ರಾಷ್ಟ್ರೀಯ

ಕೋವಿಡ್ 19 : ರಾಮದಾಸ್ ಅಠಾವಳೆಗೆ ಸೋಂಕು ದೃಢ

ಕೋವಿಡ್ 19 : ರಾಮದಾಸ್ ಅಠಾವಳೆಗೆ ಸೋಂಕು ದೃಢ

ಮುಂಬೈ, ಅ 27 :ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಅಧ್ಯಕ್ಷ ರಾಮದಾಸ್ ಅಠಾವಳೆ ಅವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.ಈ ಕುರಿತು ಮಂಗಳವಾರ ಸ್ವತಃ 60 ವರ್ಷ ವಯಸ್ಸಿನ ರಾಮದಾಸ್‍ ಅವರೇ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಇತ್ತೀಚೆಗೆ ತಮ್ಮ ಸಂಪರ್ಕಕ್ಕೆ ಬಂದ ಎಲ್ಲರಿಗೂ, ಪರೀಕ್ಷೆಗಳಿಗೆ ಒಳಗಾಗಲು ಮತ್ತು ಪೂರ್ಣ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಮನವಿ ಮಾಡಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕೇಂದ್ರ ಸಚಿವ ರಾಮದಾಸ್ ಅವರು ಸೋಮವಾರ ಜನಸಂದಣಿಯಿದ್ದ  ಸಮಾರಂಭದಲ್ಲಿ ಪಾಲ್ಗೊಂಡಿದ್ದರು, ನಟಿಯರಾದ ಪಾಯಲ್ ಘೋಷ್, ಸೋನಿ ಕನಿಷ್ಕಾ, ವಕೀಲ ನಿತಿನ್ ಸತ್ಪೂತ್, ರಿಯಾಲ್ಟರ್ ಯೋಗೇಶ್ ಕಾರ್ಕೆರಾ ಮತ್ತು ಉದ್ಯಮಿ ಅಂಕುಶ್ ಚಫೇಕರ್ ಅವರು ಈ ಸಮಾರಂಭದಲ್ಲಿ ಔಪಚಾರಿಕವಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಗೆ ಸೇಪರ್ಡೆಯಾಗಿದ್ದಾರೆ. 

  

ಸುದ್ದಿ ಓದಿ