ಸುಣಕಲ್ಲಬಿದರಿ ಕಾಲೇಜಿನಲ್ಲಿ ಸೂರ್ಯ ನಮಸ್ಕಾರ
ರಾಣಿಬೆನ್ನೂರ 05: ತಾಲೂಕಿನ ಸುಣಕಲ್ಲಬಿದರಿ ಸದ್ಗುರು ಶಿವಾನಂದ ಪದವಿ ಪೂರ್ವ ಮಹಾವಿದ್ಯಾಲಯದಲಿ ಸರ್ಕಾರದ ಆದೇಶದ ಮೇರೆಗೆ ಸೂರ್ಯ ನಮಸ್ಕಾರ ಯೋಗಾಭ್ಯಾಸವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಚಾರ್ಯ ಪಿ.ಮುನಿಯಪ್ಪ ಯೋಗಾಭ್ಯಾಸಕ್ಕೆ ಚಾಲನೆ ನೀಡಿದರು. ಯೋಜನಾಧಿಕಾರಿ ಎಚ್. ಶಿವಾನಂದ ತರಬೇತಿ ನೀಡಿದರು.