ಕುಷ್ಟಗಿ

ಜಾತಿ ನಿಂದನೆ ದೂರು, ಪ್ರಮಾಣಪತ್ರ ಸರಳವಾಗಿ ನೀಡುವಂತೆ ತಾಲೂಕ ಅಧ್ಯಕ್ಷ ಗಂಧದಮಠ ಸರಕಾರಕ್ಕೆ ಒತ್ತಾಯ

ಜಾತಿ ನಿಂದನೆ ದೂರು, ಪ್ರಮಾಣಪತ್ರ ಸರಳವಾಗಿ ನೀಡುವಂತೆ ತಾಲೂಕ ಅಧ್ಯಕ್ಷ  ಗಂಧದಮಠ ಸರಕಾರಕ್ಕೆ ಒತ್ತಾಯ

ಕುಷ್ಟಗಿ 23: ಬೇಡ ಜಂಗಮ ಸಮಾಜದ ಒಕ್ಕೂಟದ ರಾಜ್ಯ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಬಿ.ಡಿ ಹಿರೇಮಠ ಅವರ ಮೇಲೆ ಅನಾವಶ್ಯಕವಾಗಿ ರಾಜಕೀಯ ಕೆಲವು ಶಾಸಕರು ಸೇರಿ, ಬೇಡ ಜಂಗಮ ಸಮಾಜದ ಚಟುವಟಿಕೆಗಳನ್ನು ಹತ್ತಿಕ್ಕುವ ಉದ್ದೇಶದಿಂದ ಅವರ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಸೇರಿ ಅಧಿಕಾರಿಗಳನ್ನು ಬಳಸಿಕೊಂಡು ಜಾತಿ ನಿಂದನೆ ದೂರು ದಾಖಲಿಸಿದ್ದು ಖಂಡನೀಯ ಎಂದು ತಾಲೂಕ ಅಧ್ಯಕ್ಷ ಶಿವಕುಮಾರ ಗಂಧದಮಠ ಹೇಳಿದರು.  

ಬೇಡ ಜಂಗಮ ಸಮಾಜ ಒಕ್ಕೂಟದ ರಾಜ್ಯ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಬಿ.ಡಿ ಹಿರೇಮಠ ಅವರ ವಿರುದ್ಧ ಸುಳ್ಳು ದೂರು ನೀಡಿ ಜಾತಿನಿಂದನೆ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ತಾಲೂಕು ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಗುರುವಾರ ಬೆಳಗ್ಗೆ ಇಲ್ಲಿನ ಕಚೇರಿಗೆ ತೆರಳಿ ತಹಶೀಲ್ದಾರ್ ರಿಗೆ ಮನವಿ ಪತ್ರ  ಸಲ್ಲಿಸಿ ಮಾತನಾಡಿದವರು  

ಸರ್ಕಾರದ ನೀತಿಯನ್ನು ಕರ್ನಾಟಕ ಬೇಡ ಜಂಗಮ ಸಮಾಜ ತೀವ್ರವಾಗಿ ಖಂಡಿಸುತ್ತದೆ ಮುಂಬರುವ ದಿನಗಳಲ್ಲಿ ಕರ್ನಾಟಕ ಭಾಗದ ಪ್ರಮುಖ ಮಠಾಧೀಶರು ಹಾಗೂ ಬೇಡ ಜಂಗಮ ಸಮಾಜದ ಎಲ್ಲಾ ಮುಖಂಡರ ನೇತೃತ್ವದಲ್ಲಿ ಬಿ.ಡಿ ಹಿರೇಮಠ ಅವರ ವಿರುದ್ಧ ದಾಖಲಾಗಿರುವ ಸುಳ್ಳು ದೂರನ್ನು ಖಂಡಿಸಿ ಹಾಗೂ ಬೇಡ ಜಂಗಮ ಜಾತಿ ಸತ್ಯ ಪ್ರತಿಪಾದನೆಗಾಗಿ ಜೂನ್ 30ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ ನಲ್ಲಿ ಜೈಲ್ ಭರೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.                       

ಮುಂದಿನ ದಿನಮಾನಗಳಲ್ಲಿ ರಾಜ್ಯದ ಎಲ್ಲ ಪೂಜ್ಯ ಮಠಾಧೀಶರು ಮತ್ತು ಜಂಗಮ ಸಮಾಜದ ಮುಖಂಡರು ಸೇರಿಕೊಂಡು ಬಿ.ಡಿ ಹಿರೇಮಠ ಅವರ ವಿರುದ್ಧ ದಾಖಲಾಗಿರುವ ಸುಳ್ಳು ದೂರನ್ನು ಖಂಡಿಸಿ ಹಾಗೂ ಬೇಡ ಜಂಗಮ ಸಮಾಜದ ಪ್ರಮಾಣಪತ್ರ ಸರಳವಾಗಿ ನೀಡುವಂತೆ ಒತ್ತಾಯಿಸಿ ಬೆಂಗಳೂರಿನ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದರು.  

ಈ ಸಂದರ್ಭದಲ್ಲಿ ಮಹಾಂತಯ್ಯ ಹಿರೇಮಠ,  ಗುರುಮೂರ್ತಿ ಸ್ವಾಮಿ ಹಿರೇಮಠ, ಈಶ್ವರಯ್ಯ  ಬಾಗಲವಾಡಿಮಠ, ಎಸ್‌.ಎಚ್ ಹಿರೇಮಠ, ಪತ್ರಕರ್ತ ಸಂಗಮೇಶ ಲೂತಿಮಠ, ಸುರೇಶ ಎಸ್ ಹಿರೇಮಠ, ಮಲ್ಲಯ್ಯ ದೋಟಿಹಾಳ, ಮಂಜು ಕಂದಕೂರ, ಅಂಬರೀಶ್ ಅರಳಲೆಮಠ, ಶಂಕರಯ್ಯ ಕಂಪಾಪುರಮಠ, ಕಲ್ಲಯ್ಯ ದೋಟಿಹಾಳ, ಮುತ್ತಣ್ಣ ಹಿರೇಮಠ, ಸಂಗಮೇಶ ಸಾದ್ವಿಮಠ ಸೇರಿದಂತೆ ಕಂದಕೂರ, ತಳವಗೇರಿ, ಮನ್ನಾಪೂರ, ತಾವರಗೇರಿ, ಕುರಬನಾಳ, ಹನಮಸಾಗರ, ಯರಗೇರಿ ಗ್ರಾಮದ ಜಂಗಮ ಸಮಾಜದ ಹಿರಿಯ ಮುಖಂಡರು ಭಾಗವಹಿಸಿದ್ದರು. 


ಸುದ್ದಿ ಓದಿ