ಸೆ 21 ರಿಂದ ತಾಜ್‍ಮಹಲ್ ಪ್ರವಾಸಿಗರ ವೀಕ್ಷಣೆಗೆ ಮುಕ್ತ
ಆಗ್ರಾ, ಸೆಪ್ಟೆಂಬರ್ 7: ಕರೋನವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ವಿಶ್ವಪ್ರಸಿದ್ಧ ತಾಜ್‍ಮಹಲ್ ಮತ್ತು ಆಗ್ರಾ ಕೋಟೆ ಸೆ 21 ರಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿವೆ.
ಸೆ 21 ರಿಂದ ವಿಶ್ವಪ್ರಸಿದ್ಧ ತಾಜ್ ಮಹಲ್ ಮತ್ತು ಐತಿಹಾಸಿಕ ಕೆಂಪು ಕೋಟೆಯನ್ನು ಪ್ರವಾಸಿಗರಿಗಾಗಿ ತೆರೆಯಲಾಗುವುದು ಪ್ರವಾಸಿಗರು ಕಟ್ಟುನಿಟ್ಟಾಗಿ ಕೊವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಭು ನಾರಾಯಣ್ ಸಿಂಗ್ ಸೋಮವಾರ ಹೇಳಿದ್ದಾರೆ.
ಆಗ್ರಾದಲ್ಲಿನ ಇತರ ಎಲ್ಲಾ ಸ್ಮಾರಕಗಳನ್ನು ಸೆ 1 ರಿಂದಲೇ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ಸೋಮವಾರ ಪರಿಶೀಲನೆಯ ನಂತರ ತಾಜ್‍ಮಹಲ್ ಮತ್ತು ಆಗ್ರಾ ಕೋಟೆಯನ್ನು ಸಹ ತೆರೆಯುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.