ಕುರುಬ ಸಮಾಜ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ
ಶಿಗ್ಗಾವಿ 28: ತಾಲೂಕ ಕುರುಬರ ಸಮಾಜದ ವತಿಯಿಂದ 75 ನೇ ಅಮೃತ ಮಹೋತ್ಸವ ಅಂಗವಾಗಿ 21-22 ನೇ ಸಾಲಿನ ಹಾಲುಮತ ಸಮಾಜದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ, ಬಡ್ತಿ ಹೊಂದಿದ ಸರಕಾರಿ ನೌಕರರಿಗೆ ಮತ್ತು ಪುರಸಭೆ, ಗ್ರಾಮ ಪಂಚಾಯತಿ ಚುನಾಯಿತರಾದ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ದಿ: ಅ 29 ಸೋಮವಾರದಂದು ಪಟ್ಟಣದ ಸಂಗನಬಸವ ಮಂಗಲ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕುರುಬ ಸಮಾಜದ ಸದಸ್ಯರಾದ ಪರುಶರಾಮ ಸತ್ಯಪ್ಪನವರ ಹಾಗೂ ಗೌಡಪ್ಪ ಬನ್ನೆ ಪ್ರಕಟಣೆಗೆ ಕೋರಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಕಾಗಿನಲೆ ಕನಕಪೀಠ, ಸಾನಿಧ್ಯ ಸಂಗನಬಸವ ಮಹಾಸ್ವಾಮಿಗಳು ಶಿಗ್ಗಾವಿ, ಶಿವಪುತ್ರಯ್ಯಸ್ವಾಮಿಗಳು ಕೆಂಡದಮಠ ಬಂಕಾಪೂರ, ಶಿದ್ದಯ್ಯಸ್ವಾಮಿಗಳು ಕೆಂಡದಮಠ ಬಂಕಾಪೂರ, ರೇವಣಸಿದ್ದಯ್ಯಸ್ವಾಮಿಗಳು ಕೆಂಡದಮಠ ಬಂಕಾಪೂರ, ಕಲ್ಲಪ್ಪಜ್ಜಸ್ವಾಮಿಗಳು ಹೊನ್ನಾಪುರ, ಉದ್ಘಾಟಕರಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಧ್ಯಕ್ಷತೆ ಶಿವಾನಂದ ರಾಮಗೇರಿ, ಗೌರವ್ಹಾನಿತ ಅತಿಥಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜ್ಯೋತಿ ಬೆಳಗಿಸುವರು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ, ಮುಖ್ಯ ಅತಿಥಿಗಳಾಗಿ ವಿ.ಪ.ಸದಸ್ಯರಾದ ಸಲೀಂ ಅಹ್ಮದ, ಪ್ರದೀಪ ಶೆಟ್ಟರ, ಷಣ್ಮುಖಪ್ಪ ಶಿವಳ್ಳಿ, ಸೈಯದ ಅಜ್ಜಂಪೀರ ಖಾದ್ರಿ, ಸೋಮಣ್ಣ ಬೇವಿನಮರದ, ಸಂಜೀವಕುಮಾರ ನೀರಲಗಿ, ಯಾಸಿರಖಾನ ಪಠಾಣ, ಮಾರುತಿ ಹರಿಹರ, ಮಲ್ಲಪ್ಪ ರಾಮಗೇರಿ, ಪಕ್ಕೀರ್ಪ ಕುಂದೂರ, ಪರುಶರಾಮ ದಿವಾನರ, ಶ್ರೀಕಾಂತ ದುಂಡಿಗೌಡ್ರ, ಶಶಿಧರ ಯಲಿಗಾರ, ಗಂಗಪ್ಪ ಗಡ್ಡೆ ಸೇರಿದಂತೆ ವಿಶೇಷ ಉಪನ್ಯಾಸವನ್ನು ಸಾಮಾಜಿಕ ಹೋರಾಟಗಾರ ನಿಕೇತರಾಜ ಮೌರ್ಯ ನಿರ್ವಹಿಸುವರು ಎಂದು ಆಯೋಜಕರು ತಿಳಿಸಿದ್ದಾರೆ.