ವಿದ್ಯಾರ್ಥಿಗಳು ಕೌಶಲ್ಯ ಭಾರತದ ಕನಸನ್ನು ನನಸಾಗಿಸಿ: ಮುರುಘೇಂದ್ರಶ್ರೀ
ಬೈಲಹೊಂಗಲ 14: ವಿದ್ಯಾರ್ಥಿಗಳು ಸದಾ ಕ್ರೀಯಾಶೀಲರಾಗಿದ್ದು ಹೆಚ್ಚಿನ ಕೌಶಲ್ಯಭರಿತರಾಗಿ ಕೌಶಲ್ಯ ಭಾರತದ ಕನಸನ್ನು ನನಸಾಗಿಸಬೇಕು ಎಂದು ಮುನವಳ್ಳಿ ಸೋಮಶೇಖರಮಠದ ಮುರುಘೇಂದ್ರ ಸ್ವಾಮಿಜಿ ಹೇಳಿದರು.
ಅವರು ಪಟ್ಟಣದ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಎಸ್.ವಿ.ಸಾಧುನವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2019-21 ನೇ ಸಾಲಿನ ತರಬೇತಿದಾರರ ಪದವಿ ಪ್ರಮಾಣ ಪತ್ರ (ಘಟಿಕೋತ್ಸವ) ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಕುಶಲಕರ್ಮಿಗಳು ಕಲಿಕೆಯೊಂದಿಗೆ ಗಳಿಕೆಗೂ ಅಧ್ಯತೆ ಕೊಟ್ಟು ದೇಶದ ಆರ್ಥಿಕ ಪರಿಸ್ಥಿತಿಯನ್ನು ಗಟ್ಟಿಗೊಳಿಸಬೇಕು. ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಕೈಗಾರಿಕಾ ತರಬೇತಿ ಕೇಂದ್ರವು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಒಳ್ಳೆಯ ತರಬೇತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಶಾಖಾ ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮಿಜಿ ಮಾತನಾಡಿ, ಲಿಂಗೈಕ್ಯ ಗಂಗಾಧರ ಮಹಾಸ್ವಾಮಿಗಳ ಕೃಪಾರ್ಶೀವಾದದಿಂದ ನೀ.ವಿ.ವ. ಸಂಸ್ಥೆಯು ಹೆಮ್ಮರವಾಗಿ ಬೆಳೆದು ಪಟ್ಟಣದ ಸೇರಿದಂತೆ ಸುತ್ತಮುತ್ತ ಇರುವ ಗ್ರಾಮಗಳ ವಿದ್ಯಾರ್ಥಿಗಳಿಗೆ ವರದಾನವಾಗಿದೆ ಎಂದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ.ಬಸವಪ್ರಭು ಹಿರೇಮಠ, ಸಾರಿಗೆ ಸಂಸ್ಥೆಯ ನಿಯಂತ್ರಧಿಕಾರಿ ಪಿ.ವಾಯ್. ನಾಯಕ ಮಾತನಾಡಿ, ತಾಂತ್ರಿಕ ಶಿಕ್ಷಣದಲ್ಲಿ ಕೈಗಾರಿಕಾ ತರಬೇತಿಯು ಒಂದು ಶ್ರೇಷ್ಠವಾದ ತರಬೇತಿ, ಪ್ರತಿಯೊಬ್ಬ ತರಬೇತಿದಾರ ಇಷ್ಟಪಟ್ಟು ಕಾಯಕ ಮಾಡಿದರೆ ಆ ಕಾಯಕದಲ್ಲಿ ಸಫಲತೆಯನ್ನು ಪಡೆಯುವರು ವಿದ್ಯಾರ್ಥಿ ಜೀವನದಲ್ಲಿ ಪದವಿ ಪ್ರಮಾಣ ಪಡೆಯುವುದು ಪ್ರಮುಖ ಘಟ್ಟ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಒತ್ತು ಕೊಟ್ಟು ಕಲಿಯಬೇಕೆಂದರು.
ಸಂಸ್ಥೆಯ ಪ್ರಾಚಾರ್ಯ ಆರ್.ಎ.ಅರಭಾಂವಿ ಅಧ್ಯಕ್ಷತೆ ವಹಿಸಿದ್ದರು.
ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಚೇತನ ಸಾಣಿಕೊಪ್ಪ, ಕಾರ್ಮಿಕ ಮುಖಂಡ ಸುರೇಶ ಯರಡ್ಡಿ, ಕೆ.ಆಯ್.ಮುಜಾವರ, ಕೆ.ಎಸ್.ಹೀರೆಮೇತಿ, ಪಿ.ವಿ.ರಾವೂಳ, ಎಸ್.ಡಿ.ಮಡಿವಾಳರ ಮತ್ತಿತರರು ಇದ್ದರು. ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.