ಸ್ಪರ್ಧೆ ಅಯೋಜಿಸುವ ಮೂಲಕ ಪ್ರತಿಭೆಗಳು ಹೊರತರಲು ಸಾಧ್ಯ: ಹೆಚ್.ಎನ್. ಮೊಹಮ್ಮದ್
ಹೊಸಪೇಟೆ 26: ವಿಧ್ಯಾರ್ಥಿಗಳಿಗೆ ಪ್ರಬಂದ ಸ್ಪರ್ಧೆಗಳನ್ನು ಅಯೋಜಿಸುವ ಮೂಲಕ ಅವರಲ್ಲಿ ಇರುವ ಸುಪ್ತ ಪ್ರತಿಭೆಗಳು ಹಾಗೂ ಕೌಶಲ್ಯಗಳನ್ನು ಹೊರತರಲು ಸಾಧ್ಯವಾಗುತ್ತದೆ ಎಂದು ಅಧ್ಯಕ್ಷರಾದ ಹೆಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ ಹೇಳಿದರು.
ಇಂದು ಹೊಸಪೇಟಯ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ವಾಮಿ ವಿವೇಕಾನಂದ ಶಿಕ್ಷಣ ಮತ್ತು ಗ್ರಾಮೀಣ ಅಭಿವೃಧ್ಧಿ ಸಂಸ್ಥೆ, ಎಂ. ಕಲ್ಲಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಪದವಿ ಕಾಲೇಜು ವಿಧ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೊಸಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ ರವರು ಭಾಗವಹಿಸಿ ಮಾತನಾಡಿ ಪ್ರತಿ ಕಾಲೇಜಿನಲ್ಲಿ ಪಠ್ಯ ವಿಷಯಗಳ ಜೊತೆಯಲ್ಲಿಯೇ ಇಂತಹ ಜೀವನಕ್ಕೆ ಉಪಯೋಗವಾಗುವಂತಹ ತರಬೇತಿ ಕೌಶಲ್ಯಗಳನ್ನು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳುವುದು ಸಮಾಜದ ಉತ್ತಮ ಬೆಳವಣೆಗೆಯಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಚರಿತ್ರೆ ವಿಭಾಗದ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆಯವರು ಕಾರ್ಯವನ್ನು ಉದ್ದೇಶಿಸಿ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ಕೆ. ಶಿವಪ್ಪ, ಪ್ರಾಂಶುಪಾಲರು, ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರವರು ವಹಿಸಿಕೊಂಡಿದ್ದರು.
ಅತಿಥಿಗಳಾಗಿ ಡಾ. ಕೆ.ಪನ್ನಂಗಧರ, ನಿವೃತ್ತ ಪ್ರಾಂಶುಪಾಲರು, ಕಾರ್ಯಕ್ರಮದಲ್ಲಿ ಕಾಲೇಜು ಉಪನ್ಯಾಸಕರು ಸಿಬ್ಬಂಧಿ ವರ್ಗದವರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಾಗರಾಜ್, ನಿವೃತ್ತ ಉಪನ್ಯಾಸಕರು ಮತ್ತು ಬಡೀಗೇರ್ ಮೌನೇಶ್ ಸಹಾಯಕ ಪ್ರಾಧ್ಯಾಪಕರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.