ಸುಭಾಷ್ ಚಂದ್ರ ಬೋಸ್ರ ದೇಶಪ್ರೇಮ ಯುವ ಪೀಳಿಗೆಗೆ ಮಾದರಿ: ಸಂಪಗಾವಿ
ಮಾಂಜರಿ 23: ಕ್ರಾಂತಿಕಾರಿ ಆಲೋಚನೆಗಳ ಮೂಲಕ ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿದ್ದ ಅಪ್ರತಿಮ ದೇಶಪ್ರೇಮಿ, ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ಇಡೀ ಬದುಕನ್ನೇ ಸಮರ್ಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ರ ದೇಶಪ್ರೇಮ ಮತ್ತು ಸಮರಾ್ಣಭಾವವನ್ನು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ಚಿಕ್ಕೋಡಿಯ ಉಪವಿಭಾಗೀಯ ಅಧಿಕಾರಿಗಳಾದ ಸುಭಾಶ ಸಂಪಗಾವಿ ಹೇಳಿದರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಕೆಎಲ್ಇ ಶಿಕ್ಷಣ ಸಂಸ್ಥೆಯ ಶಾರದಾ ದೇವಿ ಕೋರೆ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಕ್ರಾಂತಿಕಾರಿ ಸುಭಾಷ್ ಚಂದ್ರ ಬೋಸ್ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು ಸಮಾರಂಭದ ಅಧ್ಯಕ್ಷತೆಯನ್ನು ಉಪ ಪ್ರಚಾರದ ಸೌ ಜ್ಯೋತಿ ತಮ್ಮ ಗೌಡ ವಹಿಸಿದ್ದರು
ಕ್ರಾಂತಿಕಾರಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಸ್ಮರಿಸುತ್ತೇವೇ, ಗಾಂಧೀಜಿ ಹಾಗೂ ಸುಭಾಷ ಚಂದ್ರ ಭೋಸರ್ ತತ್ವಗಳು ಬೇರೆ ಬೇರೆ ಯಾಗಿದ್ದವು, ಹಾಗಾಗಿ ಆಜಾದಿ ಸೈನ್ಯ ಕಟ್ಟಿ ಹೋರಾಡಿದರು, ನನಗೆ ನೀವು ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ' ಎಂಬ ಸಂದೇಶದ ಮೂಲಕ ಕೋಟಿ ಕೋಟಿ ಭಾರತೀಯರನ್ನು ಒಂದುಗೂಡಿಸಿದ ಮಹಾನ್ ಚೇತನ, ಆಗಿದ್ದರು ಎಂದು ಸುಭಾಷ ಸಂಪಗಾವಿ ಹೇಳಿದರು
ಈ ಕಾರ್ಯಕ್ರಮಕ್ಕೆ ಕೆಎಲ್ಇ ಸಂಸ್ಥೆಯ ಅಜೀವ ಸದಸ್ಯರಾದ ಬಿ ಎಸ್ ಅಂಬಿ, ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಆರ್ ಸಿ ಪಾಟೀಲ್, ದೈಹಿಕ ಶಿಕ್ಷಕರಾದ ಎ ಎಸ್ ಶಿರಗಾಂವೆ. ಎಸ್ ಜೆ ಬಾಬರ. ಕಾರ್ಯಕ್ರಮದ ಉಪಸ್ಥಿತಿ ಇದ್ದರು. ಈ ವೇಳೆ ಮುಖ್ಯ ಅತಿಥಿಗಳಿಂದ ವಾರ್ಷಿಕ ಕ್ರೀಡೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನು ಬಹುಮಾನಗಳನ್ನು ವಿತರಿಸಲಾಯಿತು. ಎ ಎಸ್ ಮಾನೆಯವರು ಅತಿಥಿಗಳ ಪರಿಚಯವನ್ನು ಮಾಡಿದರು. ವಾರ್ಷೀಕ ಕ್ರೀಡಾ ವರದಿಯನ್ನು ಆರ್ ಎನ್ ರಾಯಮಾನೆ ಓದಿದರೆ, ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎಸ್. ಬಿ ಕಾಳೆ ವಂದಿಸಿದರು. ಡಿ ಎಸ್ ಬಾಕಳೆ ಕಾರ್ಯಕ್ರಮವನ್ನು ನಿರೂಪಿಸಿದರು.