ರಾಷ್ಟ್ರೀಯ

ಮೇಕದಾಟು ಯೋಜನೆಗೆ ತಮಿಳುನಾಡು ಎಂದೂ ಒಪ್ಪಿಗೆ ನೀಡುವುದಿಲ್ಲ; ಪಳನಿಸ್ವಾಮಿ

ಮೇಕದಾಟು ಯೋಜನೆಗೆ ತಮಿಳುನಾಡು ಎಂದೂ ಒಪ್ಪಿಗೆ ನೀಡುವುದಿಲ್ಲ; ಪಳನಿಸ್ವಾಮಿ

ಚೆನ್ನೈ,ಸೆಪ್ಟೆಂಬರ್ 15: ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಪ್ರಸ್ತಾಪನೆಗೆ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ವಿಧಾನಸಭೆಯಲ್ಲಿ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಡಿಎಂಕೆ ಮುಖಂಡ ದುರೈಮುರುಗನ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾವೇರಿ ನೀರಿನ ಹರಿವನ್ನು ನಿಲ್ಲಿಸಲಾಗದು ಮತ್ತು ಹಾದಿ ಬದಲಿಸಲಾಗದು ಎಂದು ಸುಪ್ರೀಂಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ ಎಂದರು 

ಕರ್ನಾಟಕ ಸರ್ಕಾರ ಈ ವಿಷಯವನ್ನು ಮೂರ್ನಾಲ್ಕು ಬಾರಿ ಕಾವೇರಿ ನಿರ್ವಹಣಾ ಪ್ರಾಧಿಕಾರದ ಮುಂದೆ ಪ್ರಸ್ತಾಪಿಸಿದೆಯಾದರೂ, ತಮಿಳುನಾಡಿನ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಅದು ತಿರಸ್ಕೃತಗೊಂಡಿದೆ ಎಂದರು. 

ಈಸಂಬಂಧ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ ಸಲ್ಲಿಸಿರುವ ಅರ್ಜಿ ವಿಚಾರಣಾ ಹಂತದಲ್ಲಿದ್ದು, ಈಗಾಗಲೇ ಸರ್ಕಾರದ ಪರ ಮಧ್ಯಂತರ ಆದೇಶ ಹೊರಬಿದ್ದಿದೆ ಎಂದು ಹೇಳಿದರು.

ಸುದ್ದಿ ಓದಿ