ತಾಳಿಕೋಟಿ

ನಾಮಪತ್ರ ಸಲ್ಲಿಕೆ

ನಾಮಪತ್ರ  ಸಲ್ಲಿಕೆ

ಲೋಕದರ್ಶನ ವರದಿ

ತಾಳಿಕೋಟಿ 16: ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಗೋವಿಂದ್ಸಿಂಗ್ ವಿಠ್ಠಲ್ಸಿಂಗ್ ಮೂಲಿಮನಿ ಇವರು ತಮ್ಮ ನಾಮಪತ್ರವನ್ನು ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ  ಶನಿವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ಸಂಘದ ಚುನಾವಣಾ ಕಾರ್ಯಾಲಯಕ್ಕೆ ಆಗಮಿಸಿದ ಅವರು ಸಹಾಯಕ ಚುನಾವಣಾ ಅಧಿಕಾರಿ ವಿ .ಎಸ್. ಸ್ಥಾವರಮಠ ಇವರಿಗೆ ಸಾಲಗಾರರ ಸಾಮಾನ್ಯ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದರು.  

    ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕಳೆದ ಅವಧಿಯಲ್ಲಿ ನಾನು ಈ ಸಂಘದ ನಿರ್ದೇಶಕನಾಗಿ ಸಾಕಷ್ಟು ಸೇವೆಯನ್ನು ಮಾಡಿದ್ದೇನೆ ರೈತ ಬಾಂಧವರಿಗೆ ಸಂಘದಿಂದ ಸಿಗುವ ಸೌಲಭ್ಯಗಳು ದೊರಕಿಸಿಕೊಡಲು ಶಕ್ತಿಮೀರಿ ಪ್ರಯತ್ನಿಸಿದ್ದೇನೆ ಈಗ ಮತ್ತೊಮ್ಮೆ ಮತದಾರ ಬಾಂಧವರ ಆಶೀವರ್ಾದ ಪಡೆದುಕೊಳ್ಳಲು ನಿಂತಿದ್ದೇನೆ ಅವರು ಆಶೀರ್ವದಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು. ಈ ಸಮಯದಲ್ಲಿ ಗಣ್ಯರಾದ ಹರಿಸಿಂಗ್ ಮೂಲಿಮನಿ, ಎಸ್. ಯು. ಹಜೇರಿ, ಬಾಬು ಹಜೇರಿ, ಬಸವರಾಜ್ ಕುಂಬಾರ್, ಶರಣಪ್ಪ ಇಲ್ಕಲ್, ಡಿ ವಿ ಪಾಟೀಲ್, ಶಂಕ್ರಪ್ಪ ಕಟ್ಟಿಮನಿ, ವಿರುಪಾಕ್ಷಪ್ಪ ಗೌಡ ಪಾಟೀಲ್, ರತನ್ ಸಿಂಗ್ ಕೋಕಟ್ನೂರ್, ಕಿಶನ್ ಸಿಂಗ್ ದೇವಿ, ಸುರೇಶ್ ಹಜೇರಿ, ಪ್ರಹ್ಲಾದ ಹಚೇರಿ, ಜೈ ಸಿಂಗ್ ಮೂಲಿಮನಿ, ಬಸ್ಸು ಕೊಡೆಕಲ್, ಯಮನಪ್ಪ ಬರ್ದಿನಾಳ, ಅರುಣ ದಡೇದ, ನಿಖಿಲ್ ಮೂಲಿಮನಿ ಮತ್ತಿತರರು ಇದ್ದರ 

ಸುದ್ದಿ ಓದಿ