ತ್ಯಾಗ ಬಲಿದಾನದ ಸಂಕೇತ ಮೊಹರಂ ಹಬ್ಬ: ಸಂಗನಬಸವ ಶ್ರೀ
ಲೋಕದರ್ಶನ ವರದಿ
ಶಿಗ್ಗಾವಿ 31: ಮೊಹರಂ ಹಬ್ಬದ ಕೊನೆಯ ದಿನದಂದು ನಗರದ ಸಾಲಗೆರಿ ಓಣಿಯಲ್ಲಿನ ದೊಡ್ಡ ಮಸೀದಿಯ ಇಮಾಮ್ ಎ ಹಸನ್ ಮತ್ತು ಇಮಾಮ್ ಎ ಹುಸೇನ್ ಮಕಾನನಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಭಾವೈಖ್ಯತೆಯ ಸಂದೇಶ ಸಾರುವ ನಿಟ್ಟಿನಲ್ಲಿ ಹಿಂದು ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪೂಜೆ ಮತ್ತು ಫಾತೆಹಾಖ್ವಾನಿಯನ್ನು ನೆರವೇರಿಸಿದರು.
ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ವಿರಕ್ತಮಠದ ಸ್ವಾಮೀಜಿ ಸಂಗನಬಸವ ಮಹಾಸ್ವಾಮೀಜಿಗಳು ಮಾತನಾಡಿ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಮೊಹರಂ ಹಬ್ಬದ ಶುಭಾಶಯಗಳನ್ನು ಕೋರಿ ನಾಡಿನಲ್ಲಿ ಸುಖ. ಶಾಂತಿ. ನೆಮ್ಮದಿ ನೆಲಸಲಿ ಶಿಶುವಿನಹಾಳದ ಶರೀಫ ಸಾಹೇಬರು . ಬಾಡದ ಕನಕದಾಸರು. ನಡೆದಾಡಿದ ಈ ಪುಣ್ಯಭೂಮಿಯಿಂದ ಭ್ರಾತೃತ್ವ. ಸಹೋದರತೆ ಸಹಬಾಳ್ವೆ ಯ ಸಂದೇಶ ರವಾನೆಯಾಗಲೆಠದು ಆಶೀರ್ವಚನ ನೀಡಿದರು.
ಕರ್ನಾಟಕ ರಾಜ್ಯ ಕಾರ್ಮಿಕರ ವಿಕಾಸ ವೇದಿಕೆಯ ರಾಜ್ಯ ಗೌರವಾಧ್ಯಕ್ಷ ಜಿಲಾನಿ ಜಂಗ್ಲಿ. ಇಮಾಮ ಹುಸೇನ ಆದಮಬಾಯಿ. ಪುರಸಭೆಯ ಸದಸ್ಯ ದಯಾನಂದ ಅಕ್ಕಿ. ಯುವ ನಾಯಕ ಪ್ರಶಾಂತ್ ಬಡ್ಡಿ. ಮುತ್ತು ಯಲಿಗಾರ. ಫಕ್ಕಿರೇಶ್ ಯಲಿಗಾರ.ಸಾಲಗೆರಿ ಓಣಿಯ ಅಹಲೆ ಸುನ್ನತುಲ ಜಮಾತ ನ ಅಧ್ಯಕ್ಷರಾದ ಅಸ್ಕರಲಿ ಮುಕ್ಕೆರಿ.ಮಖಬಲ್ ಅಹಮದ್ ಗುಜ್ಜರ್. ಅಬ್ದುಲ್ ರಶೀದ್ ಸಾಲಗೇರಿ. ರಬ್ಬಾನಿ ಗೋಟಗೊಡಿ. ಮಾನ್ಯ ಜಮಾತನ ಗೌರವಾನ್ವಿತ ಎಲ್ಲಾ ಸದಸ್ಯರು. ಮೊಹಲ್ಲಾದ ಸಮಸ್ತ ಯುವಕರು ಸರ್ವ ಹಿಂದೂ ಮುಸ್ಲಿಂ ಬಾಂಧವರು ಸಡಗರದಿಂದ ಸಾಮೂಹಿಕವಾಗಿ ಭಾಗವಹಿಸಿದರು