ದೈಹಿಕ, ಮಾನಸಿಕ ಸ್ಥಿರತೆಗೆ ಸೂರ್ಯ ನಮಸ್ಕಾರ- ಡಾ. ಕಿರಣ ಮುತ್ನಾಳಿ
ಚಿಕ್ಕೋಡಿ 14: ಕರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಮನುಷ್ಯನ ದೈಹಿಕ ಆರೋಗ್ಯದಂತೆಯೇ ಮಾನಸಿಕ ಆರೋಗ್ಯವೂ ಅತ್ಯಂತ ಪ್ರಮುಖವಾದದ್ದು. ಮಾನಸಿಕ ದೃಢತೆಗೆ ಸೂರ್ಯ ನಮಸ್ಕಾರ ಅತ್ಯಂತ ಪ್ರಮುಖವಾದದ್ದು ಎಂದು ಕೆ.ಎಲ್.ಇ ಆಯುವರ್ೇದ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯಕೀಯ ನಿದರ್ೇಶಕರಾದ ಡಾ. ಕಿರಣ ಮುತ್ನಾಳಿ ಹೇಳಿದರು. ಅವರು ಇಂದು ಏರ್ಪಡಿಸಿದ ಸೂರ್ಯ ನಮಸ್ಕಾರದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ
ಕೇಂದ್ರ ಆಯುಷ್ಯ ಮಂತ್ರಾಲಯ ಸಂಕ್ರಾಂತಿಯ ಶುಭ ದಿನದಂದು ದೇಶಾದ್ಯಂತ ಸೂರ್ಯನಮಸ್ಕಾರ ನಡೆಸಲು ಕರೆಕೊಟ್ಟ ಪರಿಣಾಮ ಇಂದು ನಮ್ಮ ಕಾಲೇಜಿನಲ್ಲಿ ಸೂರ್ಯನಮಸ್ಕಾರ ಮಾಡಲಾಗಿದೆ. ಸೂರ್ಯ ನಮಸ್ಕಾರವು 12 ಹಂತದ ಆಸನ(ಭಂಗಿ)ಗಳಿಂದ ಕೂಡಿದೆ, ಯೋಗಾಸನಗಳಲ್ಲಿ ಸೂರ್ಯ ನಮಸ್ಕಾರ ಅತ್ಯಂತ ಶಕ್ತಿಶಾಲಿಯಾಗಿದೆ. ತಲೆಯಿಂದ ಪಾದದವರೆಗೆ ಇಡೀ ದೇಹಕ್ಕೆ ಪ್ರಯೋಜನ ಕೊಡುವ ಇದು ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಸರ್ವಶ್ರೇಷ್ಠ ಎಂದು ಹೇಳಿದರು. ಸೂರ್ಯನಮಸ್ಕಾರ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನ ಮಾಡುವುದರಿಂದ ರಕ್ತಸಂಚಾರ ಸೂಗಮಗೊಳ್ಳುವುದು ಪೌಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ತಲುಪುವ ಮೂಲಕ ಮನುಷ್ಯನ ದೈಹಿಕ, ಮಾನಸಿಕ ಹಾಗೂ ಅಧ್ಯಾತ್ಮಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಲು ಸೂರ್ಯ ನಮಸ್ಕಾರ ಮಹತ್ವದ ಪಾತ್ರ ವಹಿಸಿದ ಎಂದರು.
ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಉಪಅಧಿಕ್ಷಕರಾದ ಡಾ. ಬಾಹುಬಲಿ ಮಹಾಜನ, ಆಡಳಿತಾಧಿಕಾರಿ ಮಹಾಂತೇಶ ಗುಡ್ನವರ, ಡಾ. ಸೂರಜ ಕುಂಬಾರ, ಡಾ.ಅಶ್ವಿನಿ ಕುಂಬಾರ, ಡಾ. ಅನುಪಮಾ ಹೊನ್ನಾಯ್ಕ, ಡಾ. ಅರ್ಚನಾ ಚೌಗಲಾ ಹಾಗೂ ಇತರೆ ಸಿಬ್ಬಂದಿಗಳಿಂದ ಸೂರ್ಯ ನಮಸ್ಕಾರ ಮಾಡಲಾಯಿತು.