ರಾಣೆಬೆನ್ನೂರ

ಆರ್‌ಟಿಈಎಸ್ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ

ಆರ್‌ಟಿಈಎಸ್ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ

ಲೋಕದರ್ಶನ ವರದಿ 

ರಾಣೀಬೆನ್ನೂರು 19:  ಸ್ವಾಮಿ ವಿವೇಕಾನಂದರು ಭಾರತ ದೇಶವು ಅಭಿವೃದ್ಧಿ ಕಾಣಬೇಕಾದರೆ ಯುವಕರಿಂದ ಮಾತ್ರ ಸಾದ್ಯವಿದೆ ಎಂದು ಬಲವಾಗಿ ನಂಬಿದ್ದರು. ಅದೇ ರೀತಿ ಯುವಕರು ಈ ದೇಶದ ಸಂಪತ್ತಾಗಬೇಕು. ಆದರೆ ದುರಾದೃಷ್ಠ ಯುವಜನಾಂಗ ಮಾನಸಿಕವಾಗಿ ಬಳಲಿ ಬೆಂಡಾಗಿ ಜೀವನವೇ ಬೇಸರದಿಂದ ಕಳೆಯುವಂತಾಗುತ್ತಿರುವುದು ಈ ದೇಶದ ಬಹುದೊಡ್ಡ ದುರಂತದ ಸಂಗತಿಯಾಗಿದೆ ಎಂದು ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ ಹೇಳಿದರು. 

ಅವರು ನಗರ ಹೊರ ವಲಯದ ಆರ್‌ಟಿಈಎಸ್ ಕಾಲೇಜು ಸಾಹುಕಾರ ಸಭಾಭವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ತಾಲೂಕು ಕಾನೂನು ಸೇವ ಸಮಿತಿ ವಕೀಲರ ಸಂಘ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಮತ್ತು ರಾಷ್ಟ್ರೀಯ ಸಂಪನ್ಮೂಲ ಹಾಗೂ ಯುವಜನತೆ ಅರಿವು ಜಾಗೃತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ವಿಶ್ವದ ಎಲ್ಲಾ ರಾಷ್ಟ್ರಗಳು ಭಾರತದ ಯುವಜನತೆಯ ಆಂತರಿಕ ಶಕ್ತಿಯನ್ನು ಮೆಚ್ಚಿಕೊಳ್ಳುತ್ತಾರೆ. ಅಲ್ಲದೇ ಭಾರತದ ಜ್ಞಾನ ತಂತ್ರಜ್ಞಾನ ಮತ್ತು ವೈಜ್ಞಾನಿಕ ಅಭಿವೃದ್ಧಿ ಬಗ್ಗೆ ಅತೀವ ಅಭಿಮಾನದಿಂದ ಕಾಣುತ್ತಾರೆ. ಸಾರ್ವತ್ರಿಕವಾಗಿ ಈ ಕೆಲಸ ನಡೆದಾಗ ಮಾತ್ರ ಭಾರತದ ಭವಿಷ್ಯ ಭದ್ರವಾಗಲು ಸಾದ್ಯವಿದೆ ಎಂದರು.  

ಕಾಲೇಜು ಪ್ರಾಚಾರ್ಯ ಎಫ್‌.ಎಚ್‌.ಮಾಚೇನಹಳ್ಳಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಯೋಗೇಶ ಜೆ. ಅವರು ಯುವ ಜನಾಂಗ ಇಂದು ಪ್ರತಿಯೊಬ್ಬರು ಕಾನೂನಿನ ಕನಿಷ್ಠ ಜ್ಞಾನವನ್ನು ಪಡೆಯಬೇಕು, ಇದರಿಂದ ಭವಿಷ್ಯದಲ್ಲಿ ನಡೆಯಬಹುದಾದ ಯಾವುದೇ ಕಾನೂನು ಬಾಹೀರ ಚಟುವಟಿಕೆಗಳನ್ನು ನಿಬಂಧಿಸಲು ಸಾದ್ಯವಾಗುತ್ತದೆ. ಸೇವಾ ಸಮಿತಿಯು ಜನ ಸಾಮಾನ್ಯರಿಗಾಗಿ ಸಾಮಾಜಿಕ ನ್ಯಾಯವನ್ನು ಪಡೆಯುವ ನಿಟ್ಟಿನಲ್ಲಿ ಉಚಿತ ಕಾನೂನು ಬಗ್ಗೆ ಮಾಹಿತಿ ನೀಡಿ ಮಾರ್ಗದರ್ಶನ ಮಾಡುವುದರ ಜೊತೆಗೆ ಅದರ ವೆಚ್ಚವನ್ನು ರಾಷ್ಟ್ರೀಯ ಕಾನೂನು ಪ್ರಾಧಿಕಾರವು ಬರಿಸಲಿದೆ ಎಂದ ಅವರು ವಿದ್ಯಾವಂತರು ಈ ಕುರಿತು ಜನ ಸಾಮಾನ್ಯರಿಗೆ ತಿಳುವಳಿಕೆ ನೀಡುವಲ್ಲಿ ತಮ್ಮದೆ ಆದ ಸಾಮಾಜಿಕ ಸೇವೆಯನ್ನು ಸಲ್ಲಿಸಲು ಮುಂದಾಗಬೇಕು ಎಂದು ಕರೆನೀಡಿದರು.  

ಮುಖ್ಯ ಅತಿಥಿಗಳಾಗಿ ಕಾಲೇಜು ಅಧ್ಯಕ್ಷ ಸುಭಾಸ್ ಸಾಹುಕಾರ, ವಕೀಲರ ಸಂಘದ ಅಧ್ಯಕ್ಷ ಬಿ.ಹೆಚ್‌.ಬುರಡಿಕಟ್ಟಿ, ಉಪಾದ್ಯಕ್ಷ ಕುಮಾರ ಬಿ.ಮಡಿವಾಲರ, ಕಾರ್ಯದರ್ಶಿ ಜಿ.ಕೆ.ಮುಂಡಾಸದ, ಐಕ್ಯೂಎಸಿ ಡಾ:ಮಧುಕುಮಾರ, ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ:ಸರಸ್ವತಿ ಬಮ್ಮನಾಳ, ಎನ್‌.ಜಿ.ರಮೇಶ, ಕೊಟ್ರೇಶ ಬಸಾಪುರ, ಜೆ.ಕೆ.ಮಂಜುನಾಥ, ವರ್ಷಿಣಿ ಎನ್‌.ಎಂ., ರಂಜಿತಾ ಸೇರಿದಂತೆ ಮತ್ತಿತರ ಗಣ್ಯರು ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ