ಬೈಲಹೊಂಗಲ

ಸುತಗಟ್ಟಿ: ಶುದ್ಧ ಕುಡಿಯುವ ನೀರಿನ ಘಟಕ ನಿಷ್ಕೀಯ

ಸುತಗಟ್ಟಿ: ಶುದ್ಧ ಕುಡಿಯುವ ನೀರಿನ ಘಟಕ ನಿಷ್ಕೀಯ

ಲೋಕದರ್ಶನ ವರದಿ 


ಅನೈತಿಕ ಚಟುವಟಿಕೆ ತಾಣ, ಅಸಮರ​‍್ಕ ನಿರ್ವಹಣೆಯಿಂದ ಲಕ್ಷಾಂತರ ರೂ. ಪೋಲು: ಗ್ರಾ.ಪಂ ವಿರುದ್ಧ ನಾಗರಿಕರ ಆಕ್ರೋಶ 

ಬೈಲಹೊಂಗಲ 19: ತಾಲೂಕಿನ ಅಮಟೂರ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಬೇವಿನಕೊಪ್ಪ ಗ್ರಾಮದ ಗುರುದೇವ ನಿತ್ಯಾನಂದ ದ್ಯಾನ ಮಂದಿರದ ಆಶ್ರಮದ ಮುಂಬಾಗದಲ್ಲಿ ಅಳವಡಿಸಿದ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಒಂದು ವರ್ಷದಿಂದ ನಿಷ್ಕೀಯಗೊಂಡು ಅವ್ಯವಸ್ಥೆ ತಾಣವಾಗಿರುವದಕ್ಕೆ ನಾಗರಿಕರು ಗ್ರಾ.ಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

      ಸರಕಾರ ಒಂದು ಕಡೆ ಸಾರ್ವಜನಿಕರ ತೆರಿಗೆ ರೂಪದಲ್ಲಿ ಸಂಗ್ರಹಿಸದ ಹಣವನ್ನು ಅಭಿವೃದ್ದಿಗಾಗಿ ಹಣ ಬಿಡುಗಡೆಗೊಳಿಸಿ ಅಶುದ್ಧ ನೀರು ಸೇವನೆಯಿಂದ ಮುಕ್ತಿಗೊಳಿಸಿದ ಗ್ರಾಮೀಣ ಪ್ರದೇಶದ ಜನತೆಗೆ  ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ಘಟಕ ಸ್ಥಾಪಿಸಿದರೂ ಅದನ್ನು ಸಮರ​‍್ಕವಾಗಿ ನಿರ್ವಹಣೆಯಾಗದ ಕಾರಣ ಲಕ್ಷಾಂತರ ರೂ. ಪೋಲಾಗುತ್ತಿದೆ. ಕೇವಲ ಇದರಿಂದ ಗುತ್ತಿಗೆದಾರರಿಗೆ ಮಾತ್ರ ಹೇಳಿ ಮಾಡಿಸಿದ ಮುಷ್ಠಾನ ಬೋಜನವಾಗಿ ವರವಾಗಿ ಪರಿಣಮಿಸಿದೆ. 

     ಬೇವಿನಕೊಪ್ಪ ಗ್ರಾಮದಲ್ಲಿ ಗುರುದೇವ ನಿತ್ಯಾನಂದ ದ್ಯಾನ ಮಂದಿರದ ಆವರಣದ ಮುಂಬಾಗದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಹಲವು ತಿಂಗಳಿಂದ ತುಕ್ಕು ಹಿಡಿದು ನಿಷ್ಕಿಯಗೊಂಡು, ಯಂತ್ರೊಪಕರಣಗಳು ತುಕ್ಕು ಹಿಡಿದು ಕಿತ್ತು ಹೋಗಿವೆ. ಕಸದ ರಾಶಿ ನಿರ್ಮಾಣವಾಗಿದೆ.   

       ಈ ಯೋಜನೆ ಸರಕಾರ ಮಟ್ಟದಲ್ಲಿ ಜನಪರ ಯೋಜನೆ ಆದರೆ ಗ್ರಾಪಂ.ಅಧಿಕಾರಿಗಳ ನಿರ್ಲಕ್ಷದಿಂದ ನೀರಿನ  ಘಟಕಗಳು ಹಳ್ಳ ಹಿಡಿದಿವೆ. ಕೇವಲ ಕಾಟಾಚಾರಕ್ಕಾಗಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದು ನಾಗರಿಕರು ಗಂಭೀರವಾಗಿ ಆಪಾದಿಸುತ್ತಿದ್ದಾರೆ. ಗ್ರಾ.ಪಂ ಅಧಿಕಾರಿಗಳು, ಗುತ್ತಿಗೆದಾರರು, ಜನಪ್ರತಿನಿಧಿಗಳು ಬಂದಾಗ ಅದ್ದೂರಿಯಾಗಿ ಚಾಲನೆ ನೀಡುತ್ತಾರೆ ವಿನಹ: ನಂತರ ಅದರ ವ್ಯವಸ್ಥೆಯನ್ನು ಪರೀಶೀಲನೆ ಮಾಡುವ ಗೋಜಿಗೆ ಹೋಗುವದಿಲ್ಲ. ಇನ್ನಾದರೂ ಎಚ್ಚೆತ್ತುಗೊಂಡು ನಿಷ್ಕಿಯಗೊಂಡ ಶುದ್ದ ಕುಡಿಯುವ ನೀರಿನ ಘಟಕ ದುರಸ್ಥಿ ಮಾಡಿ ಜನರಿಗೆ ಶುದ್ದ ಕುಡಿಯುವ ನೀರಿನ ಭವನೆ ನೀಗಿಸಬೇಕೆಂದು  ಆಗ್ರಹಿಸಿದ್ದಾರೆ.  

     ತಾಲೂಕಿನಲ್ಲಿರುವ ಸುತಗಟ್ಟಿ ಬಸ್ ನಿಲ್ದಾಣ, ಹಣಮನಹಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ದೇಶನೂರ ಗ್ರಾಮದೇವಿ ದೇವಸ್ಥಾನ ಬಳಿ, ಹೊಸೂರ ಗ್ರಾಮದ ಹರಿಜನಕೇರಿಯಲ್ಲಿ ಸ್ಥಾಪಿಸಿದ ಘಟಕ ಹನಿ ನೀರು ಬಿಳದೆ ಕಳೆದ ಕಳೆದ ಎರಡು ವರ್ಷಗಳಿಂದ ನಿಷ್ಕಿಯಗೊಂಡಿವೆ. ಕಡಸಗಟ್ಟಿ ಗ್ರಾಮದ ಶುದ್ದ ಕುಡಿಯುವ ನೀರಿನ ಘಟಕದ ಬಾಗಿಲು ಮುರಿದು ಅನೈತಿಕ ಚಟುವಟಿಕೆ ತಾಣವಾಗಿ ಪರಿಣಮಿಸಿದೆ  ಎಂದು ಗ್ರಾಮಸ್ಥರು ಆಪಾದಿಸುತ್ತಿದ್ದಾರೆ. ಇಂತಹ ಅವ್ಯವಸ್ಥೆ ಘಟಕಗಳು  ಜನರಿಗೆ ಉಪಯೋಗಿಯಾಗದೆ ನಿರುಪಯುಕ್ತಗೊಂಡು ಲಕ್ಷಾಂತರ ಹಣ ಗುತ್ತಿಗೆದಾರರ ಪಾಲಾಗುತ್ತಿದೆ.  

      ಗ್ರಾಪಂ.ವ್ಯಾಪ್ತಿಯ ಜನರು ಗ್ರಾಪಂ.ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವ ಮುಂಚೆ ಅಧಿಕಾರಿಗಳು ಎಚ್ಚೆತ್ತುಕೊಂಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿ ಮಾಡಿ ಜನರಿಗೆ ಶುದ್ಧ ನೀರು ಪೂರೈಕೆ ಮಾಡುತ್ತಾರೆ ಎಂದು ಕಾದು ನೋಡುವಂತಾಗಿದೆ. 


ತಾಲೂಕಿನಲ್ಲಿ ನಿಷ್ಕೀಯಗೊಂಡ  ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ವರದಿ ತರಿಸಿಕೊಂಡು ತಕ್ಷಣ ದುರಸ್ಥಿ ಕಾರ್ಯಕ್ಕೆ ಸೂಚಿಸಲಾಗುವದು. -ಸುಭಾಸ ಸಂಪಗಾವಿ 

ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬೈಲಹೊಂಗಲ 

2ಅನಿಸಿಕೆ- 

ಸರಕಾರ ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದು ಕೆಲವು ಕಡೆ ನಾಣ್ಯ ಹಾಕಿದರೂ ಕೂಡಾ ನೀರು ಬರುವದಿಲ್ಲ. ಕೆಲವು ಘಟಕಗಳಲ್ಲಿ  ನೀರು ಪೋಲಾಗುತ್ತಿರುವುದು ಕಂಡು ಬರುತ್ತಿದೆ. ಇತ್ತ ಕಡೆ ಗಮನಹರಿಸಬೇಕಿದೆ.  

-ಪ್ರಕಾಶ ಕೆಳಗಿನಮನಿ, ಜೈ ಭೀಮ ಸಂಘರ್ಷ ಸಮಿತಿ ಮುಖಂಡರು. 


ಸುದ್ದಿ ಓದಿ