ರಾಷ್ಟ್ರೀಯ

ಟಾಟಾ ಸ್ಟೀಲ್ ಚೆಸ್ ಟೂರ್ನಿ ರದ್ದು

ಟಾಟಾ ಸ್ಟೀಲ್ ಚೆಸ್ ಟೂರ್ನಿ ರದ್ದು

ಕೋಲ್ಕೊತಾ, ನವೆಂಬರ್ 12: ಬಾರಿಯ ಟಾಟಾ ಸ್ಟೀಲ್ ಇಂಡಿಯಾ ರ‍್ಯಾಪಿಡ್ ಮತ್ತು ಬ್ಲಿಟ್ಜ್‌ ಚೆಸ್ ಟೂರ್ನಿಯನ್ನು ಕೋವಿಡ್‌–19 ಕಾರಣದಿಂದ ರದ್ದು ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಗ್ರ್ಯಾಂಡ್ ಚೆಸ್ ಟೂರ್ ಅಂಗವಾಗಿ ಕಳೆದ ವರ್ಷ ನಡೆದ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಭಾರತದ ವಿಶ್ವನಾಥನ್ ಆನಂದ್ ಸೇರಿದಂತೆ 10 ಗ್ರ್ಯಾಂಡ್‌ಮಾಸ್ಟರ್‌ಗಳು ಪಾಲ್ಗೊಂಡಿದ್ದರು.

‘ಕೋವಿಡ್‌ನಿಂದ ಉಂಟಾಗಿರುವ ಆತಂಕ ಇನ್ನು ಕೂಡ ಕಡಿಮೆಯಾಗಲಿಲ್ಲ. ಇಂಥ ಸಂದರ್ಭದಲ್ಲಿ ಚೆಸ್ ಪಟುಗಳ ಕ್ಷೇಮ ಕಾಪಾಡುವುದು ನಮ್ಮ ಹೊಣೆ. ಈ ನಿಟ್ಟಿನಲ್ಲಿ ಟೂರ್ನಿಯನ್ನು ಆಯೋಜಿಸದೇ ಇರಲು ನಿರ್ಧರಿಸಲಾಗಿದೆ’ ಎಂದು ಟಾಟಾ ಸ್ಟೀಲ್‌ನ ಕಾರ್ಪೊರೇಟ್ ಸೇವಾ ವಿಭಾಗದ ಉಪಾಧ್ಯಕ್ಷ ಚಾಣಕ್ಯ ಚಕ್ರವರ್ತಿ ತಿಳಿಸಿದರು.

ಸುದ್ದಿ ಓದಿ