ಶಿಗ್ಗಾವ್

ಮಕ್ಕಳು ತಮ್ಮ ಪ್ರತಿಭೆ ಹೊರಹಾಕಲು ಬೇಸಿಗೆ ಶಿಬಿರ

ಮಕ್ಕಳು ತಮ್ಮ ಪ್ರತಿಭೆ ಹೊರಹಾಕಲು ಬೇಸಿಗೆ ಶಿಬಿರ

ಲೋಕದರ್ಶನ ವರದಿ 

ಶಿಗ್ಗಾವಿ 10: ಬೇಸಿಗೆ ಶಿಬಿರದಿಂದ ಮಕ್ಕಳಿಗೆ ಆಗುವ ಅನುಕೂಲತೆಗಳು ಹಾಗೂ ಈ ಶಿಬಿರದಲ್ಲಿ ಯೋಗ, ಸಂಗೀತ, ಸಮೂಹ ನೃತ್ಯ, ಕರಕುಶಲ, ಚಿತ್ರಕಲೆ, ಮುಂತಾದ ವಿಷಯಗಳ ಬಗ್ಗೆ 08 ದಿವಸ ತರಬೇತಿ ನೀಡಲಾಗುವುದು. ಮಕ್ಕಳು ತಮ್ಮ ಪ್ರತಿಭೆ ಹೊರಹಾಕಲು ಬೇಸಿಗೆ ಶಿಬಿರ ಸೂಕ್ತ ವೇದಿಕೆಯಾಗಿದೆ ಎಂದು ಸಿಡಿಪಿಓ ನೀತಾ ವಾಡಕರ್ ಹೇಳಿದರು. 

ಬಾಲಭವನ ಸೊಸೈಟಿ ಬೆಂಗಳೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾವೇರಿ, ಶಿಶು ಅಭಿವೃದ್ದಿ ಯೋಜನೆ ಶಿಗ್ಗಾಂವ ಇವರ ಆಶ್ರಯದಲ್ಲಿ ಶಿಗ್ಗಾಂವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಸಭಾ ಭವನದಲ್ಲಿ 5 ರಿಂದ 6ಂದ 16 ವರ್ಷದ ಮಕ್ಕಳಿಗೆ “ಬೇಸಿಗೆ ಶಿಬಿರ” ಕಾರ್ಯಕ್ರಮ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಮಕ್ಕಳನ್ನು ಸಂಪೂರ್ಣವಾಗಿ ಪಡೆಯಬೇಕೆಂದು ತಿಳಿಸಿದರು.  

  ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹಾಗೂ ಮಕ್ಕಳು ಶಾಲಾ ರಜೆ ಅವಧಿಯಲ್ಲಿ ವ್ಯರ್ಥವಾಗಿ ಕಾಲ ಕಳೆಯದೇ ಇಲಾಖೆಯಿಂದ ಉಚಿತವಾಗಿ ಆಯೋಜಿಸಿದ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲ ಚಟುವಟಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸರ್ಕಾರದ ಯೋಜನೆಯನ್ನು ಪ್ರಯೋಜನವನ್ನು ಮಾಡಿಕೊಳ್ಳಬೇಕು ಎಂದರು.    

ಸಂಪನ್ಮೂಲ ವ್ಯಕ್ತಿಗಳಾದ ಭಾರತಿ ಛಬ್ಬಿ ಇವರು ಮಾತನಾಡಿ ಯೋಗ ಮತ್ತು ಸಂಗೀತದಿಂದ ಆಗುವ ಪ್ರಯೋಜನಗಳು ಹಾಗೂ ಮೊಬೈಲ್ ಬಳಿಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು. ಹಿರಿಯ ಮೇಲ್ವಿಚಾರಕಿಯಾದ ನಿರ್ಮಲಾ ಇಟಗಿ ಇವರು ಮಾತನಾಡಿ ಮಕ್ಕಳು ಬೇಸಿಗೆ ರಜೆಯನ್ನು ಶಿಬಿರದಲ್ಲಿ ಭಾಗವಹಿಸಿ ಮಜೆವಾಗಿ ಕಳೆಯಲು ಮತ್ತು ಹೊಸ ವಿಷಯಗಳನ್ನು ಕಲಿತುಕೊಳ್ಳಲು ತಿಳಿಸಿದರು.  

ಈ ಕಾರ್ಯಕ್ರಮವನ್ನು  ಕುಮಾರಿ ಸುಜಾತಾ ಹಾಗೂ ಸಂಗಡಿಗರು ಪ್ರಾರ್ಥಸಿದರು. ಮೇಲ್ವಿಚಾರಕಿಯಾದ ಲಕ್ಷ್ಮೀಬಾಯಿ ಬಗಾಡೆ ನಿರೂಪಿಸಿದರೆ, ರೇಣುಕಾ ತಾಯಮ್ಮನವರ ಸ್ವಾಗತಿಸಿದರು. ರಜನಿ ಹುರಳಿಕುಪ್ಪಿ ಇವರು ವಂದಿಸಿದರು. ಈ ಕಾರ್ಯಕ್ರಮದಲ್ಲಿ ಮಕ್ಕಳು, ತಾಯಂದಿರು, ಮೇಲ್ವಿಚಾರಕಿಯರು, ಕಛೇರಿ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. 


ಸುದ್ದಿ ಓದಿ