ಸತ್ಯ ಖಂಡಿತ ಪ್ರಕಾಶಿಸುತ್ತದೆ : ಸುಶಾಂತ್ ಸೋದರಿ ಶ್ವೇತಾ ಸಿಂಗ್
ಮುಂಬೈ,
ನ 24: ಸುಶಾಂತ್ ಸಿಂಗ್ ರಜಪೂತ್ ಅವರ ದುರಂತ ನಿಧನದ ಬಳಿಕ ನ್ಯಾಯವನ್ನು ಕೋರಿ ಆನ್ ಲೈನ್
ಅಭಿಯಾನ ಆರಂಭಿಸಿರುವ ಅವರ ಸಹೋದರಿ ಶ್ವೇತಾ ಸಿಂಗ್
ಕೀರ್ತಿ, ‘ಸತ್ಯ ಖಂಡಿತಾ ಪ್ರಕಾಶಿಸುತ್ತದೆ’ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಜಗತ್ತಿನಾದ್ಯಂತ ಇರುವ ಸುಶಾಂತ್ ಸಿಂಗ್ ಅಭಿಮಾನಿಗಳ ಬೆಂಬಲದೊಂದಿಗೆ ನ್ಯಾಯಕ್ಕಾಗಿ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
‘ನಾನು ತುಂಬಾ ನೋವನ್ನು ಅನುಭವಿಸಿದ್ದೇನೆ ಮತ್ತು ಇನ್ನೂ ಬಹಳಷ್ಟು ಅನುಭವಿಸುತ್ತಿದ್ದೇನೆ. ಸಾಮಾನ್ಯ ನಿಯಮಿತ ಜೀವನವನ್ನು ನಡೆಸಲು ನನಗೆ ಅನುಮತಿ ಇದೆ ಎಂದು ನಾನು ಭಾವಿಸುವ ಸಮಯದಲ್ಲಿ, ಇತರ ಕೆಲವು ನೋವುಗಳು ಗುಣಪಡುವ ಪ್ರಕ್ರಿಯೆ ನಿಧಾನವಾಗಿದೆ. ಅದನ್ನು ನಿವಾರಿಸಿಕೊಳ್ಳಲು ತಾಳ್ಮೆ ಬೇಕು’ ಎಂದಿದ್ದಾರೆ.
‘ನನಗೆ ಒಂದು ವಿಷಯ ಖಚಿತವಾಗಿ ತಿಳಿದಿದೆ. ಖಂಡಿತ ದೇವರು ಇದ್ದಾನೆ. ಅವನು ಎಂದಿಗೂ ತನ್ನ ನಿಜವಾದ ಭಕ್ತರನ್ನು ಬಿಟ್ಟುಕೊಡುವುದಿಲ್ಲ. ನೋವುಂಟುಮಾಡುವ ಅನೇಕ ಹೃದಯಗಳಿವೆ ಎಂದು ಅವನಿಗೆ ತಿಳಿದಿದ್ದು, ಸತ್ಯವು ಹೊಳೆಯುವಂತೆ ನೋಡಿಕೊಳ್ಳುತ್ತಾನೆ. ನಾವೆಲ್ಲರೂ ಆಕ್ರಮಣಕಾರಿಯಾದರೆ, ಶೀಘ್ರದಲ್ಲೇ ಶಕ್ತಿಯಿಂದ ಹೊರಗುಳಿಯುತ್ತೇವೆ, ಆದರೆ ನಂಬಿಕೆ ಮತ್ತು ತಾಳ್ಮೆ ಜಯ ತಂದುಕೊಡುತ್ತದೆ’ ಎಂದು ಹೇಳಿದ್ದಾರೆ.
ಈ ವರ್ಷದ ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಮುಂಬೈನಲ್ಲಿನ ತಮ್ಮ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಸಾವಿನ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ನಡೆಸುತ್ತಿವೆ.