ಶಿಕ್ಷಣ ಪರಿಪೂರ್ಣತೆಗೆ ವಿದ್ಯಾರ್ಥಿಗಳು ಶ್ರಮಪಡಬೇಕು: ನಾಯಕ
ರಾಣೀಬೆನ್ನೂರು 01: ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ನಂತರ ಪರಿಪೂರ್ಣತೆ ಹೊಂದಬೇಕಾದರೆ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಸೇರಿದಂತೆ ಇನ್ನಿತರೆ ಜನಪರ ಸೇವೆಗಳನ್ನು ಅಳವಡಿಸಿಕೊಂಡು ಬದುಕನ್ನು ಪರಿಪೂರ್ಣತೆಗೊಳಿಸಿಕೊಳ್ಳಬೇಕು. ಇದರಿಂದ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗಲಿದೆ ಎಂದು ಲಕ್ಷ್ಮಣ ನಾಯಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯಕ ಹೇಳಿದರು.
ಅವರು ಕಾಲೇಜು ಭವನದಲ್ಲಿ ನಡೆದ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಸರಸ್ವತಿ ಪೂಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ, ಪ್ರತಿಭೆ ಎನ್ನುವುದು ಎಲ್ಲರಲ್ಲಿಯೂ ಆಂತರಿಕ ಸುಪ್ತವಾಗಿ ಇದ್ದೆ ಇರುತ್ತದೆ ಅದನ್ನು ಸಮರ್ಕವಾಗಿ ಹೊರಸೂಸಲು ವೇದಿಕೆಗಳ ಅಗತ್ಯವಿದೆ ಎಂದ ಅವರು ತಮ್ಮ ಶಿಕ್ಷಣ ಸಂಸ್ಥೆಯನ್ನು ತಂದೆ ಎಲ್.ಎಲ್.ನಾಯಕ ತಾಯಿ ಕಮಲಾ ನಾಯಕ ಅವರು ಬಹು ದೂರದೃಷ್ಠಿಯನ್ನಿಟ್ಟುಕೊಂಡು ಬಡ ಜನರು ಶಿಕ್ಷಣ ವಂಚಿತರಾಗಬಾರದು ಎನ್ನುವ ಚಿಂತನಯೊಂದಿಗೆ ಪ್ರಾರಂಭಿಸಿದ್ದಾರೆ. ಅವರ ಉದ್ದೇಶಿತ ಯೋಜನೆ ಈಡೇರಿದೆ ಹತ್ತಾರು ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪೂರ್ಣಗೊಳಿಸಿಕೊಂಡು ಪ್ರತಿಭಾವಂತರ ಸಾಲಿನಲ್ಲಿರುವುದು ತಮಗೆ ಅತ್ಯಂತ ಸಂತೋಷ ತಂದಿದೆ ಎಂದರು.
ಪರೀಕ್ಷೆಯಲ್ಲಿ ಅಂಕಗಳಿಸುವುದರ ಜೊತೆಗೆ ನೈತಿಕತೆ ಮೈಗೂಡಿಕೊಂಡು ಅಧೈರ್ಯಗೊಳ್ಳದೆ ಮಾನಸಿಕ, ದೈಹಿಕ ಸಾಮರ್ಥ್ಯವನ್ನು ಹೊಂದಬೇಕು. ತಾವು ಕಲಿತ ಈ ವಿದ್ಯಾಲಯದ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಸಮಾಜಕ್ಕೆ ಮಾದರಿಯಾಗಿ ಮತ್ತೊಬ್ಬರಿಗೆ ಸಹಾಯ ಮಾಡುವ ಗುಣಧರ್ಮಗಳನ್ನು ಬೆಳೆಸಿಕೊಂಡು ಪ್ರಗತಿಯತ್ತ ಸಾಗಬೇಕು ಎಂದು ಮನವಿ ಮಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಮಹೇಶಪ್ಪ ಗೋಣೆಮ್ಮನವರ ಅವರು ಲಕ್ಷ್ಮಣ ನಾಯಕ ಕಲಾ ವಾಣಿಜ್ಯ ವಿಜ್ಞಾನ ಪ.ಪೂ.ವಿದ್ಯಾಲಯವು ನಗರದ ಮಧ್ಯಭಾಗದಲ್ಲಿದ್ದು ಜನ ಸಾಮಾನ್ಯರ ಶಿಕ್ಷಣ ಸೇವೆಯಲ್ಲಿ ತನ್ನನ್ನೆ ತಾನು ತೊಡಗಿಸಿಕೊಂಡಿದೆ. ಕಾಲೇಜು ಜನಪರ ಕಾಳಜಿ ಹೊಂದಿದ್ದು ವಿದ್ಯಾರ್ಥಿಗಳ ಸಂಪೂರ್ಣ ಪ್ರಗತಿಗೆ ಇಲ್ಲಿನ ಉಪನ್ಯಾಸಕರು ಗುಣಮಟ್ಟದ ಶಿಕ್ಷಣವನ್ನು ನೀಡಲು ಸದಾ ಕಂಕಣಬದ್ಧರಾಗಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಶೇ.60 ರಷ್ಟು ನೌಕರಿಯಲ್ಲಿ ತೊಡಗಿಕೊಂಡು ಸಾಧನೆ ಮೆರೆದಿದ್ದಾರೆ ಇದು ನಮ್ಮ ಶಿಕ್ಷಣ ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಾಲೇಜು ಪ್ರಾಚಾರ್ಯ ಉಷಾ ಮಾಳಗಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಪರಿಪೂರ್ಣತೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತಂತೆ ಆರ್ಥಶಾಸ್ತ್ರ ಉಪನ್ಯಾಸಕ ಶಂಕರಲಿಂಗಪ್ಪ ಎಳೆಹೊಳಿ ಅವರು ವಿಶೇಷ ಉಪನ್ಯಾಸ ನಿಡಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ಎಸ್.ಕೆ.ಪೋಲಿಸ್ಗೌಡ್ರ, ಮೂರ್ತೆಪ್ಪ ನಾಯಕ, ಎಂ.ಎಫ್.ಅಳಲಗೇರಿ, ದೀಪಾ ಕಾಟೇನಹಳ್ಳಿ, ಹೆಚ್.ಶಿವರಾಜ, ಜಿ.ಬಿ.ಜಂಗಳೇರ, ಎಂ.ಎಫ್.ಅಳಲಗೇರಿ, ಸೀಮಾ ಹಾನಗಲ್ಲ ಸೇರಿದಂತೆ ಮತ್ತಿತರ ಗಣ್ಯರು, ಉಪನ್ಯಾಸಕರು ಸಿಬ್ಬಂಧಿ ಉಪಸ್ಥಿತರಿದ್ದರು. ಕಾವ್ಯಾ ಕೀರ್ತಿ ಸಂಗಡಿಗರು ಪ್ರಾರ್ಥಿಸಿದರು. ಚಂದ್ರಕಲಾ ಬಿರಾಳ ಸ್ವಾಗತಿಸಿದರು, ಆಶಾ ಪವಾಋ ವಾರ್ಷಿಕ ವರದಿ ವಾದಿಸಿದರು ಸ್ವಾತಿ ಮುದ್ದಾನವರ ನಿರೂಪಿಸಿ ವಂದಿಸಿದರು.