ಬಾದನಹಟ್ಟಿ ಕಾಲೇಜು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ
ಬಳ್ಳಾರಿ ಜೂ 26: ಸುಮಾರು ಮೂರು ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಬಸ್ ಬಿಡುವಂತೆ ಬಳ್ಳಾರಿ ಹಾಗೂ ಕುರುಗೋಡು ಡಿಪೋ ಮ್ಯಾನೇಜರ್ ಗಳಿಗೆ ಮನವಿ ಪತ್ರ ನೀಡಿದರೂ ಸಹ ಡಿಪೋ ಅಧಿಕಾರಿಗಳು ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದರು.
ಅದರಿಂದಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ಸಿನ ಸೌಲಭ್ಯ ವಿಲ್ಲದೆ ಹಲವಾರು ತೊಂದರೆ ಅನುಭವಿಸಿ ಕಾಲೇಜಿಗೆ ಹೋದರೂ ಸಹ ಒಂದು ವಿಷಯ ಅಥವಾ ಎರೆಡು ವಿಷಯಗಳ ಪಾಠವನ್ನು ಕೇಳಲು ಸಾಧ್ಯವಾಗದೇ ಶಿಕ್ಷಕರಿಂದ ಬೌಗುಳನ್ನು ಅನುಭವಿಸಿ ಬಹಳ ತೊಂದರೆಯಲ್ಲಿಅಬ್ಯಾಸ ಮಾಡುವಂತಾಗಿದ್ದು ಈ ಕಾರಣಗಳಿಂದ ಬೇಸತ್ತ ಸುಮಾರು 300 ಕಾಲೇಜು ವಿದ್ಯಾರ್ಥಿಗಳು ಇಂದು ಬೆಳಗ್ಗೆ 8 ಗಂಟೆಗೆ ಬರಬೇಕಾಗಿದ್ದ ಬಸ್ 8.45 ಕ್ಕೆ ಬಂದಿದ್ದರಿಂದ ದಿಢೀರನೆ ಬಸ್ ತಡೆದು ಪ್ರತಿಭಟನೆ ಮಾಡಿದರು.
ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳ ಮತ್ತು ಕುರುಗೋಡು ಪಿ ಎಸ್ ಐ ಜೊತೆಗೆ ಗ್ರಾಮದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಗಾಳಿ ಬಸವರಾಜ ಜಿಲ್ಲಾ ಅಧ್ಯಕ್ಷರು ವಿ ಎಸ್ ಶಿವಶಂಕರ್ ಸುಮಾರು ಅರ್ಧ ಗಂಟೆಗಳ ಕಾಲ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮವಾಗಿ ಬಳ್ಳಾರಿ ಡಿಪೋ ಡಿ ಸಿ ಹತ್ತಿರ ಪೋನ್ ಮುಖಾಂತರ ಮಾತನಾಡಿ ವಿದ್ಯಾರ್ಥಿಗಳ ಬೇಡಿಕೆಯನ್ನು ಅವರಿಗೆ ತಿಳಿಸಿದಾಗ ಮೇಲಾಧಿಕಾರಿಗಳು ಸ್ಪಂದಿಸಿ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬೆಳಿಗ್ಗೆ 8 ಘಂಟೆಗೆ ಮತ್ತು 8.30 ಕ್ಕೆ ಎರಡೂ ಸಮಯದಲ್ಲಿ ಎರಡೂ ಬಸ್ ಗಳನ್ನು ಬಿಡಲು ಇಲ್ಲಿನ ಅಧಿಕಾರಿಗಳಿಗೆ ಸೂಚಿಸಿದರು ಆಗ ಸೂಚನೆಯ ಪ್ರಕಾರ ಇಲ್ಲಿರುವ ಅಧಿಕಾರಿಗಳು ಸಹ ಸ್ಪಂದಿಸಿ ಈ ಕೂಡಲೇ ಬಸ್ ಬಿಡುವುದಾಗಿ ಒಪ್ಪಿ 15 ನಿಮಿಷದಲ್ಲೇ ಮತ್ತೊಂದು ಬಸ್ ನ್ನು ಕರೆಯಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜಿಗೆ ತೆರಳುವಂತೆ ಅನುಕೂಲ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಗ್ರಾಮದ ಪೋಷಕರೂ ಗ್ರಾಮದ ಸಾರ್ವಜನಿಕರು ಪಾಲ್ಗೊಂಡಿದ್ದರು.