ರಾಷ್ಟ್ರೀಯ

ಕೇರಳ ಚಿನ್ನ ಕಳ್ಳ ಸಾಗಾಣಿಕೆ, ಅಮಾನತುಗೊಂಡ ಅಧಿಕಾರಿ ಶಿವಶಂಕರ್ ಬಂಧನ

ಕೇರಳ ಚಿನ್ನ ಕಳ್ಳ ಸಾಗಾಣಿಕೆ, ಅಮಾನತುಗೊಂಡ ಅಧಿಕಾರಿ  ಶಿವಶಂಕರ್  ಬಂಧನ

ತಿರುವನಂತಪುರಂ, ನವೆಂಬರ್ 24: ಕೇರಳ ಚಿನ್ನ ಕಳ್ಳ ಸಾಗಾಣಿಕೆ ಹಗರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡ ಐಎಎಸ್ ಅಧಿಕಾರಿ ಎಂ. ಶಿವಶಂಕರ್ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

 

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಶಿವಶಂಕರ್ ವಿರುದ್ಧ ದೋಷಾರೋಪಣೆ ಸಾಕ್ಷ್ಯಗಳು ದೊರೆತಿವೆ ಎಂದು ಕಸ್ಟಮ್ಸ್ ತಂಡ ತಿಳಿಸಿದೆ.ಇಡಿ ಪ್ರಕಾರ, ಈ ವರ್ಷದ ಜುಲೈನಲ್ಲಿ ಚಿನ್ನದ ಕಳ್ಳಸಾಗಣೆ ಹಗರಣ ಹೊರಬಿದ್ದ ನಂತರ ಶಿವಶಂಕರ್ ಅವರನ್ನು ಅಮಾನತುಗಿಳಿಸಲಾಗಿತ್ತು.  ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರಿಗೆ ಕಳ್ಳಸಾಗಣೆಗೆ  ಪರೋಕ್ಷ ಸಹಾಯ   ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಒಂದು ವರ್ಷದ ಹಿಂದೆ ಯುಎಇ ದೂತಾವಾಸದಲ್ಲಿ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿದ್ದ ಸ್ವಪ್ನಾ ಅವರೊಂದಿಗೆ ಜಂಟಿ ಬ್ಯಾಂಕ್ ಲಾಕರ್ ತೆರೆಯಲು ಚಾರ್ಟರ್ಡ್ ಅಕೌಂಟೆಂಟ್ ವೇಣುಗೋಪಾಲ್ ಅಯ್ಯರ್ ಅವರನ್ನು ಶಿವಶಂಕರ್ ಪ್ರೇರೇಪಿಸಿದ್ದರು ಎಂದೂ  ಇಡಿ ಆರೋಪಿಸಿದೆ. 

ಸುದ್ದಿ ಓದಿ