ಸಂಕೇಶ್ವರ

ವಿದ್ಯಾರ್ಥಿಗಳು ಅಪ್ಪಣ್ಣಗೌಡರ ಆದರ್ಶಗಳನ್ನು ಪಾಲಿಸಿ: ಮನು ಬಳಿಗಾರ ಕರೆ

ವಿದ್ಯಾರ್ಥಿಗಳು ಅಪ್ಪಣ್ಣಗೌಡರ ಆದರ್ಶಗಳನ್ನು ಪಾಲಿಸಿ: ಮನು ಬಳಿಗಾರ ಕರೆ

ಸಂಕೇಶ್ವರ 24: ಸಮಾಜದ ಉದ್ಧಾರ ಹಾಗೂ ತಮ್ಮ ಸುಖವನ್ನು ತ್ಯಜಿಸಿ ಧೀವಂಗತ ಅಪ್ಪಾಗೌಡಾ ಪಾಟೀಲರು 7 ಬಾರಿ ಸ್ವಾತಂತ್ರ್ಯ ಸೇನಾನಿ ಸೆರೆಮನೆ ವಾಸ ಮಾಡಿದ ನಂತರ ಸಂಕೇಶ್ವರದಲ್ಲಿ ತಮ್ಮ ಅನುಯಾಯಿಗಳ ಜೊತೆ ಸಭೆ ಸೇರಿ ಸಹಕಾರಿ ತತ್ವದ ಮೇಲೆ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಹುಟ್ಟುಹಾಕಿದರು. ಅಲ್ಪವಿದ್ಯೆಯೇ ಕಲಿತರು ಕೋಟಿ ವಿದೆ್ಯೆಗಿಂತ ಮಿಗಿಲು, ಸಹಕಾರಿ ಮಹರ್ಷಿ ಹಾಗೂ ಶೈಕ್ಷಣಿಕ ಕ್ರಾಂತಿಕಾರಿ ದೇಶದಲ್ಲಿ ಮೊಟ್ಟಮೊದಲನೇಯ ಹುಕ್ಕೇರಿ ತಾಲೂಕಾ ಗ್ರಾಮೀಣ ವಿದ್ಯುತ್ಚಕ್ತಿ ಸಹಕಾರ ಸಂಘವನ್ನು ಸ್ಥಾಪಿಸುವ ಹಿರಿಮೆ ಅವರದು. ಇಲ್ಲಿ ಗಡಿಭಾಗದಲ್ಲಿ ರೈತರ ಮಕ್ಕಳು ಬೇರೆ ಕಡೆಗೆ ಶಿಕ್ಷಣಕ್ಕೆ ಪರದಾಡಬಾರದೆಂದು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡ ರೈತರ ಮಕ್ಕಳಿಗೆ ದಾರೀದೀಪ ಮಾಡಿದ ಇವರ ತ್ಯಾಗ ಎಂದು ಮರೆಯಲು ಸಾಧ್ಯವಿಲ್ಲ ಎಂದು  ನಿಕಟಪೂರ್ವ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ, ಬೆಂಗಳೂರು ಪದಾಧಿಕಾರಿಗಳಾದ ಡಾ. ಮನು ಬಳಿಗಾರ ಹೇಳಿದರು. 

ಅವರು ಲಿಂ. ಅಪ್ಪಣ್ಣಗೌಡ ಪಾಟೀಲರ 48ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸಚ್ಚಾಚಾರಿತ್ರ್ಯ ದಿವಂಗತ ಅಪ್ಪಣ್ಣಗೌಡಾ ಪಾಟೀಲರು ಏಷ್ಯಾ ಖಂಡದಲ್ಲಿಯೇ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯನ್ನು ಹೆಸರನ್ನು ಇತಿಹಾಸ ರೂಪಿಸುವಲ್ಲಿ ದಾಖಲಿಸಿದ್ದಾರೆ ಎಂದು ಡಾ. ಮನು ಬಳಿಗಾರ ಅಭಿಪ್ರಾಯ ಪಟ್ಟರು.  

ಅಪ್ಪಣ್ಣಗೌಡ ಪಾಟೀಲರು ಪ್ರತಿಯೊಬ್ಬ ವಿದ್ಯಾರ್ಥಿಗಳು ಅಪ್ಪಣ್ಣಗೌಡರ ಆದರ್ಶಗಳನ್ನು ತಮ್ಮ ಭವಿಷ್ಯದಲ್ಲಿ ರೂಪಿಸಿಕೊಂಡು ಗುರಿ ಮುಟ್ಟಲು ಕಾಯಾ, ವಾಚಾ, ಮನಸ್ಸು ಇವುಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಮಾತ್ರ ಗುರಿ, ಛಲ ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂದರು. 

 ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ. ಆರ್ ಅಂಬೇಡ್ಕರರವರು ಶಿಕ್ಷಣ, ಸಂಘಟನೆ, ಹೋರಾಟ  ಇವುಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನಲ್ಲಿ ಅಳವಡಿಸಿಕೊಂಡು ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.  

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಎಸ್‌.ಡಿ.ವ್ಹಿ.ಎಸ್ ಸಂಘದ ಕಾರ್ಯಾಧ್ಯಕ್ಷ ಮಾಜಿ ಸಚಿವ ಎ.ಬಿ ಪಾಟೀಲರು ಮಾತನಾಡುತ್ತ ದಿವಂಗತ ಅಪ್ಪಣ್ಣಗೌಡ ಪಾಟೀಲರು ಶಿಕ್ಷಣ ಶಿಲ್ಪಿ ಸಹಕಾರಿ ದಿಗ್ಗಜರು ಮತ್ತು ಶಿಕ್ಷಣ ವಂಚಿತ ಬಡ ಮಕ್ಕಳಿಗೆ ಅವರ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಬೆಳಗಾವಿ ಜಿಲ್ಲೆ ಸಕ್ಕರೆ ನಾಡು ಎಂಬ ಹೆಸರು ಬರಲು ದಿವಂಗತ ಅಪ್ಪಣ್ಣಗೌಡ ಪಾಟೀಲರು ಕಾರಣವೆಂದು ಹೇಳಿದರು.  

ಹಿಮಾಲಯ ಪರ್ವತಕ್ಕೆ ಹೋಗಿ ತಪಸ್ಸು ಮಾಡಿದರೆ ಮೋಕ್ಷ ಪ್ರಾಪ್ತವಾಗುತ್ತದೆ ಎಂದು ತಿಳಿದರೆ ಅದು ತಪ್ಪು ಎಂದು ವಿರಕ್ತಮಠ ಶೇಗುಣಸಿ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ಲಿಂ. ಅಪ್ಪಣ್ಣಗೌಡರ 48ನೇಯ ಪುಣ್ಯ ಸ್ಮರಣೆಯ ಸಾನಿಧ್ಯದಲ್ಲಿ ಮಾತನಾಡುತ್ತಾ ಸಮಾಜಕ್ಕಾಗಿ ನಾಡಿಗಾಗಿ ಪರೋಪಕಾರ, ನಿಸ್ವಾರ್ಥ ಸೇವೆ ಮತ್ತು ಬೇರೆಯವರ ದುಃಖದಲ್ಲಿ ತಾವು ಸಹಭಾಗಿಯಾಗಿ ಅವರ ಕಷ್ಟ ಕಾರ​‍್ಪಣಯಗಳನ್ನು ತಮ್ಮ ಕೈಲಾದ ಮಟ್ಟಿಗೆ ಪರೋಪಕಾರ ಸೇವೆ ಮಾಡಿದರೆ ಪರಮಾತ್ಮನ ಅನುಗ್ರಹ ತಮಗೆ ನಿಶ್ಚಿತವೆಂದು ಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ತಂದೆ-ತಾಯಿ, ಗುರುಗಳನ್ನು ಗೌರವಿಸಬೇಕು. ನ್ಯಾಯ, ನೀತಿ, ಧರ್ಮ ಇವುಗಳ ತತ್ವಗಳನ್ನು ತಾವು ಲಿಂ. ಅಪ್ಪಣ್ಣಗೌಡ ಪಾಟೀಲರಂತಹ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.  

ವಿಶೇಷ ಸಾಧನೆ ಮಾಡಿದ 29 ವಿದ್ಯಾರ್ಥಿಗಳ, ಪ್ರಾಧ್ಯಾಪಕರ ಹಾಗೂ ಸೇವಾ ನಿವೃತ್ತ ಸಿಬ್ಬಂದಿಯವರ ಸನ್ಮಾನ ಏರಿ​‍್ಡಸಲಾಗಿತ್ತು. 

ದುರದುಂಡೀಶ್ವರ ವಿದ್ಯಾ ಸಂವರ್ಧಕ ಸಂಘದಲ್ಲಿ ಸಮಾರಂಭವು ಜರುಗಿತು. ಎಸ್‌.ಡಿ.ವ್ಹಿ.ಎಸ್ ಸಂಘದ ಉಪಾಧ್ಯಕ್ಷ ಜಿ.ಎಸ್ ಇಂಡಿ, ದಯಾನಂದ ಕೇಸ್ತಿ, ಬಸನಗೌಡ ಪಾಟೀಲ, ಕಾಶೀನಾಥ ಶಿರಕೋಳಿ, ಸಂಘದ ಕಾರ್ಯದರ್ಶಿ ಜಿ.ಸಿ ಕೋಟಗಿ, ಸಂಘದ ಆಡಳಿತಾಧಿಕಾರಿ ಪೂಜಾರಿ, ಪ್ರಶಾಂತ ಮನ್ನಿಕೇರಿ, ಎಸ್‌.ಎನ್ ಪಾಟೀಲ, ಎಸ್‌. ಎಂ. ಪಾಟೀಲ, ಅಣ್ಣಗೌಡಾ ಪಾಟೀಲ (ಕೇಸ್ತಿ ಗೌಡರು) ಉಪಾಧ್ಯಕ್ಷರು, ವ್ಯವಸ್ಥಾಪಕ ಸಮಿತಿಯ ಸದಸ್ಯರು, ಅಂಗ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ ವಿದ್ಯಾರ್ಥಿವೃಂದ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ