ಅಗತ್ಯ ಅನುಗುಣವಾಗಿ ಬೀಗಿ ಪೊಲೀಸ್ ಬಂದೋಬಸ್ತ್ ಕ್ರಮ ಕೈಗೊಳ್ಳಲಾಗಿದೆ: ಸಿಪಿಐ ನಿಂಗಪ್ಪ ರುದ್ರಗೋಳ
ತಾವರಗೇರಿ ಪಟ್ಟಣ ಪಂಚಾಯಿತಿ ಚುನಾವಣೆ
ಕುಷ್ಟಗಿ 26: ತಾಲೂಕಿನ ತಾವರಗೇರಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಅಗತ್ಯ ಅನುಗುಣವಾಗಿ ಬೀಗಿ ಪೊಲೀಸ್ ಬಂದೋಬಸ್ತ್ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಗೋಳ ಹೇಳಿದರು.
ರವಿವಾರ ಇಲ್ಲಿನ ಸಿಪಿಐ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಿನ ತಾವರಗೇರಿ ಪಟ್ಟಣ ಪಂಚಾಯಿತಿ ಚುನಾವಣೆ ಪ್ರಯುಕ್ತ ಡಿ.27 ಸೋಮವಾರದಂದು ನಡೆಯುವ ಮತದಾನ ಕೇಂದ್ರದಲ್ಲಿ ಚುನಾವಣೆಗೆ ನಿಯೋಜಿಸಿರುವ ಪೊಲೀಸ್ ಸಿಬ್ಬಂದಿ ವರ್ಗದವರು ವಿವರವನ್ನು ತಿಳಿಸದರು.
ಕುಷ್ಟಗಿ ತಾಲೂಕಿನ ತಾವರಗೇರಿ ಪಟ್ಟಣದಲ್ಲಿ 10885 ಜನ ಮತದಾರರು ನಾಳೆ ತಮ್ಮ ಮತವನ್ನು ಚಲಾಯಿಸುವರು.
5351 ಜನ ಗಂಡು ಮತದಾರು, 5534 ಹೆಣ್ಣು ಜನ ಗಂಡು ಮತದಾರು ಇದ್ದಾರೆ.
ತಾವರಗೇರಿ ಪಟ್ಟಣ ಪಂಚಾಯಿತಿಯ ಒಟ್ಟು ವಾರ್ಡಗಳು 18.
ಅವುಗಳಲ್ಲಿ 3 ವಾರ್ಡಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನು ಉಳಿದ 15 ವಾರ್ಡಗಳಿಗೆ ನಾಳೆ ಚುನಾವಣೆ ನಡೆಯುತ್ತಿದೆ.
ತಾವರಗೇರಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 18 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.
ಅದರಲ್ಲಿ 06 ಸೂಕ್ಷ್ಮ , 05 ಅತಿಸೂಕ್ಷ್ಮ, 07 ಸಾಮಾನ್ಯ ಮತಗಟ್ಟೆಗಳೆಂದು ವಿಂಗಡಿಸಲಾಗಿದೆ.
18 ಮತಗಟ್ಟೆಗಳಲ್ಲಿ 03 ವಿಭಾಗಗಳನ್ನಾಗಿ (ಸೆಕ್ಟರ್) ವಿಂಗಡಿಸಲಾಗಿದೆ.
03 ಸೂಕ್ಷ್ಮ ಮತಗಟ್ಟೆಗಳಲ್ಲಿ 12 ಜನ ಹೆಡ್ ಕಾನ್ಸ್ಟೇಬಲ್, ಪಿಸಿಗಳು.
9 ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ 18 ಜನ ಹೆಚ್.ಸಿ, ಪಿಸಿ.07 ಸಾಮಾನ್ಯ ಮತಗಟ್ಟೆಗಳಲ್ಲಿ 14 ಜನ ಹೆಚ್.ಸಿ, ಪಿಸಿ ನಿಯೋಜನೆ ಮಾಡಲಾಗಿದೆ.
ಒಟ್ಟು 3 ಸೆಕ್ಟರಗಳಿಗಳಲ್ಲಿ 01 ಸಿಪಿಐ, 03 ಜನ ಪಿ.ಎಸ್.ಐ ಹಾಗೂ 04 ಎ.ಎಸ್.ಐ, 13 ಜನ.ಹೆಚ್.ಸಿ 26 ಜನ ಪಿಸಿ ಮತ್ತು ಮಹಿಳಾ ಪೇದೆಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಷ್ಟಗಿ ಪಿಎಸ್ಐ ತಿಮ್ಮಣ್ಣ ನಾಯಕ, ಹನುಮಸಾಗರ ಪಿಎಸ್ಐ ಅಶೋಕ ಬೇವೂರ, ತಾವರಗೇರಾ ಪಿಎಸ್ಐ ವೈಶಾಲಿ ಝಳಕಿ ಉಪಸ್ಥಿತರಿದ್ದರು.