ರಾಣೆಬೆನ್ನೂರ

ತಾಲೂಕಾ ಕಾಂಗ್ರೆಸ್ ಸಂಭ್ರಮ

ತಾಲೂಕಾ ಕಾಂಗ್ರೆಸ್ ಸಂಭ್ರಮ

ರಾಣೀಬೆನ್ನೂರ: ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಸಲೀಂಅಹ್ಮದ್‌ರವರು ಪ್ರಥಮ ಪ್ರಾಶಸ್ತ್ಯದ ಮತ ಪಡೆದು ಜಯಭೇರಿ ಬಾರಿಸಿದ್ದಾರೆ. ಇವರ ಗೆಲುವಿನ ಸುದ್ದಿ ತಿಳಿಯುತ್ತಿ ದ್ದಂತೆಯೇ ತಾ.ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯ ಕರ್ತರು ಪಕ್ಷದ ಕಚೇರಿಯಲ್ಲಿ ಹಾಗೂ ಪೋಸ್ಟ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.  

ಈ ಸಂದರ್ಭದಲ್ಲಿ ತಾ:ಕಾಂಗ್ರೆಸ್ ಅಧ್ಯಕ್ಷ ಮಂಜನಗೌಡ ಪಾಟೀಲ, ನಗರ ಕಾಂಗ್ರೆಸ್ ಅಧ್ಯಕ್ಷ ಶೇರುಖಾನ್ ಕಾಬೂಲಿ, ಮುಖಂಡರಾದ ರವೀಂದ್ರಗೌಡ ಪಾಟೀಲ, ಪಿ.ಜೆ.ಮರಿಯಮ್ಮನವರ, ಆಪ್ತ ಕಾರ್ಯದರ್ಶಿ ಸೀತಾರಾಮರೆಡ್ಡಿ, ಮೃತ್ಯುಂಜಯ ಗುದಿಗೇರ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು. 


ಸುದ್ದಿ ಓದಿ