ಜಮಖಂಡಿ

ಟಿಎಪಿಸಿಎಂಎಸ್‌ನ ಚುನಾವಣೆ : ಪೊಲೀಸ್‌ರು- ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ

ಟಿಎಪಿಸಿಎಂಎಸ್‌ನ ಚುನಾವಣೆ : ಪೊಲೀಸ್‌ರು- ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ

ಜಮಖಂಡಿ 01: ಟಿಎಪಿಸಿಎಂಎಸ್‌ನ ಚುನಾವಣೆ ಹಿನ್ನಲೆಯಲ್ಲಿ ಮತಗಟ್ಟೆ ಹತ್ತಿರ ಪೊಲೀಸ್‌ರು ಮತ್ತು ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.ಜಮಖಂಡಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಚುನಾವಣಾ ಹಿನ್ನಲೆಯಲ್ಲಿ ನಗರದ ಎಪಿಎಂಸಿ ಹತ್ತಿರ ಶಾಸಕರ ಹಿರಿಯ ಪ್ರಾಥಮಿಕ ಸರಕಾರಿ ಶಾಲೆ ಗೀರೀಶ ನಗರದ ಶಾಲೆಯ ಮತಗಟ್ಟೆಯ ವ್ಯಾಪ್ತಿಯ ಆವರಣದ ಬಿಳಿಗೆರೆ ಒಳಗಡೆನೆ ಕಾಂಗ್ರೆಸ್, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತಿದ್ದರು.  

ಸಿಪಿಐ, ಪೊಲೀಸ್‌ರು ಕಾಂಗ್ರೆಸ್ ಏಜೆಂಟರು ಅಮಾನತ್ತುಗೊಳಿಸಿ: ಟಿಎಪಿಸಿಎಂಎಸ್‌ನ ಚುನಾವಣೆಯಲ್ಲಿ ಇಲ್ಲಿನ ಪೊಲೀಸ್‌ರು ಕಾಂಗ್ರೆಸ್‌ನ ಎಜೆಂಟರತೆ ವರ್ತಿಸುತಿದ್ದಾರೆ, ಬಿಜೆಪಿ ಪಕ್ಷದ ಹಿರಿಯ ಮುಖಂಡ ಸುರೇಶಗೌಡ ಪಾಟೀಲ ಅವರಿಗೆ ಸಿಪಿಐ ಮಲ್ಲಪ್ಪ ಮಡ್ಡಿ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಎಎಸ್‌ಐ ಭೀಮಶಿ ಮಧುರಖಂಡಿ, ಪೊಲೀಸ್ ಪೆದೆ ಸಿದ್ದು ಕಲಾಟೆ ಅವರು ಎಸ್‌ಸಿ ಜಿಲ್ಲಾಮೋರ್ಚಾ ಅಧ್ಯಕ್ಷ ಪ್ರಕಾಶ ಕಾಳೆ ಅವರ ಕೊರಳ ಪಟ್ಟಿ ಹಿಡಿದು ಸಾರ್ವಜನಿಕವಾಗಿ ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಿಪಿಐ ಮತ್ತು ಪೊಲೀಸ್ ಸಿಬ್ಬಂದಿಗಳನ್ನು ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಆಗ್ರಹಿಸಿದರು. 

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮತಗಟ್ಟೆವರೆಗೆ ಕಾಂಗ್ರೆಸ್ ಬೆಂಬಲಿತರ ವಾಹನಗಳನ್ನು ಒಳಗಡೆ ಬಿಟ್ಟು ನಮ್ಮ ಪಕ್ಷದ ಬೆಂಬಲಿಗರ ವಾಹನಗಳನ್ನು ಒಳಗಡೆ ಬಿಡದೆ ತಾರತಮ್ಯ ಮಾಡುತ್ತಾ ಕಾಂಗ್ರೆಸ್ ಪಕ್ಷದ ಕೈಗೊಂಬೆಯಂತೆ ವರ್ತಿಸುತಿದ್ದಾರೆ ಇದು ಖಂಡನೀಯ. ಇವರ ಮೇಲೆ ಕ್ರಮ ಜರುಗಿಸದೆ ಇದ್ದರೆ ಗೃಹ ಸಚಿವರಿಗೆ ಮನವಿ ಪತ್ರ ನೀಡುವದರ ಜೊತೆ ಊಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಪಕ್ಷಪಾತ ಮಾಡುವದರ ಮೂಲಕ ಜನವಿರೋಧಿ ನೀತಿಯನ್ನು ಭಾಜಪ ಘಟಕ ತೀವ್ರವಾಗಿ ಖಂಡಿಸಿದರು, ಜನ ವಿರೋಧಿ ಅಧಿಕಾರಿಗಳನ್ನು ತಕ್ಷಣ ಅಮಾನತ್ತು ಮಾಡಿ ಪ್ರಜಾತಂತ್ರಿಯ ವ್ಯವಸ್ಥೆಯನ್ನು ಕಾಪಾಡಬೇಕು ಎಂದು ಮುಖಂಡರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್‌.ನ್ಯಾಮಗೌಡ, ಏಗಪ್ಪ ಸವದಿ, ಅಜಯ ಕಡಪಟ್ಟಿ, ಈಶ್ವರ ಆದೇಪ್ಪನ್ನವರ, ಅರವಿಂದಗೌಡ ಪಾಟೀಲ, ಸಂಗಮೇಶ ತೇಲಿ, ಸರ್ವೋತಮ್ಮ ಗಲಗಲಿ, ಬಿ.ಎಮ್‌.ಚನ್ನಾಳ, ಬಸವರಾಜ ಬಿರಾದರ, ಶಿವಾನಂದ ಪಾಟೀಲ, ಪುಂಡಲೀಕ ಪಾಲಬಾವಿ, ರಾಜು ಪಟ್ನದ, ರಾಜುಗೌಡ ಪಾಟೀಲ ಇತರರು ಇದ್ದರು. 

ಸಿಪಿಐ ಮಲ್ಲಪ್ಪ ಮಡ್ಡಿ ಸ್ಪಷ್ಟನೆ: ನಾವು ಯಾವುದೆ ಪಕ್ಷದ ಮುಖಂಡರ ವಾಹನಗಳನ್ನು ಮತಗಟ್ಟೆವರೆಗೆ ಬಿಟ್ಟಿಲ್ಲ, ಮತಗಟ್ಟೆಯ ಗೇಟಿನ ಮುಂದೆ ಯಾರು ನಿಲ್ಲಬೇಡಿ, ಹಾಗೂ ರಸ್ತೆ ಮೇಲೆ ನಿಲ್ಲಬೇಡಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಸಾಕಷ್ಟು ಭಾರಿ ಹೇಳಿದರೂ ಅವರು ಯಾರು ಕೇಳಲಿಲ್ಲ, ಸ್ಥಳಕ್ಕೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರು ಬಂದಿದ್ದ ಸಂದರ್ಭದಲ್ಲಿ ಸುರೇಶಗೌಡರು, ಪ್ರಕಾಶ ಕಾಳೆ ಅವರು ನಮ್ಮ ಸಿಬ್ಬಂದಿ ಜೊತೆ ಮಾತಿಗೆ ಮಾತು ಬೆಳೆಸಿ ಅನುಚಿತವಾಗಿ ಮಾತಾಡಿದರು. ನಾವು ಯಾರಿಗೂ ತಾರತಮ್ಯ ಮಾಡಿಲ್ಲ ಎಂದು ಸಿಪಿಐ ಮಲ್ಲಪ್ಪ ಮಡ್ಡಿ ಸುದ್ದಿಗಾರರಿಗೆ ತಿಳಿಸಿದರು.


ಸುದ್ದಿ ಓದಿ