ರಾಣೆಬೆನ್ನೂರ

ಟ್ಯಾಗೂರು ಶಿಕ್ಷಣ ಸಂಸ್ಥೆ : ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟ

ಟ್ಯಾಗೂರು ಶಿಕ್ಷಣ ಸಂಸ್ಥೆ : ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟ

ರಾಣೇಬೆನ್ನೂರು ಮೇ 13 ಇಲ್ಲಿನ ಪ್ರತಿಷ್ಠಿತ ಟ್ಯಾಗೂರು  ಶಿಕ್ಷಣ ಸಂಸ್ಥೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶವು ಪ್ರಕಟವಾಗಿದ್ದು, ಶೇ.96. ಅಂಕ ಗಳಿಸಿ ಇಲ್ಲಿನ ವಿದ್ಯಾರ್ಥಿಗಳು  ಎಂದಿನಂತೆ ತಮ್ಮ ಸಾಧನೆ ಮೆರೆದು ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.     ಡಿಸ್ಟಿಂಕ್ಷನ್ 32, 90 ಪ್ರಥಮ, ಹಾಗೂ ದ್ವಿತೀಯ 20. ಉತ್ತೀರ್ಣರಾಗಿದ್ದಾರೆ. 597 ಅಂಕ ಗಳಿಸಿದ ವಿದ್ಯಾರ್ಥಿ ನಯನಾ ವ್ಯೆ ಗುತ್ತಲ ಶಾಲೆಗೆ ಪ್ರಥಮ ಸ್ಥಾನದಲ್ಲಿದ್ದಾಳೆ. ಹಿಂದಿ -100. ಸಮಾಜ ವಿಜ್ಞಾನ 95. ವೈಷ್ಣವಿ ಬಿ. ಉಮ್ಮನಗೌಡರ (593) ದ್ವಿತೀಯ ಸ್ಥಾನ, ವೈಷ್ಣವಿ  ಜಿ. ಅಂಗಡಿ(585) ತೃತೀಯ ಸ್ಥಾನ. ಸಾಧನೆ ಮಾಡಿ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ ಚೇರ್ಮನ್ ಡಾ: ಬಸವರಾಜ ಎಸ್‌. ಕೇಲಗಾರ,ಕಾರ್ಯದರ್ಶಿ ಕೆ.ವಿ. ಶ್ರೀನಿವಾಸ್, ಮುಖ್ಯೋಪಾಧ್ಯಾಯ ಪ್ರಕಾಶ್ ಚೌಟಗಿ,ಮತ್ತು ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಪ್ರಾಧ್ಯಾಪಕರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ. 


ಸುದ್ದಿ ಓದಿ