ಸಿರುಗುಪ್ಪ

ಕಬ್ಬು ಬೆಳೆಗೆ ಬೆಂಕಿ: ಅಪಾರ ನಷ್ಟ

ಕಬ್ಬು ಬೆಳೆಗೆ ಬೆಂಕಿ: ಅಪಾರ ನಷ್ಟ

ಸಿರುಗುಪ್ಪ 20:  ತಾಲೂಕು ಉತ್ತನೂರು ಗ್ರಾಮದ ರೈತರು ನೀರಾವರಿ ಗದ್ದೆಗಳಲ್ಲಿ ಕಬ್ಬು  ಉತ್ತಮವಾಗಿ ಬೆಳೆಸಿದ್ದರು. ಕೆಲವೇ ದಿನಗಳಲ್ಲಿ ಕಟಾವು ಮಾಡಿ ಸಕ್ಕರೆ ಕಾರ್ಖಾನೆಗೆ ಸಾಗಿಸುವ ಸಿದ್ಧತೆಯಲ್ಲಿ ದುರಾದೃಷ್ಟವಶಾತ್ ಸೋಮವಾರ ಮಧ್ಯಾನದ ವೇಳೆಯಲ್ಲಿ ಕಬ್ಬು ಬೆಳೆದ ಗದ್ದೆಗಳ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳು ಮತ್ತು ಗದ್ದೆಗಳ ಪಕ್ಕದಲ್ಲಿ ಸ್ಥಾಪಿಸಿದ ವಿದ್ಯುತ್ ಪರಿವರ್ತಕದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಚಾರ್ಟ್  ಸರ್ಕ್ಟ್ ಆಗಿದೆ ಇದರಿಂದ ಸುಮಾರು 60 ಎಕರೆ ಬೆಳೆದ ಕಬ್ಬಿನ ಗದ್ದೆಗಳಿಗೆ ಬೆಂಕಿ ಹೊತ್ತಿ ಉರಿದಿದ್ದು ಅನ್ನದಾತರಿಗೆ ಅಪಾರ ನಷ್ಟವಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಗ್ರಾಮಸ್ಥರು ಸ್ವತಃ ಬೆಂಕಿ ನಂದಿಸಲು ಪ್ರಯತ್ನಿಸಿದರು. ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಬಹುತೇಕ ಭಾಗದ ಕಬ್ಬಿನ ಗದ್ದೆಗಳಿಗೆ ಬೆಂಕಿಗೆ ಆಹುತಿಯಾಗಿದೆ. ಒಂದು ಎಕರೆ ಕಬ್ಬಿನ 2 ಲಕ್ಷ  ನಷ್ಟ ಆಗಿರಬಹುದು ಎಂದು ಅಂದಾಜಿಸಲಾಗಿದೆ.


ಸುದ್ದಿ ಓದಿ