ರಾಣೆಬೆನ್ನೂರ

ಸುಭಾಷ್ ಚಂದ್ರಬೋಸ್ ದೇಶ ಕಂಡ ಅಪ್ರತಿಮ ದೇಶಭಕ್ತ: ಪ್ರಕಾಶಾನಂದಜೀ

ಸುಭಾಷ್ ಚಂದ್ರಬೋಸ್ ದೇಶ ಕಂಡ ಅಪ್ರತಿಮ ದೇಶಭಕ್ತ: ಪ್ರಕಾಶಾನಂದಜೀ

ರಾಣಿಬೆನ್ನೂರ 21: ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಸಿದ್ದೇಶ್ವರ ನಗರದ ಬಯಲು ಮಾರುತಿ ಯೋಗ ಕೇಂದ್ರದ ಆಶ್ರಯದಲ್ಲಿ ಸ್ಥಳೀಯ ಜೆಸಿಐ ಸೇವಾ ಸಂಸ್ಥೆ ಹೇಮಲ್ ನ್ಯೂಟ್ರಿಷನ್ ಕ್ಲಬ್, ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಯೋಗ, ಪ್ರಾಣಾಯಾಮ, ಸೂರ್ಯ ನಮಸ್ಕಾರ, ವಾರ್ಷಿಕ ಕಾರ್ಯಕ್ರಮವು ಆಯೋಜಿಸಿತ್ತು.  

ಶೂರ ಸುಭಾಷ್ ಚಂದ್ರಬೋಸ್ ಅವರ ಜಯಂತ್ಯೋತ್ಸವದ ನಿಮಿತ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ, ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ಪ್ರಕಾಶಾನಂದಜೀ ಮಹಾರಾಜ್ ಅವರು ಸುಭಾಸ್ ಚಂದ್ರಬೋಸ್ ಅವರು ಭಾರತ ದೇಶ ಕಂಡ ಅಪ್ರತಿಮ ನಾಯಕ. ಅವರ ದೇಶ ಸೇವೆ ಇಂದಿಗೂ ಪ್ರಸ್ತುತವಾಗಿದೆ. ವೀರರ ಪಡೆಯನ್ನೇ ರೂಪಿಸಬೇಕೆನ್ನುವ ಬಲವಾದ ಇಚ್ಚೆಹೊಂದಿದ್ದ ಅವರು, ಹೋರಾಟದಲ್ಲಿಯೇ ಬದುಕು ಸಾಗಿಸಿದವರು. ಕಾಲಾನುಘಟ್ಟದಲ್ಲಿ ಅವರು ಸಾವು ಕಂಡರೋ ಅಥವಾ ಇನ್ನೂ ಬದುಕಿದ್ದಾರೆಯೋ ಎನ್ನುವುದು ಇಂದಿಗೂ ಪ್ರಶ್ನಾತೀತವಾಗಿಯೇ ಉಳಿದಿದೆ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಅಧ್ಯಕ್ಷ ವೆಂಕಟೇಶ್ ಕಾಕಿ ಅವರು, ಸೇವಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನಮ್ಮ ಪೂರ್ವ ಜನ್ಮದ ಪುಣ್ಯದ ಫಲವೆಂದು ಭಾವಿಸಿದ್ದೇನೆ. ತಮ್ಮ ಕುಟುಂಬವು ಸದಾ ಕಾಲ ಸಮಾಜಮುಖಿ ಕಾರ್ಯದಲ್ಲಿ ನಿರತವಾಗಿದೆ. ಅದರ ಫಲವಾಗಿ ನಾನು ಸಹ ಅಧ್ಯಕ್ಷನಾಗಿದ್ದೇನೆ. ಸಂಸ್ಥೆ ವ್ಯಕ್ತಿತ್ವ ನಿರ್ಮಾಣ ಕಾರ್ಯದಲ್ಲಿ ತನ್ನನ್ನೇ ತಾನು ತೊಡಗಿಸಿಕೊಂಡಿದೆ. ಕಳೆದ 10 ವರ್ಷಗಳಿಂದ ನಮ್ಮ ಪೂರ್ವಾಧ್ಯಕ್ಷರುಗಳು ತಮ್ಮದೇ ಯಾದ ವೈಚಾರಿಕಾ ಯೋಚನೆಯಲ್ಲಿ ಸಾಮಾಜಿಕ, ಸಾಹಿತ್ಯಿಕ, ಧಾರ್ಮಿಕ, ಆಧ್ಯಾತ್ಮಿಕ ಸೇರಿದಂತೆ ಮತ್ತಿತರೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಲಿದೆ. ಇದರಿಂದ ಸೇವೆ ಸಲ್ಲಿಸುವವರಿಗೆ ಸಂತೋಷ ಮತ್ತು ಆತ್ಮತೃಪ್ತಿ ದೊರಕುತ್ತಲಿದೆ ಎಂದರು.  

ವೇದಿಕೆಯಲ್ಲಿ ಪತಂಜಲಿ ಯೋಗ ಸಮಿತಿಯ ಯೋಗಸಾಧಕರಾದ ಕೆ.ಸಿ.ಕೋಮಲಾಚಾರ್, ಎಂ.ಬಿ.ಮೋಟಳ್ಳಿ, ಬಿ.ಎಸ್‌.ಟಿ ಅಧ್ಯಕ್ಷ ಆರ್‌.ಎನ್‌.ರಾಠೋಡ, ಜೆಸಿ ಅಧ್ಯಕ್ಷ ವೆಂಕಟೇಶ್ ಕಾಕಿ, ಮಾಜಿ ಅಧ್ಯಕ್ಷ ರವಿ ಪಾಟೀಲ, ಜಿ.ಡಿ.ಬಗಾಡೆ, ಪ್ರಕಾಶ್ ಗಚ್ಚಿನಮಠ, ಅರುಣಕುಮಾರ ಚಂದನ್ ಸೇರಿದಂತೆ ಮತ್ತಿತರ ಗಣ್ಯರು, ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ