ಶಿವಸೇನಾ ಮುಖಂಡ ನೇಣಿಗೆ ಶರಣು
ನಾಸಿಕ್, ನವೆಂಬರ್ 03: ಶಿವಸೇನಾ ಮುಖಂಡ ಹಾಗೂ ಇಗತ್ಪುರಿ
ಪಂಚಾಯತ್ ಸಮಿತಿ ಮಾಜಿ ಅಧ್ಯಕ್ಷ ಅರುಣ್ ಮುಸಲೆ ನೇಣಿಗೆ ಶರಣಾಗಿದ್ದಾರೆ.
ಇಗಾಪುರಿ ತಾಲ್ಲೂಕಿನ ನಂದೂರ್ವೈದ್ಯ ಗ್ರಾಮದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ಕೃಷಿ ಉತ್ಪಾದನೆಯಲ್ಲಿ ಅಪಾರ ನಷ್ಟವಾದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದ ಮುಸಲೆ ಸೋಮವಾರ ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗಿದೆ.
ಸಕೂರ್ ಪಂಚಾಯತ್ ಸಮಿತಿಯ 1997-98ರ ಚುನಾವಣೆಯಲ್ಲಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರು ನಂದೂರ್ವೈದ್ಯ ಗ್ರಾಮಸಂಚಯದ ಮಾಜಿ ಸರಪಂಚರೂ ಆಗಿದ್ದರು.
ಅರುಣ್ ಮುಸಲೆ ಆತ್ಮಹತ್ಯೆ ಕುರಿತಂತೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.