕೊಡುವ ಕೆಲಸವನ್ನೂ ಮಾಡಬೇಕು ಎಂದು ನಾವದಗಿ ಬ್ರಹನ್ಮಠದ ಪರಮಪೂಜ್ಯ ಶ್ರೀ ರಾಜೇಂದ್ರ ಒಡೆಯರ ಮಹಾಸ್ವಾಮಿಗಳು ಹೇಳಿದರು. ಸಮೀಪದ ಬ್ಯಾಲಾಳಕ್ರಾಸ್ ಕೊಡಗಾನೂರದಲ್ಲಿರುವ ಜೆ.ಎಸ್‌ಎಸ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.  

ಇವತ್ತು ವಿದ್ಯೆಗೆ ಕೊರತೆ ಇಲ್ಲ ಸಂಸ್ಕಾರಗಳ ಕೊರತೆ ಇದೆ. ವಿನಯಶೀಲತೆ, ಸದಾಚಾರ ಹಾಗೂ ಸಂಸ್ಕಾರವು ಮನುಷ್ಯನನ್ನು ಸಮಾಜದ ಒಬ್ಬ ಜವಾಬ್ದಾರಿ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದರು. ಬ.ಸಾಲವಾಡಗಿ ಸರಕಾರಿ ಪ್ರೌಢಶಾಲೆ ಮುಖ್ಯಗುರುಮಾತೆ ಶ್ರೀಮತಿ ಸುಮಂಗಲಾ ಕೋಳೂರು ಮಾತನಾಡಿ ಒಂದು ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುವುದು ಸಾಮಾನ್ಯ ಕಾರ್ಯವಲ್ಲ. ಈ ಸಂಸ್ಥೆಯ ಮುಖ್ಯಸ್ಥರು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಸುವ ಮಾತೃಹೃದಯ ಅವರಲ್ಲಿದೆ. ಇಲ್ಲಿ ಓದುವ ಮಕ್ಕಳು ಭಾಗ್ಯಶಾಲಿಗಳು ಎಂದರು.  

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯದರ್ಶಿ ಸಾಹೇಬಗೌಡ ಗಬಸಾವಳಗಿ ಅವರು ಗ್ರಾಮೀಣ ಭಾಗದ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಸಂಸ್ಥೆ ಕಟ್ಟಿ ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ಪಾಲಕರ ಹಾಗೂ ಶಿಕ್ಷಕರ ಸಹಕಾರ ನಮ್ಮೊಂದಿಗಿರುವುದರಿಂದಲೇ ಸಾಧ್ಯವಾಗಿದೆ ಎಂದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.   

ವೇದಿಕೆಯಲ್ಲಿ ಬಿ. ಆರ್‌. ಪಿ. ಕೆ. ಎಸ್‌. ಸಜ್ಜನ್,  ಸಿ. ಆರ್‌. ಪಿ. ಎಸ್‌. ಎಂ. ಪಾಲ್ಕಿ, ಕೊಡಗಾನೂರ ಬಸವೇಶ್ವರ ಪ್ರೌಢಶಾಲೆ ಮು.ಗು. ಎಂ.ಎಚ್‌. ಹಂದ್ರಾಳ, ಡಂಬಳ ಜ್ಞಾನಬಿಂದು ಪಬ್ಲಿಕ್ ಸ್ಕೂಲ್ ಸಂಸ್ಥಾಪಕ ಪ್ರಕಾಶ್ ನಾಯಕ್, ಜೆಎಸ್‌ಎಸ್ ಆಂಗ್ಲಮಾದ್ಯಮ ಶಾಲೆ ಮುಖ್ಯ ಗುರುಮಾತೆ ವಿಜಯಲಕ್ಷ್ಮೀ ಗಬಸಾವಳಗಿ ಉಪಸ್ಥಿತರಿದ್ದರು. 


ಸುದ್ದಿ ಓದಿ