ರಾಣೆಬೆನ್ನೂರ

ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಲೋಕದರ್ಶನ ವರದಿ 

ರಾಣೇಬೆನ್ನೂರು ಮೇ 13 ಇಲ್ಲಿನ ಮಾರುತಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶ ಪ್ರಕಟವಾಗಿದ್ದು, ಕಾಲೇಜಿನ ವಿದ್ಯಾರ್ಥಿಗಳು ಎಂದಿನಂತೆ ತಮ್ಮ ಸಾಧನೆ ಮೆರೆದು ಸರ್ಕಾರಿ ಕಾಲೇಜಿಗೆ  ಕೀರ್ತಿ ತಂದಿದ್ದಾರೆ. 2022-23ನೇ ಸಾಲಿನ ಈ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ಮತ್ತು ವಾಣಿಜ್ಯ. ವಿಭಾಗದಲ್ಲಿ ಶೇ.80ರಷ್ಟು, ಹಾಗೂ ಕಲಾ ವಿಭಾಗದಲ್ಲಿ ಶೇ.65, ಫಲಿತಾಂಶ ಬಂದಿದೆ. ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಾದ, ಕಲಾ ವಿಭಾಗದಲ್ಲಿ ಪರಮೇಶ್ ಪಿ ಲಮಾಣಿ ಶೇ.92 ಮಾರುತಿ ಘಾಟಿನವರ ಶೇ.93.33, ಕೀರ್ತಿ ಎನ್ ಕರಬಣ್ಣನವರ್ ಶೇ.86, ಹಾಗೂ ಬಸಮ್ಮ ಎನ್ ಕಾನಬಣ್ಣನವರ ಶೇ.80, ವಿಜ್ಞಾನ ವಿಭಾಗದಲ್ಲಿ ಆಕಾಶ್ ದ್ಯಾವಕ್ಕಳ್ಳವರ ಶೇ.90.83 ವಿಶ್ವನಾಥ ಕುಂಚೂರ ಶೇ.90.33, ವಾಣಿಜ್ಯ ವಿಭಾಗದಲ್ಲಿ ಕಾವ್ಯ ಸಿದ್ದಮ್ಮನವರ ಶೇ.90, ಅವರು ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ಡಾ : ಜಿ.ಬಿ.ಬೆಳವಿಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ