ಬೈಲಹೊಂಗಲ

ಸುಕ್ಷೇತ್ರ ಬೈಲವಾಡ ಶ್ರೀ ವರ್ತಿ ಸಿದ್ಧಬಸವೇಶ್ವರರ ಜಾತ್ರೆ: ರಥೋತ್ಸವ

ಸುಕ್ಷೇತ್ರ ಬೈಲವಾಡ ಶ್ರೀ ವರ್ತಿ ಸಿದ್ಧಬಸವೇಶ್ವರರ ಜಾತ್ರೆ: ರಥೋತ್ಸವ

ಬೈಲಹೊಂಗಲ 19: ತಾಲೂಕಿನ ಸುಕ್ಷೇತ್ರ ಬೈಲವಾಡ ಗ್ರಾಮದ ಶ್ರೀ ವರ್ತಿ ಸಿದ್ಧಬಸವೇಶ್ವರರ ಜಾತ್ರಾ ಮಹೋತ್ಸವದ ನಿಮಿತ್ತ ಮಹಾರಥೋತ್ಸವವು ಸಾವಿರಾರು ಭಕ್ತರ ಹರ್ಷೋದ್ಘಾರದ ಮಧ್ಯೆ ಸಡಗರ-ಸಂಭ್ರಮದಿಂದ ಜರುಗಿತು.  

ರಥೋತ್ಸವಕ್ಕೆ ತೆಂಗು, ಬಾಳೆ, ಕಬ್ಬು ಹಾಗೂ ವಿವಿಧ ಪರಪರಿಗಳು ಹಾಗೂ ಹೂಗಳಿಂದ ಶೃಂಗರಿಸಲಾಗಿತ್ತು. ಮುರಗೋಡದ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.  

ಭಕ್ತರು ರಥಕ್ಕೆ ಬಾಳೆ ಹಣ್ಣು, ಕಾರಿಕು ಎಸೆದು ಭಕ್ತಿ ಭಾವ ಮೆರೆದರು. ವರ್ತಿ ಸಿದ್ಧಬಸವೇಶ್ವರ ಮಹಾರಾಜ ಕೀ ಜೈಘೋಷಗಳೊಂದಿಗೆ ರಥೋತ್ಸವ ಎಳೆದು ಪುನೀತರಾದರು. ಸಾವಿರಾರು ಭಕ್ತರು ದೇವಸ್ಥಾನಕ್ಕೆ ಹೂ, ಕಾಯಿ, ಹಣ್ಣು, ನೈವದ್ಯೆ ಸಲ್ಲಿಸಿ ಭಕ್ತಿಯಿಂದ ಶ್ರೀ ವರ್ತಿ ಸಿದ್ಧಬಸವೇಶ್ವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶ್ರೀ ವರ್ತಿ ಸಿದ್ಧಬಸವೇಶ್ವರರ ಜಾತ್ರಾ ಕಮಿಟಿ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.  


ಸುದ್ದಿ ಓದಿ