ಕಿತ್ತೂರು ಸೈನಿಕ ಶಾಲೆಗೆ ವಿದ್ಯಾರ್ಥಿಗಳು ಆಯ್ಕೆ
ಬೈಲಹೊಂಗಲ 28: ಪಟ್ಟಣದ ಬಸವಜ್ಯೋತಿ ನವೋದಯ ಕೋಚಿಂಗ್ ಕ್ಲಾಸಿಸ್‍ನ 11 ಜನ ವಿದ್ಯಾರ್ಥಿನಿಯರು ಕಿತ್ತೂರು ಸೈನಿಕ ಶಾಲೆಗೆ ಪ್ರವೇಶ ಪರೀಕ್ಷೆ ಬರೆದು ಏಕಕಾಲಕ್ಕೆ ಆಯ್ಕೆಯಾಗಿದ್ದು ಎಲ್ಲರ ಗಮನ ಸೆಳೆದಿದೆ.
ವಿದ್ಯಾರ್ಥಿಗಳ, ಪಾಲಕರ ಅಚ್ಚುಮೆಚ್ಚಿನ ನವೋದಯ ತರಬೇತಿ ಶಾಲೆಗಳಲ್ಲಿ ಒಂದಾಗಿರುವ ಶ್ರೀ ಬಸವಜ್ಯೋತಿ ಕ್ಲಾಸಿಸ್ ಸಂಸ್ಥೆಯು ತರಬೇತುದಾರ ಶಿಕ್ಷಕ ಸಂತೋಷ ಹುಣಶೀಕಟ್ಟಿ, ಶಿಕ್ಷಕಿ ಸ್ನೇಹಾ ಹುಣಶೀಕಟ್ಟಿ ನೇತೃತ್ವದಲ್ಲಿ ಮುನ್ನಡೆದಿದ್ದು ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಸಾಧನೆ ತೋರಿ ಮುನ್ನುಗ್ಗುತ್ತಿದೆ.
ಸಂಸ್ಥೆಯ ತರಬೇತುದಾರ ಎಲ್ಲ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಪಾಠ ಬೋಧನೆ ಮಾಡುತ್ತಿರುವುದರಿಂದ ಪ್ರತಿವರ್ಷ ಸಂಸ್ಥೆಯ ಬಹುತೇಕ ವಿದ್ಯಾರ್ಥಿಗಳು ಸೈನಿಕ ಶಾಲೆಗಳಿಗೆ ಆಯ್ಕೆಯಾಗಿ ಸಂಸ್ಥೆಯ ಹಿರಿಮೆ, ಗರಿಮೆ ಹೆಚ್ಚಿಸುತ್ತಿದ್ದಾರೆ.
ಪ್ರತಿ ವರ್ಷ ಸೈನಿಕ ಶಾಲೆಗೆ ಆಯ್ಕೆ: ಐದನೇ ವರ್ಷಾಚರಣೆಯಲ್ಲಿರುವ ಸಂಸ್ಥೆಯ ಮಕ್ಕಳು ಪ್ರತಿ ವರ್ಷ ಸೈನಿಕ ಶಾಲೆಗಳಿಗೆ ಆಯ್ಕೆಯಾಗುತ್ತಿರುವುದು ಗಮನಾರ್ಹವಾಗಿದೆ. ಇದು ರಾಜ್ಯದ ಬೇರೆ, ಬೇರೆ ಜಿಲ್ಲೆ, ತಾಲೂಕುಗಳಲ್ಲಿರುವ ನವೋದಯ ತರಬೇತಿ ಸಂಸ್ಥೆಗಳ ಗಮನ ಸೆಳೆದಿದೆ. ಸಂಸ್ಥೆಯ ಶೇ.100 ರಷ್ಟು ಫಲಿತಾಂಶಕ್ಕೆ ತರಬೇತಿಯೇ ಮೂಲ ಕಾರಣವಾಗಿದೆ. ಓದು, ಬರಹ ತಿಳಿಯದ ಅದೇಷ್ಟೋ ವಿದ್ಯಾರ್ಥಿಗಳನ್ನು ತಿದ್ದಿತೀಡಿ ಪ್ರತಿಭಾನ್ವಿತರನ್ನಾಗಿಸಿರುವ ಕೀರ್ತಿ ಸಂಸ್ಥೆ ತರಬೇತುದಾರರಿಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ಪಾಲಕರು ಹೆಚ್ಚೆಚ್ಚು ತಮ್ಮ ಮಕ್ಕಳನ್ನು ಶ್ರೀಬಸವಜ್ಯೋತಿ ನವೋದಯ ಕೋಚಿಂಗ್ ಕ್ಲಾಸಿಸ್‍ಗೆ ದಾಖಲಿಸುತ್ತಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿನೀಯರು: ಫೆ. 14ರಂದು ಕಿತ್ತೂರು ಸೈನಿಕ ಶಾಲೆಗೆ ನಡೆದಿದ್ದ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರಾದ ಅಕ್ಷರಾ ಆರಾದ್ರಿಮಠ, ಅಮೃತಾ ಸಿದ್ರಾಮನಿ, ನಂದಿತಾ ಕೆಂಚನಗೌಡ್ರ, ಸಂಜನಾ ಅರ್ಬನ್ನವರ, ಶ್ರದ್ಧಾ ಬೆಟಗೇರಿ, ಸೌಜನ್ಯಾ ಬಡಿಗೇರ, ಸೃಜನಾ ಸಾಗರ, ಭಾಗ್ಯಶ್ರೀ ಹುಣಶೀಮರದ, ಅನನ್ಯಾ ಮುನವಳ್ಳಿ, ನಂದಿನಿ ಮುನವಳ್ಳಿ, ಚಿನ್ಮಯಿ ವಾರದ ಪಾಸಾಗಿ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ತರಬೇತುದಾರ ಶಿಕ್ಷಕ ಸಂತೋಷ ಹುಣಶೀಕಟ್ಟಿ, ಶಿಕ್ಷಕಿ ಸ್ನೇಹಾ ಹಣಶೀಕಟ್ಟಿ, ಸಿಬ್ಬಂದಿ ತರಬೇತಿ ನೀಡಿದ್ದರು. ವಿದ್ಯಾರ್ಥಿನೀಯರ ಆಯ್ಕೆಗೆ ಶಿಕ್ಷಕರು, ಪಾಲಕರು, ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಸಂಸ್ಥೆಯು 5ನೇ ವರ್ಷಾಚರಣೆಯಲ್ಲಿರುವುದರಿಂದ ಕನ್ನಡ ಮಾಧ್ಯಮದ 5ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯ ಮೂಲಕ ಮೆರಿಟ್ ಆಧಾರದ ಮೇಲೆ 10 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುವುದು. ಪ್ರವೇಶ ಪರೀಕ್ಷೆಯು ಏ. 18ರಂದು ನಡೆಯಲಿವೆ ಎಂದು ವ್ಯವಸ್ಥಾಪಕ ಮಹಾಂತೇಶ ಗುಂಡ್ಲೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.