ಸುಣಕಲ್ಲ ಬಿದರಿ: ಸಾಂಕ್ರಾಮಿಕ ಅರಿವು ಜನ ಜಾಗ್ರತಿ ಕಾರ್ಯಕ್ರಮ
ಲೋಕದರ್ಶನ ವರದಿ
ರಾಣೇಬೆನ್ನೂರು 07: ತಾಲೂಕಿನ ಸುಣಕಲ್ಲ ಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂ.ಪ.ಪೂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಇತ್ತಿಚೇಗೆ ಸಾಂಕ್ರಾಮಿಕ ರೋಗಗಳ (ಡೆಂಗ್ಯೂ, ಚಿಕೂನ್ಗುನ್ಯಾ) ಕುರಿತಂತೆ ಅರಿವು ಜನಜಾಗ್ರತಿ ಕಾರ್ಯಕ್ರಮವು ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾದೇಗೌಡ.ಬಿ.ಜಾಪಾಳಿ ಅವರು ಜನಜಾಗ್ರತಿ ಮೇರವಣಿಗೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಆರೋಗ್ಯ ನೀರಿಕ್ಷಣಾಧಿಕಾರಿ ಎ.ಆರ್. ತಿಪ್ಪೇಸ್ವಾಮಿ, ಸುರಕ್ಷಿತಾಧಿಕಾರಿ ಕೆ.ಎನ್.ರಾಧಿಕಾ ಅವರು ಶಿಶು ಮತ್ತು ತಾಯಿಯ ಸಂರಕ್ಷಣೆ ಕುರಿತಂತೆ ಉಪನ್ಯಾಸ ನೀಡಿದರು.
ಪ್ರಾಚಾರ್ಯ ಪಿ.ಮುನಿಯಪ್ಪ, ಸಲಹಾ ಸಮಿತಿ ಸದಸ್ಯ ಎಂ.ಸಿ.ಲಿಂಗದಹಳ್ಳಿ, ಗ್ರಾ. ಪಂ ಸದಸ್ಯರಾದ ಅರುಣಕುಮಾರ.ಕೆ, ಲಲಿತಾ.ಆರ್, ಶಂಕರಗೌಡ. ಪೋಲೀಸ್ಗೌಡ್ರ, ಮಲ್ಲೇಶ ಹೂರಗಿ, ಶಿಕ್ಷಕರಾದ.ಬಿ.ಎ.ವಿಜಯಕುಮಾರ, ಸಿ ಜೈಪ್ರಕಾಶ, ಜಿ.ಸುಚಿತ್ರಾ, ಕೆ.ಜೆ.ಆಶಾ, ಉಮ್ಮೇಹಬೀಬಾ, ಎಸ್.ಎಸ್.ಬಡ್ನಿ, ಆರ್.ಪ್ರವೀಣ್ಕುಮಾರ, ಗಂಗಮಾಳವ್ವ ಕುಸಗೂರ, ಸುನಂದ ಕುಸಗೂರ, ದ್ರಾಕ್ಷಯಣಿ ಕಮ್ಮಾರ, ಅಕ್ಕಮ್ಮ ಇಮ್ಮಡಿ. ಸೇರಿದಂತೆ ಮತ್ತಿತರ ಗಣ್ಯರು ಕಾಲೇಜು ಉಪನ್ಯಾಸಕರು ಪಾಲ್ಗೊಂಡಿದ್ದರು.