ರಾಣೆಬೆನ್ನೂರ

ಸುಕ್ಷೇತ್ರ ಗಂಗಾಪುರ ದುರ್ಗಮ್ಮದೇವಿ ಜಾತ್ರೋತ್ಸವ: ಸಾಮೂಹಿಕ ವಿವಾಹ.

ಸುಕ್ಷೇತ್ರ ಗಂಗಾಪುರ ದುರ್ಗಮ್ಮದೇವಿ ಜಾತ್ರೋತ್ಸವ: ಸಾಮೂಹಿಕ ವಿವಾಹ.


ಲೋಕದರ್ಶನ ವರದಿ 

ರಾಣಿಬೆನ್ನೂರು 05:  ತಾಲೂಕಿನ ಸುಕ್ಷೇತ್ರ ಗಂಗಾಪುರ ಗ್ರಾಮದ ಪರಮ ಕಲ್ಯಾಣಿ  ದುರ್ಗಮ್ಮ ದೇವಿ ವಾರ್ಷಿಕ ಜಾತ್ರೋತ್ಸವವು ಬರುವ ಮೇ. 2 ರಿಂದ ಆರಂಭವಾಗಿ 4 ರ ವರೆಗೆ ಬಹು ವಿಜೃಂಭಣೆಯಿಂದ ಜರುಗಲಿದೆ ಎಂದು  ದುರ್ಗಮ್ಮ ದೇವಿ ಟ್ರಸ್ಟ್‌ ಕಮಿಟಿ ಮತ್ತು ಗಂಗಾಪುರ ಗ್ರಾಮದ ಭಕ್ತ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.  

   35 ನೇ ವಾರ್ಷಿಕೋತ್ಸವದ ಜಾತ್ರಾ ಮಹೋತ್ಸವವು ಇದಾಗಿದ್ದು, ಅಂದು ಜರುಗುವ ಬಸವ ಜಯಂತಿ ಪ್ರಯುಕ್ತ ಸಾಮೂಹಿಕ ವಿವಾಹ ಮಂಗಲ ಕಾರ್ಯಗಳು ಎಂದಿನಂತೆ ನಡೆಯಲಿವೆ. ಎಂದಿರುವ ಭಕ್ತ ಮಂಡಳಿಯು ಸೋಮವಾರ 2 ರಂದು ಮುಂಜಾನೆ 6:30ಕ್ಕೆ ಶ್ರೀ ದೇವಿಗೆ ಅಭಿಷೇಕ, ದುರ್ಗಾ ಹೋಮ, ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದುರ್ಗಾ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆಯು ನಡೆಯಲಿವೆ.  

    3-5-22 ರಂದು ಮಂಗಳವಾರ 12:32ಕ್ಕೆ ಅಭಿಜಿನ್ ಲಗ್ನದಲ್ಲಿ ಸಾಮೂಹಿಕ ವಿವಾಹಗಳು ಜರುಗಲಿವೆ. ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಭಕ್ತರಿಗಾಗಿ ಮಹಾ ಪ್ರಸಾದ ಸಂಜೆ 5 ಗಂಟೆಗೆ ಶ್ರೀ ದೇವಿಗೆ ಉಡಿ ತುಂಬುವುದು. ರಾತ್ರಿ 11 ಗಂಟೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಬುಧವಾರ 4 ರಂದು ಮುಂಜಾನೆ 8 ಗಂಟೆಗೆ ಶ್ರೀ ದೇವಿಯ ಮಹಾ ಮಂಗಳಾರತಿಯೊಂದಿಗೆ ಜಾತ್ರಾ ಮಹೋತ್ಸವವು ಮಂಗಲಗೊಳ್ಳುವುದು.  

   ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವಧು-ವರರು ಮುಂಚಿತವಾಗಿ ಸರ್ಕಾರದ ಆದೇಶದ ವಧು ವರರ ವಯಸ್ಸಿನ ಮಿತಿಯನ್ನು ಅನುಸರಿಸಿ ಹೆ 


ಸುದ್ದಿ ಓದಿ