ತಾಲೂಕ ರಾಜ್ಯ ಅನುಮತಿ ಪಡೆದ ವಿಜೇತಗುತ್ತಿಗೆದಾರ ಸಂಘದ ಸಭೆ
ಲೋಕದರ್ಶನ ವರದಿ
ಶಿಗ್ಗಾವಿ 26: ತಾಲೂಕ ಸಂಘದಕಚೇರಿಯಲ್ಲಿ ಶಿಗ್ಗಾವಿ ತಾಲೂಕ ರಾಜ್ಯ ಅನುಮತಿ ಪಡೆದ ವಿಜೇತಗುತ್ತಿಗೆದಾರ ಸಂಘದ ಸಭೆ ಮಾಜಿರಾಜ್ಯ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಮಂಜುನಾಥ್ ಮುನ್ನಣ್ಣವರ್ ನೇತೃತ್ವದಲ್ಲಿ ತಾಲೂಕಿನ ವಿದ್ಯುತ್ ಗುತ್ತಿಗೆದಾರರ ವಿಶೇಷ ಸಭೆಜರುಗಿತು.
ಪ್ರಮುಖವಾಗಿ ಲೈನ್ ಕಾಮಗಾರಿ ನಿರ್ವಹಿಸುವ ಸ್ಥಳೀಯ ಗುತ್ತಿಗೆದಾರರಿಗೆ ಕೆಲಸಗಳು ಸಿಗದಿರುವ ಬಗ್ಗೆ ಚರ್ಚೆ ಆಯಿತು ಸ್ಥಳೀಯವಾಗಿ ಇಲಾಖೆಯಿಂದ ಕೊಡುವ ಕಾಮಗಾರಿಗಳನ್ನು ಸ್ಥಳೀಯರಿಗಿಂತ ಹೆಚ್ಚಾಗಿ ಹೊರಗಿನ ಗುತ್ತಿಗೆ ದಾರರಿಗೆ ಕೊಡುತ್ತಿರುವ ಬಗ್ಗೆ ಹಾಗೂ ಕೆಲವು ದೊಡ್ಡಟೆಂಡರ್ ಪಡೆದು ಕಾಮಗಾರಿಗಳನ್ನು ನಿರ್ವಹಿಸಲು ಹೊರಗಿನಿಂದ ಗುತ್ತಿಗೆದಾರರು ಅಧಿಕಾರಿಗಳ ಮುಖಾಂತರ ಕಾಮಗಾರಿಗಳ ಮಾಹಿತಿ ಪಡೆಯುವಾಗ ಸ್ಥಳೀಯ ಗುತ್ತಿಗೆದಾರರ ಬಗ್ಗೆ ವಿಚಾರಿಸದೆ ಲೈಸನ್ಸ್ಇಲ್ಲದಿದ್ದರೂ ಪ್ಯಾನ್ಕಾರ್ಡ್ ಆಧಾರದಲ್ಲಿ ಲೇಬರ್ಗಳಿಗೆ ಗುತ್ತಿಗೆ ನೀಡುವುದುತಮಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇದರಿಂದ ಸ್ಥಳೀಯವಾಗಿ ಇರುವ ನಮಗೆ ಕೆಲಸ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಗುತ್ತಿಗೆದಾರ ಚಂದ್ರಶೇಖರ್ ಕೊರ್ಪಡೆ, ಕೆ.ಟಿ. ಪಾಟೀಲ್, ಶಿವರಾಜ್ ಮಾಹಿತಿ ನೀಡಿದರು ಈ ಬಗ್ಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರಿಗೆ ಮಾಹಿತಿ ಕೊಡಲಾಗುವುದು ಹಾಗೂ ಹೊರ ಗುತ್ತಿಗೆದಾರರ ಜೊತೆ ದರಗಳ ಬಗ್ಗೆ ಸರಿಯಾದ ಅಗ್ರಿಮೆಂಟ್ ಮಾಡಿಕೊಂಡು ಕೆಲಸ ಮಾಡಬೇಕು ಸ್ಥಳೀಯ ಗುತ್ತಿಗೆದಾರರು ಪರಸ್ಪರ ಹೊಂದಾಣಿಕೆಯಿಂದ ಕಾಮಗಾರಿಗಳನ್ನು ಕಟ್ಟುನಿಟ್ಟಾಗಿ ಮಾಡುವಂತೆ ಮಂಜುನಾಥ್ ಸಲಹೆ ನೀಡಿದರು ಸಭೆಯಲ್ಲಿ ತಾಲೂಕ ಅಧ್ಯಕ್ಷ ನಾಗಭೂಷಣ್ ಹಿರೇಮಠ್, ಈರಣ್ಣ ಎಲಿಗಾರ್, ಶಿವರಾಜ್, ಕೆ ಟಿ ಪಾಟೀಲ್, ಮಲ್ಲಪ್ಪ ಹೊನ್ನಳ್ಳಿ, ಚಂದ್ರಶೇಖರ್ ಕೋಪರ್ಡ್ ಉಪಸ್ಥಿತರಿದ್ದರು