ಶಿಗ್ಗಾವ್

ಯುವಶಕ್ತಿ ಜಾಗೃತಗೊಳಿಸಿದ ದಿವ್ಯ ಮಾಂತ್ರಿಕ ವಿವೇಕಾನಂದ: ನಾಗರಾಜ

ಯುವಶಕ್ತಿ ಜಾಗೃತಗೊಳಿಸಿದ ದಿವ್ಯ ಮಾಂತ್ರಿಕ ವಿವೇಕಾನಂದ: ನಾಗರಾಜ

ಶಿಗ್ಗಾವಿ: ಸ್ವಾಮಿ ವಿವೇಕಾನಂದರು ಭಾರತದ ಶ್ರೇಷ್ಠತೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದ ಮಹಾನ್ ಚೇತನ  ಯುವಕರು ದೇಶದ ಭವಿಷ್ಯದ ನಿರ್ಮಾರ್ತೃಗಳು ಅಂತವರು ಸನ್ಮಾರ್ಗದಲ್ಲಿ ನಡೆದು ಉತ್ತಮ ರಾಷ್ಟ್ರ ನಿರ್ಮಾಣಮಾಡಲು ಯುವಶಕ್ತಿಯನ್ನು ಜಾಗೃತಗೊಳಿಸಿದ ದಿವ್ಯ ಮಾಂತ್ರಿಕ ಶಕ್ತಿ ಸ್ವಾಮಿ ವಿವೇಕಾನಂದರಾಗಿದ್ದರು ಎಂದು ಕ.ಸಾ.ಪ. ತಾಲೂಕಾಧ್ಯಕ್ಷ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಹೇಳಿದರು

ಪಟ್ಟಣದ  ಚನ್ನಪ್ಪ ಕುನ್ನೂರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸ್ವಾಮಿ ವಿವೇಕಾನಂದರ 158 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಅವರು ಧರ್ಮವೇ ದೇಶದ ಆತ್ಮ ಎಂದು ಹೇಳುವ ಮೂಲಕ ಧರ್ಮದ ತಳಹದಿಯ ಮೇಲೆ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ ಎಂದು ಹೇಳಿದರುವಿವೇಕ ಜಾಗೃತಿ ಬಳಗದ ಸದಸ್ಯ ಹೇಮಾವತಿ ಗಾಣಿಗೇರ ,ಮುಖ್ಯೋಪಾದ್ಯಾಯ ಸಿ. ಟಿ. ಪಾಟೀಲ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಶಿಕ್ಷಕಿ ಡಿ.ಎ.ವಡ್ಡರ, ಪ್ರೇಮಾ.ಯತ್ನಳ್ಳಿ, ಶಿಕ್ಷಕ ಎಂ. ಎ. ಗಾಣಿಗೇರ ಇದ್ದರು. ಪ್ರಾರಂಭದಲ್ಲಿ  ಐ. ವಿ. ತಾಡಪತ್ರಿಮಠ ಸ್ವಾಗತಿಸಿದರು.  ಜೆ. ಎಂ. ದೇವರಮನಿ ವಂದಿಸಿದರು. ಆಸ್ಮಾ ಕಲಾಯಗಾರ ಕಾರ್ಯಕ್ರಮ ನಿರೂಪಿಸಿದರು.

ಸುದ್ದಿ ಓದಿ