ತಾಳಿಕೋಟಿ

27ರಿಂದ ರಾಜೇಂದ್ರ ಒಡೆಯರ್ ಶ್ರೀಗಳ ಪಟ್ಟಾಧಿಕಾರ

27ರಿಂದ ರಾಜೇಂದ್ರ ಒಡೆಯರ್ ಶ್ರೀಗಳ ಪಟ್ಟಾಧಿಕಾರ

ನಾವದಗಿಯಲ್ಲಿ ಸ್ವಾಮೀಜಿ ಭಕ್ತರ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ  

ತಾಳಿಕೋಟಿ 10: ತಾಲೂಕಿನ ನಾವದಗಿ ಬ್ರಹನ್ಮಠದ ಪೂಜ್ಯಶ್ರೀ ರಾಜೇಂದ್ರ ಒಡೆಯರ್ ಪಟ್ಟದೇವರು ಇವರ ಗುರು ಪಟ್ಟಾಧಿಕಾರ ಮಹೋತ್ಸವವನ್ನು ಅತ್ಯಂತ ವಿಜ್ರಂಬಣೆ ಭಕ್ತಿ ಭಾವ ಹಾಗೂ ಸಕಲ ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಮೂವರು ಪಂಚಪೀಠಾಧೀಶರ ಹಾಗೂ ನೂರಾರು ಮಠಾಧೀಶರುಗಳ ಸಮ್ಮುಖದಲ್ಲಿ 2024ರ ಫೆಬ್ರವರಿ 27,28 ಮತ್ತು 29 ರಂದು ಮೂರು ದಿನಗಳ ಕಾಲ ನೆರವೇರಿಸಲು ಉಜ್ಜಯಿನಿ ಶ್ರೀಗಳು ಅಪ್ಪಣೆ ನೀಡಿದ್ದು ಇದರಂತೆ ನೆರವೇರಿಸಲಾಗುವುದು ಎಂದು ಇಂಗಳೇಶ್ವರ ವಚನ ಶಿಲಾ ಮಂಟಪದ ಪೂಜ್ಯಶ್ರೀ ಚನ್ನಬಸವ ಮಹಾಸ್ವಾಮಿಗಳು ಘೋಷಿಸಿದರು.  

ಶುಕ್ರವಾರ ನಾವದಗಿ ಗ್ರಾಮದಲ್ಲಿ ನೂತನ ಬ್ರಹನ್ ಮಠದ ಲೋಕಾರೆ​‍್ಣ ಹಾಗೂ ರಾಜೇಂದ್ರ ಒಡೆಯರ್ ರವರ ಗುರು ಪಟ್ಟಾಧಿಕಾರ ಮಹೋತ್ಸವದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಸಭೆಯಲ್ಲಿ ಉಪಸ್ಥಿತರಿರುವ ಮಠಾಧೀಶರ ನಾವದಗಿ ದೈವ ದವರು ಜನಪ್ರತಿನಿಧಿಗಳ ಗಣ್ಯರು ಮತ್ತು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಈ ಅಪ್ಪಣೆಯನ್ನು ಹೊರಡಿಸಿದ ಅವರು ಇಲ್ಲಿ ಉಪಸ್ಥಿತರಿ ರುವ ಭಕ್ತರು ಪಟ್ಟಾಧಿಕಾರ ಮಹೋತ್ಸವಕ್ಕೆ ಸಹಕರಿಸಲು ಮುಂದಾಗಿರುವುದು ಅವರು ರಾಜೇಂದ್ರ ಒಡೆಯರ್ ಅವರ ಮೇಲೆ ಇಟ್ಟಿರುವ ಪ್ರೀತಿ ಹಾಗೂ ವಿಶ್ವಾಸವನ್ನು ಎತ್ತಿ ತೋರಿಸುತ್ತದೆ ಎಂದರು. ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ 21 ದಿನಗಳ ಕಾಲ ಶರಣಬಸವೇಶ್ವರ ಪುರಾಣ ಪ್ರವಚನ ಹಮ್ಮಿಕೊಳ್ಳುವ ಮೂಲಕ ಧರ್ಮ ಪ್ರಚಾರ ಆಚಾರ ವಿಚಾರ ಲಿಂಗ ದೀಕ್ಷೆ ಸಂಸ್ಕೃತಿ ಮತ್ತು ಈ ಮಠದ ಮೂಲ ಶರಣರ ಜೀವನ ಆದರ್ಶಗಳನ್ನು ತಿಳಿಸುವ ಕಾರ್ಯವು ಇಲ್ಲಿ ನಡೆಯಲಿದೆ ಸಮಸ್ತ ನಾವದಗಿ ಗ್ರಾಮದ ದೈವದವರು ಹಾಗೂ ತಾಲೂಕಿನ ಎಲ್ಲ ಸದ್ಭಕ್ತರು ಈ ಕಾರ್ಯಕ್ರಮವನ್ನು ಯಶಸ್ಸು ಗೊಳಿಸಲು ಪ್ರಯತ್ನಿಸಬೇಕು ಎಂದರು. ಸಾನಿಧ್ಯ ವಹಿಸಿದ ದೇವರ ಹಿಪ್ಪರಗಿ ಜಡಿ ಮಠದ ಜಡಿ ಸಿದ್ದೇಶ್ವರ ಶ್ರೀಗಳು ಚಬನೂರಿನ ರಾಮಲಿಂಗಯ್ಯ ಶ್ರೀಗಳು ಪಡೆಕನೂರದ ಮಲ್ಲಿಕಾರ್ಜುನ ಶ್ರೀಗಳು ಕೊಡೆ ಕಲ್ಲದ ಶಿವಕುಮಾರ ಶ್ರೀಗಳು ಬಾಗೇವಾಡಿಯ ಶಿವಪ್ರಕಾಶ್ ಶ್ರೀಗಳು ಕೆಸರಟ್ಟಿ ಶ್ರೀಗಳು ತಮ್ಮ ಆಶೀರ್ವಚನದಲ್ಲಿ  ರಾಜೇಂದ್ರ ಒಡೆಯರ್ ಅವರ ಪಟ್ಟಾಧಿಕಾರ ಕಾರ್ಯಕ್ರಮ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದಕ್ಕೆ ಇಲ್ಲಿ ಸೇರಿದ ಅಪಾರ ಸಂಖ್ಯೆಯ ಭಕ್ತರೇ ಸಾಕ್ಷಿಯಾಗಿದ್ದಾರೆ ಪಟ್ಟಾಧಿಕಾರ ಮಹೋತ್ಸವ ದಿನ ಇರುವಷ್ಟು ಭಕ್ತರು ಪೂರ್ವಭಾವಿ  ಸಭೆಯಲ್ಲಿ ಇದ್ದಾರೆ ಇದು ನಾವದಗಿ ಶ್ರೀಗಳು ಗಳಸಿರುವ ಭಕ್ತರ ಸಂಪತ್ತಿನ ಪ್ರತಿಕವಾಗಿದೆ ಭಕ್ತರು ಮಹೋತ್ಸವಕ್ಕೆ ನೆರವಾಗಲು ಮುಂದೆ ಬಂದಿರುವುದು ಶ್ಲಾಘನೀಯ ವಾದ ಕಾರ್ಯವಾಗಿದೆ ಈ ಮಹೋತ್ಸವ ಕಾರ್ಯಕ್ರಮ ಒಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದರು. ಪರಮಭೂಜಿ ಶ್ರೀ ರಾಜೇಂದ್ರ ಒಡೆಯರ್ ಅವರು ತಮ್ಮ ಅಭಿನಂದನಾ ನುಡಿಯಲ್ಲಿ ಕೇವಲ ನನ್ನ ಒಂದು ಕರೆಗೆ ಓಗೊಟ್ಟು ತಾವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ ಇದು ನೀವು ನನ್ನ ಮೇಲೆ ಇಟ್ಟಿರುವ ಅಭಿಮಾನದ ಗುರುತಾಗಿದೆ ಈ ಕಾರ್ಯಕ್ರಮ ನನ್ನದಲ್ಲ ಇದು ನಿಮ್ಮ ಕಾರ್ಯಕ್ರಮ ನಿಮ್ಮ ಮನೆಯ ಮಗನ ಕಾರ್ಯಕ್ರಮ ಎಂದು ಭಾವಿಸಿ ಇದರ ಯಶಸ್ವಿಗಾಗಿ  ಪ್ರಯತ್ನಿಸಿ ಎಂದು ಭಾವುಕರಾದರು. 

 ಡವಳಗಿ ಗನಮಟೇಶ್ವರದ ಸ್ವಾಮಿಗಳು ಪ್ರಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್ ಎಸ್ ಪಾಟೀಲ್ ಕೂಚಬಾಳ. ಜಿಪಂ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ. ಮಾಂತೇಶ್ ಮುರಾಳ ರಾಘು ವಿಜಾಪುರ ಸೇರಿದಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿ ಮಹೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡುವ ವಾಗ್ದಾನ ಮಾಡಿದರು ಸಭೆಯಲ್ಲಿ ಐವತ್ತಕ್ಕೂ ಹೆಚ್ಚು ಸ್ವಾಮೀಜಿಗಳು ವೇದಿಕೆಯಲ್ಲಿದ್ದರು. ಗಣ್ಯರಾದ ಭೀಮನಗೌಡ ಪಾಟೀಲ ಸಚಿನ್ ಗೌಡ ಪಾಟೀಲ . ಎಂ ಜಿ. ಪಾಟೀಲ. ಸಿದ್ದನಗೌಡ ಪಾಟೀಲ ನಾವದಗಿ. ಸಂಗನಗೌಡ ಅಸ್ಕಿ. ಸಂತೋಷ ಗೌಡ ದೊಡ್ಡಮನಿ .ಮುತ್ತುರಾಜ ಜಾಗೀದಾರ ಮತ್ತಿತರರು ಇದ್ದರು. ಹರಿದುಬಂದ ದೇಣಿಗೆ ಕೊಡೆಕಲ್ ಶಿವಕುಮಾರ ಶ್ರೀ ಹಾಗೂ ಚಬನೂರಿನ ರಾಮಲಿಂಗಯ್ಯ ಶ್ರೀಗಳ ಆಣತಿಯಂತೆ ಸಭೆಯಲ್ಲಿ ಭಾಗವಹಿಸಿದ ಸ್ವಾಮೀಜಿಗಳು ಗಣ್ಯರು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಕ್ತರು ಪಟ್ಟಾಧಿಕಾರ ಮಹೋತ್ಸವಕ್ಕೆ ನಗ ನಾಣ್ಯ ಸಮೇತ ಹಲವು ರೀತಿಯ ದಾನ ನೀಡುವ ವಾಗ್ದಾನ ಮಾಡಿದರು. ಕೆಲವರು 21 ದಿನಗಳ ಕಾಲ ನಡೆಯುವ ಪುರಾಣ ಪ್ರವಚನ ದಲ್ಲಿ ಅನ್ನ ದಾಸೋಹದ ಜವಾಬ್ದಾರಿಯನ್ನು ವಹಿಸಿಕೊಂಡರೆ  ಒಬ್ಬ ಭಕ್ತರೇ ಮೂರು ದಿನಗಳ ಮಹೋತ್ಸವ ಕಾರ್ಯಕ್ರಮದಲ್ಲಿ ಅನ್ನ ಸಂತರೆ​‍್ಣ ಜವಾಬ್ದಾರಿಯನ್ನು ಉಳಿಸಿಕೊಂಡರು. ಮೂರು ದಿನಗಳ ಮಹೋತ್ಸವಕ್ಕೆ ಬೇಕಾದ ಎಲ್ಲಾ ಸಿದ್ಧತೆ ಗೆ ನೆರವು ನೀಡುವುದಾಗಿ ಅನೇಕರು ತಮ್ಮ ಹೆಸರು ಬರಿಸುವ ಮೂಲಕ ತಮ್ಮ ಭಕ್ತಿ ಭಾವವನ್ನು ಮೆರೆದರು. 


ಸುದ್ದಿ ಓದಿ