ನೆಟೆರೋಗ ನಿಯಂತ್ರಿಸಲು ಮುಂಜಾಗ್ರತೆ ವಹಿಸಿ: ಜೋಶಿ
ತಾಳಿಕೋಟಿ 16: ತೊಗರಿ ಬೆಳೆಗೆ ಬರುವ ನೆಟೆರೋಗವನ್ನು ತಗ್ಗಿಸಲು ರೈತರು ತೊಗರಿ ಬೀಜ ಬಿತ್ತುವಾಗ ಟೈಕೊ ಡರ್ಮಾ ಪುಡಿಯನ್ನು ಪ್ರತಿ ಕೆಜಿಗೆ 5 ಗ್ರಾಂ ಬೆರಸಿ ಬಿತ್ತಬೇಕು ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹೇಶ ಜೋಶಿ ತಿಳಿಸಿದ್ದಾರೆ. ರೈತರು ಬದಲಿ ಬೀಜಗಳನ್ನು ಒಂದೇ ಹೊಲದಲ್ಲಿ ಬಿತ್ತಿದಾಗ ನೆಟೆರೋಗದ ಪ್ರಭಾವವು ತಗ್ಗುತ್ತದೆ ಮತ್ತು ನೆಟೆರೋಗ ನಿರೋಧಕ ತಳಿಗಳಾದ ಜಿ.ಆರ್.ಜಿ.-811 ಮತ್ತು ಜಿ.ಆರ್.ಜಿ.-152 ಬೆಳೆಗಳು ಕೇಂದ್ರದಲ್ಲಿ ಲಭ್ಯವಿದ್ದು ಸದರಿ ತಳಿಗಳ ಉಪಯೋಗವನ್ನು ರೈತರು ತಪ್ಪದೆ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.