ಚಿಕ್ಕೋಡಿ

ಗಾಯದ ಮೇಲೆ ಬರೆ ಎಳೆದ ಕಷ್ಟ ಅನುಭವಿಸುತ್ತಿರುವ ಕಬ್ಬು ಬೆಳೆಗಾರರು

ಗಾಯದ ಮೇಲೆ ಬರೆ ಎಳೆದ ಕಷ್ಟ ಅನುಭವಿಸುತ್ತಿರುವ ಕಬ್ಬು ಬೆಳೆಗಾರರು

ಕಬ್ಬು ಉತ್ಪಾದನೆ ಶೇ35ರಷ್ಟು ಕುಸಿತ: ಅಳಿದುಳಿದು ಬೆಳೆಗೆ ಸೂಲಂಗಿ ಕಾಟ  

ಮಾಂಜರಿ 29: ಕಬ್ಬು ಬೆಳೆದ ರೈತರಿಗೆ ಮೇಲಿಂದ ಮೇಲೆ ಕಷ್ಟಗಳು ಎದುರಾಗತ್ತಲೇ ಇವೆ. ಪ್ರಸಕ್ತ ಸಾಲಿನ ಬರಗಾಲ, ಪ್ರವಾಹ ಮತ್ತು ಅತಿವೃಷ್ಟಿ ಇಂತಹ ಸನ್ನಿವೇಶದಲ್ಲಿ ಮತ್ತೊಂದು ಬರೆ ಎಳೆಯುವ ಪ್ರಸಂಗ ರೈತರಿಗೆ ಎದುರಾಗಿದೆ. ಕಬ್ಬು ಉತ್ಪಾದನೆ ಪ್ರಸಕ್ತ ಸಾಲಿನಲ್ಲಿ ಶೇ35ರಷ್ಟು ಕುಸಿದಿದ್ದು ಅಳಿದುಳಿದು ಕಬ್ಬಿನ ಬೆಳೆಗೆ ಈಗ ಸೂಲಂಗಿ ಕಾಟ ಶುರುವಾಗಿದೆ. ಇದರಿಂದ ಕಬ್ಬು ಬೆಳೆಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ. 

ಎಲ್ಲಿ ನೋಡಿದರಲ್ಲಿ ಕಬ್ಬಿನ ಬೆಳೆ, ಕಬ್ಬಿನ ಬೆಳೆಗೆ ಸೂಲಂಗಿ (ತುರಾಯಿ) ಕೆಳಗೆ ಒಣಗಿದ ಕಬ್ಬು, ಇಂತಹ ಕಬ್ಬಿನ ಬೆಳೆ ಕಂಡು ಬಂದಿದ್ದು ಗಡಿಭಾಗದ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ಪ್ರತಿ ಗ್ರಾಮದಲ್ಲೂ ಸಹ ಕಬ್ಬಿನ ಬೆಳೆಗೆ ಸೂಲಂಗಿ ಬಂದಿದೆ. ರೈತರು ಕಷ್ಟ ಅನುಭವಿಸುವ ಪ್ರಸಂಗ ಎದುರಾಗಿದೆ. ಬೆಳೆದ ನಿಂತ ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಕಳಿಸಿ ಮಾಡಿದ ಸಾಲ ತೀರಿಸಬೇಕೆನ್ನುವ ಚಿಂತೆಯಲ್ಲಿರುವ ರೈತನಿಗೆ ಕಬ್ಬು ಕಟಾವು ಮಾಡಿಸುವುದೇ ಒಂದು ಚಿಂತೆಗೀಡಾಗಿದೆ. 

ಕೃಷ್ಣಾ ಮತ್ತು ದೂಧಗಂಗಾ ನದಿ ತೀರದಲ್ಲಿರುವಂತ ಸಾವಿರಾರು ಎಕರೆ ಬೆಳೆದುನಿಂತಿದ್ದ ಕಬ್ಬು ಬೆಳೆಗೆ ನೀರಿನ ಕೋರತೆ, ಬಿಸಿಲಿನ ಧಗೆ ಬೆಳೆಗೆ ಈಗ ಸೂಲಂಗಿ ಬೆಳೆಯುತ್ತಿರುವುದರಂದ ಬೆಳೆದ ಕಬ್ಬು ಬೆಂಡೊಡೆಯುತ್ತಿದೆ. ಬೆಳೆದ ಕಬ್ಬಿನಲ್ಲಿ ಈಗ ತೂಕ ಕಡಿಮೆಯಾಗುತ್ತಿದೆ. ಇದರಿಂದ ಮತ್ತೆ ಕಬ್ಬು ಉತ್ಪಾದಕ ರೈತ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಕಬ್ಬು ನಾಟಿ ಮಾಡಿದ 11 ತಿಂಗಳ ಬಳಿಕ ಸೂಲಂಗಿ ಬರುತ್ತದೆ. ಈ ಸೂಲಂಗಿ ಬರುವುದರಿಂದ ಕಬ್ಬಿನ ಇಳುವರಿ ಹಾಗೂ ತೂಕದಲ್ಲಿ, ಕಡಿಮೆಯಾಗುತ್ತಿದೆ. ಇದರಿಂದ ರೈತರು ಕಷ್ಟ ಅನುಭವಿಸುವ ಪ್ರಸಂಗಎದುರಾಗಿದೆ. ಪ್ರಸಕ್ತ ಸಾಲಿನಲ್ಲಿ ಬಿಸಿಲಿನ ಧಗೆ. ನೀರಿನ ಆಭಾವದಿಂದ ಒಂದು ಎಕರೆಗೆ 30 ರಿಂದ 45 ಟನ್ ಕಬ್ಬಿಣ ಫಸಲು ಸಿಗುತ್ತಿದ್ದರೆ ಸೂಲಂಗಿ ಬಂದಾಗ ಸುಮಾರ 5 ಟನ್ ಉತ್ಪಾದನೆ ಕಡಿಮೆ ಯಾಗುತ್ತದೆ. ಅಲ್ಲದೇ ಸೂಲಂಗಿ ಕಬ್ಬು ಮೇವಿಗೂ ಬರುವುದಿಲ್ಲ. ಇದು ಕೂಡ ರೈತರ ಆರ್ಥಿಕ ಹಾನಿ ಹೆಚ್ಚಿಸುತ್ತದೆ. ಸಕ್ಕರೆ ಕಾರ್ಖಾನೆಯವರು ಸೂಲಂಗಿ ಬಂದ ಕಬ್ಬನ್ನು ಆದಷ್ಟು ಬೇಗ ಕಟಾವು ಮಾಡಿ ಕಾರ್ಖಾನೆಗೆ ಸಾಗಾಣಿಕೆ ಮಾಡಬೇಕೆನುವುದು ರೈತರ ಬೇಡಿಕೆಯಾಗಿದೆ. 


ಸುದ್ದಿ ಓದಿ