ರಾಷ್ಟ್ರೀಯ

ಚಕ್ರಬಡ್ಡಿ ಮನ್ನಾ: ಕೇಂದ್ರ - ಆರ್ ಬಿಐ ಗೆ ಪ್ರಮಾಣಪತ್ರ ಸಲ್ಲಿಸಲು ಸುಪ್ರೀಂ ಕೋರ್ಟ್ ಗಡುವು

ಚಕ್ರಬಡ್ಡಿ ಮನ್ನಾ: ಕೇಂದ್ರ -  ಆರ್ ಬಿಐ ಗೆ  ಪ್ರಮಾಣಪತ್ರ  ಸಲ್ಲಿಸಲು ಸುಪ್ರೀಂ ಕೋರ್ಟ್ ಗಡುವು

ನವದೆಹಲಿ,  ಅಕ್ಟೋಬರ್ 5:  2 ಕೋಟಿ ರೂಪಾಯಿವರೆಗಿನ ಸಾಲಗಳಿಗೆ ಚಕ್ರಬಡ್ಡಿ ಮನ್ನಾ ಮಾಡುವ ಸಂಬಂಧ ಹೆಚ್ಚುವರಿ ಪ್ರಮಾಣಪತ್ರ  ಸಲ್ಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಒಂದು ವಾರ ಕಾಲಾವಕಾಶ ನೀಡಿ ಪ್ರಕರಣದ ವಿಚಾರಣೆಯನ್ನು ಇದೇ   13ಕ್ಕೆ ಮುಂದೂಡಿದೆ. 

ಕೇಂದ್ರದ ಪ್ರಸ್ತಾವನೆಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಭಾರತೀಯ ಬ್ಯಾಂಕುಗಳ ಸಂಘವನ್ನ ಕೋರಿದ ನ್ಯಾಯಾಲಯ, ರಿಯಲ್ ಎಸ್ಟೇಟ್ ಸಂಘಗಳು ಮತ್ತು ವಿದ್ಯುತ್ ಉತ್ಪಾದಕರು ಎತ್ತಿದ ಸಮಸ್ಯೆಗಳನ್ನ ಪರಿಗಣಿಸುವಂತೆ ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್ ಗೆ ನಿರ್ದೇಶನ ನೀಡಿದೆ.

ಆಗಸ್ಟ್ ಅಂತ್ಯದವರೆಗೆ 2 ಕೋಟಿ ರೂಪಾಯಿವರೆಗಿನ ಸಾಲದ ಮೇಲಿನ ಬಡ್ಡಿಯನ್ನ ಮನ್ನಾ ಮಾಡಲಾಗುವುದು ಎಂದು ಶನಿವಾರ ಸರ್ಕಾರ ಹೇಳಿದ್ದರೂ   ಎಲ್ಲ ವಲಯದ , ವರ್ಗದ ಸಾಲಗಳ ಮೇಲಿನ ಬಡ್ಡಿಮನ್ನಾ ಮಾಡುವುದಿಲ್ಲ, ಏಕೆಂದರೆ ಇದರಲ್ಲಿ ಬ್ಯಾಂಕ್ ಗಳ ಭವಿಷ್ಯ ಅಡಗಿದೆ  ಎಂದು ಹೇಳಿದೆ.

ಅನಿವಾರ್ಯ ಪರಿಸ್ಥಿತಿಗಳಿಂದಾಗಿ 'ಬಡ್ಡಿ ಮನ್ನಾದ ಹೊರೆ ಹೊರಲು  ಸಂಸತ್ತಿನ ಅನುಮೋದನೆ ಕೋರುವುದಾಗಿ  ಹೇಳಿತ್ತು .

ಶಿಕ್ಷಣ ಸಾಲಗಳು, ಗೃಹ ನಿರ್ಮಾಣ, ಗ್ರಾಹಕ ಬಾಳಿಕೆ, ಕ್ರೆಡಿಟ್ ಕಾರ್ಡ್ ಬಾಕಿಗಳು, ವಾಹನ ಸಾಲಗಳು, ವೈಯಕ್ತಿಕ ಮತ್ತು ವೃತ್ತಿಪರ ಸಾಲಗಳು ಮತ್ತು ಅನುಭೋಗ ಸಾಲ ಸೇರಿದಂತೆ ಎಂಟು ವಲಯಗಳಿಗೆ ಮಾತ್ರ ಚಕ್ರಬಡ್ಡಿಯನ್ನು ರದ್ದುಗೊಳಿಸುವುದಾಗಿ ಹೇಳಿತ್ತು  

ಸುದ್ದಿ ಓದಿ